ಸ್ಥಳೀಯ ಆಡಳಿತದ ಪ್ರತಿನಿಧಿ ಕೋಳೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಶಿವಮ್ಮ,ಜಿ.ಪೂಜಾರ್ ಇವರಿಗೆ ಜನೇವರಿ-26, 2025 ರಂದು ನವ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ವಿಶೇಷ ಅಥಿತಿಯಾಗಿ ಆಹ್ವಾನ
ಕೊಪ್ಪಳ ಜಿಲ್ಲೆ ಕೊಪ್ಪಳ ತಾಲೂಕಿನ ಕೋಳೂರು ಗ್ರಾಮ ಪಂಚಾಯತಿಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ್ ಮಿಷನ್ ಯೋಜನೆಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಸಾರ್ವಜನಿಕರಿಗೆ ಕುಡಿಯುವ ನೀರನ್ನು 24X7 ನಿರಂತರವಾಗಿ ಸರಬರಾಜು ಮಾಡುವ ಕರ್ನಾಟಕ ರಾಜ್ಯದ 3ನೇ ಗ್ರಾಮ ಹಾಗೂ ಕೊಪ್ಪಳ ಜಿಲ್ಲೆಯ ಪ್ರಥಮ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಿನಾಂಕ:29.11.2024 ರಂದು ಶುಕ್ರವಾರ ದಿವಸ ಗ್ರಾ.ಪಂ.ಅಧ್ಯಕ್ಷರಾದ ಶ್ರೀಮತಿ ಶಿವಮ್ಮ ಜಿ ಪೂಜಾರ್ ಇವರ ಅಧ್ಯಕ್ಷತೆಯಲ್ಲಿ ನಡೆದ
“ಕೋಳೂರು ಗ್ರಾಮವು 24X7 ನೀರು ಸರಬರಾಜು ಘೋಷಣೆ ಸಮಾರಂಭ” ದಲ್ಲಿ ಕೊಪ್ಪಳ ಲೊಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಶ್ರೀ ಕೆ.ರಾಜಶೇಖರ್ ಹಿಟ್ನಾಳ್ ರವರು ಹಾಗೂ ಕೊಪ್ಪಳ ಜಿಲ್ಲಾ ಪಂಚಾಯತಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ್ ರತ್ನಂ ಪಾಂಡೇಯ, ಭಾ.ಆ.ಸೇ., ರವರು ವಿದ್ಯುಕ್ತವಾಗಿ ಘೋಷಣೆ ಮಾಡಿದರು. ಕೋಳೂರು ಗ್ರಾಮದ ಸಾರ್ವಜನಿಕರಿಗೆ 24X7 ರೀತಿಯಲ್ಲಿ ಸಮರ್ಪಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಗ್ರಾಮ ಪಂಚಾಯತಿಯ ಈ ವಿಶೇಷ ಸೇವೆಗಾಗಿ ಕೋಳೂರು ಗ್ರಾಮ ಪಂಚಾಯತಿ ಅಧ್ಯಕ್ಷರನ್ನು ಜನೇವರಿ-26, 2025 ರಂದು ನವ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ವಿಶೇಷ ಅಥಿತಿಯಾಗಿ ಆಹ್ವಾನಿಸಿದ್ದು ವಿಶೇಷ. ಈ ರೀತಿ ವಿಶೇಷ ಸೇವೆ ಸಲ್ಲಿಸುತ್ತಿರುವ ದೇಶಾದ್ಯಂತ ಒಟ್ಟು 750 ಸ್ಥಳೀಯ ಆಡಳಿತದ ಪ್ರತಿನಿಧಿಗಳನ್ನು ಆಹ್ವಾನಿಸಿದ್ದು, ಆ ಪೈಕಿ ರಾಜ್ಯದ 12 ಗ್ರಾಮ ಪಂಚಾಯತಿ ಅಧ್ಯಕ್ಷರುಗಳಿಗೆ ಈ ಸುದೈವ ಒದಗಿ ಬಂದಿದ್ದು, ಅದರಲ್ಲಿ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಕೋಳೂರು ಗ್ರಾಮ ಪಂಚಾಯತಿಯ ಅಧ್ಯಕ್ಷರು ಕೂಡಾ ಒಬ್ಬರಾಗಿದ್ದು ಕೋಳೂರು ಗ್ರಾಮ ಪಂಚಾಯತಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಕೊಪ್ಪಳ ಜಿಲ್ಲೆಯ ಪ್ರದೇಶ ಕಾಂಗ್ರೆಸ್ ಸಮಿತಿ, ಪ.ಜಾ.ವಿಭಾಗದ ಜಿಲ್ಲಾಧ್ಯಕ್ಷರಾದ ಶ್ರೀ ಗಾಳೆಪ್ಪ ಹೆಚ್ ಪೂಜಾರ್, ಗ್ರಾ.ಪಂ. ಸರ್ವ ಸದಸ್ಯರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಶೇಖರಪ್ಪ.ಕ.ಮಡಿವಾಳರ್, ಕಾರ್ಯದರ್ಶಿ ಶ್ರೀ ಮರಿಯಪ್ಪ ಎಂ ಹಾಗೂ ಸಿಬ್ಬಂದಿ ವರ್ಗ ಸಂತಸ ವ್ಯಕ್ತಪಡಿಸಿದ್ದಾರೆ.
More Stories
ಕಿನ್ನಾಳ ಗ್ರಾಮದಲ್ಲಿ ಜನರ ಮನ ಸೆಳೆದ ಸಂಗೀತ ಸಂಭ್ರಮ.
ಅಕ್ಷರ ಜ್ಞಾನಕ್ಕಿಂತ ಅರಿವಿನ ಜ್ಞಾನವೇ ಶಿಕ್ಷಣ : ಗವಿಶ್ರೀ
ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದ ಪಾಯೋನಿಯರ್ ಶಾಲೆಯ ವಿದ್ಯಾರ್ಥಿ ಸಾಕ್ಷಿ ಹುಡೇದ್