23 December 2024

ಸಿಎಂ ಸಿದ್ಧರಾಮಯ್ಯರವರು ರಾಜೀನಾಮೆ ಏಕೆ ಕೊಡಬೇಕು ? ರಾಜ್ಯದ ಜನತೆಗೆ ರಾಜೀನಾಮೆ ಅವಶ್ಯಕತೆ ಇಲ್ಲ : ಪರಶುರಾಮ್ ಕೆರೆಹಳ್ಳಿ

ಸಿಎಂ ಸಿದ್ಧರಾಮಯ್ಯರವರು ರಾಜೀನಾಮೆ ಏಕೆ ಕೊಡಬೇಕು ? ಅವರ ರಾಜೀನಾಮೆ ಅವಶ್ಯಕತೆ ಕರ್ನಾಟಕ ರಾಜ್ಯದ ಜನತೆಗೆ ಇಲ್ಲ:ಪರಶುರಾಮ್ ಕೆರೆಹಳ್ಳಿ 

ಕೊಪ್ಪಳ: ಮಾನ್ಯ ಸಿದ್ದರಾಮಯ್ಯನವರ ಮೇಲೆ ವಿನಾಕಾರಣ ಬಿಜೆಪಿ ದ್ವೇಷದ ರಾಜಕಾರಣ ಮಾಡಿ ಸರಿಯಾಗಿ ಸರ್ಕಾರದಲ್ಲಿ ಆಡಳಿತ ಮಾಡುವುದಕ್ಕೆ ಬಿಡದೆ ತೊಂದರೆಯನ್ನು ಕೊಡುತ್ತದೆ. ಇದು ಖಂಡನಿಯ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಮಾಧ್ಯಮ ವಕ್ತಾರ ಪರಶುರಾಮ ಕೆರೆಹಳ್ಳಿ.

ಈ ರಾಜ್ಯದ ಸಮಸ್ತ ನಾಗರಿಕರಿಗೆ ಮತ್ತು ಎಲ್ಲಾ ಮಹಿಳೆಯರಿಗೆ 5 ಗ್ಯಾರಂಟಿ ಯೋಜನೆಗಳ ನೀಡಿದ ಗ್ಯಾರಂಟಿ ರಾಮಯ್ಯ, ಅನ್ನ ಭಾಗ್ಯವನ್ನು ಕೊಟ್ಟು,ಬಡವರ ಹಸಿವನ್ನು ನೀಗಿಸಿದ ಅನ್ನ ರಾಮಯ್ಯ, ಬಡವರ ಬಂಧು ದೀನದಲಿತರ ನಾಯಕ, ದಲಿತರ,ಹಿಂದುಳಿದ, ಅಲ್ಪಸಂಖ್ಯಾತರ ಅಹಿಂದ ನಾಯಕರಾದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ರಾಜೀನಾಮೆ ಕೊಡುವುದು ಬೇಡ ಮತ್ತು ಅದರ ಅವಶ್ಯಕತೆ ಇಲ್ಲ ಎಂದು ರಾಜ್ಯದ ಜನತೆ ಈಗಾಗಲೇ ಕಂಬನಿ ಮಿಡಿದಿದ್ದಾರೆ, ಹಾಗೂ ರಾಜ್ಯದ ಕಾಂಗ್ರೆಸ್ಸಿನ ಎಲ್ಲಾ ನಾಯಕರುಗಳು 136 ಶಾಸಕರುಗಳು, ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಬೆಂಬಲವಾಗಿ ನಿಂತಿದ್ದಾರೆ.ರಾಜ್ಯದ ಜನತೆ ಯಾವ ಕಾರಣಕ್ಕೂ ರಾಜೀನಾಮೆ ಕೊಡಬೇಡಿ ಎಂದು ಒತ್ತಾಯಿಸಿದ್ದಾರೆ.

ಕೇಂದ್ರದ ಸರ್ಕಾರದ NDA ಸಚಿವರಾದ ಮಾನ್ಯ ಶ್ರೀ ಕುಮಾರಸ್ವಾಮಿ ಅವರು ಯಾವಾಗ ರಾಜೀನಾಮೆ ಕೊಡುತ್ತಾರೆ ?ಕುಮಾರಸ್ವಾಮಿ ಅವರ ಮೇಲೆಯೂ FIR ಆಗ ಬೇಕೆದೆ, ಕಾರಣ ಡಿನೋಟಿಫಿಕೇಷನ್ ಮಾಡಿ ಸರ್ಕಾರದ ಆಸ್ತಿಯನ್ನು ಕಬಳಿಸಿದ್ದಾರೆ, ತಮ್ಮ ಕುಟುಂಬದ ಸದಸ್ಯರಿಗೆ ಸರ್ಕಾರದ ಜಮೀನನ್ನು ಬೇನಾಮಿ ಆಸ್ತಿಯನ್ನು ತೆಗೆದುಕೊಂಡಿದ್ದಾರೆ.

ಮೋದಿಜಿ ರವರು ಚುನಾವಣೆಯ ಬಾಂಡುಗಳನ್ನು ಮೋದಿ ಸರ್ಕಾರ ಕದ್ದಿದ್ದಾರೆ. ಅಂತರಾಷ್ಟ್ರೀಯ ರಸ್ತೆಯ ಬ್ರಿಡ್ಜ್ ಗಳನ್ನು ಮಾಡಿ, ಅಂತಹ ರಸ್ತೆ ಬ್ರಿಡ್ಜ್ ಗಳ ಅನುದಾನವೆಲ್ಲ ಬಿಜೆಪಿ ಸರ್ಕಾರ ಕಬಳಿಸಿದ್ದಾರೆ. ಆದ ಕಾರಣ ದೇಶದ ಪ್ರಧಾನಮಂತ್ರಿಯಾದ ನರೇಂದ್ರ ಮೋದಿಜಿ ಅವರು ರಾಜೀನಾಮೆ ಯಾವಾಗ ಕೊಡುತ್ತಾರೆ? ಮತ್ತು ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ಯಾವಾಗ ? ಇವರ ಮೇಲೆ FIR ಆಗ್ಬೇಕು ಮತ್ತು ಚುನಾವಣೆ ಬಾಂಡುಗಳನ್ನು ಸುಲಿಗೆ ಮಾಡಿದ್ದಾರೆ. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ಎಸ್ ವಿಜಯೇಂದ್ರ ಅವರು ಬಿಜೆಪಿ ಸರ್ಕಾರ ಅವಧಿಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದಾಗ ಚೆಕ್ಕುಗುಳು ಮುಖಾಂತರ ಭ್ರಷ್ಟಾಚಾರ ಮಾಡುತ್ತಿದ್ದರು, ಇವರ ಮೇಲು FIR ಆಗಬೇಕಾಗಿದೆ. ಕೇಂದ್ರದ NDA ಸಂಸದರಾದ ಡಾ ಸುಧಾಕರ್ ಅವರು ರಾಜೀನಾಮೆ ಕೊಡಬೇಕು.

ಇವರು ಕೋವಿಡ್ ಹಗರಣದಲ್ಲಿ ಭಾಗಿಯಾಗಿದ್ದಾರೆ. ಈಗಾಗಲೇ ತನಿಖೆ ಪ್ರಾರಂಭವಾಗಿದೆ.

21 ಹಗರಣಗಳಲ್ಲಿ ಬಿಜೆಪಿ ನಾಯಕರುಗಳ ಮೇಲೆ ತನಿಖೆ ನಡೆಯಬೇಕಾಗಿದೆ. ಎಂದು ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷರಾದ ಗಾಳೆಪ್ಪ ಎಚ್ ಪೂಜಾರ್ ರವರು ಹಾಗೂ ಕೊಪ್ಪಳ ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.