ಕಿನ್ನಾಳ ಗ್ರಾಮದಲ್ಲಿ ಬಾಲಕಿ ಅನುಶ್ರೀ ಕೊಲೆಆರೋಪಿ ಸಿದ್ದಲಿಂಗಯ್ಯನನ್ನು ಬಂದಿಸಿದ ಪೊಲೀಸರು!!
- ಯುವ ಜಾಗೃತಿ ನ್ಯೂಸ್ ಕೊಪ್ಪಳ : ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಎರಡು ತಿಂಗಳ ಹಿಂದೆ ನಡೆದಿದ್ದ ಬಾಲಕಿಯ ಕೊಲೆ ಅಚ್ಚರಿ ಮೂಡಿಸಿತ್ತು, ಸುದೀರ್ಘ ಎರಡು ತಿಂಗಳ ತನಕೆಯ ನಂತರ ಕೊಪ್ಪಳ ಪೊಲೀಸರು ಅಪರಾಧಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಯಾಗಿದ್ದ ಬಾಲಕಿ ಅನುಶ್ರೀ
ಕಿನ್ನಾಳ ಗ್ರಾಮದ ರಾಘವೇಂದ್ರ ಮಡಿವಾಳ ಅವರ ಮಗಳಾದ ಅನುಶ್ರೀ ಅನ್ನುವ ಬಾಲಕಿಯನ್ನು ಧಾರುಣವಾಗಿ ಹತ್ಯೆ ಮಾಡಲಾಗಿತ್ತು, ಪೊಲೀಸರಿಗೆ ತಲೆ ಬಿಸಿಯಾಗಿದ್ದ ತನಿಖೆ ಕೊನೆಗೂ ಅಂತ್ಯಗೊಂಡಿದೆ ಅಂತ ಹೇಳಬಹುದು ನಿನ್ನೆ ಅಪರಾಧಿಯನ್ನು ಬಂಧಿಸಿ ಎಡೆಮುರಿ ಕಟ್ಟಿದ್ದಾರೆ ಕೊಪ್ಪಳದ ಪೊಲೀಸರು.
ಕಿನ್ನಾಳ ಗ್ರಾಮದ ವ್ಯಕ್ತಿ ಸಿದ್ದಲಿಂಗಯ್ಯ ಹಿರೇಮಠ್ ಅನ್ನುವ ವ್ಯಕ್ತಿ ಬಾಲಕಿಯನ್ನು ಗುಟ್ಕಾ ತರಲು ಅಂಗಡಿಗೆ ಹೋಗಲು ಹೇಳಿದ್ದಾನೆ, ಆದರೆ ಬಾಲಕಿ ಹೋಗದೆ ಇದ್ದದ್ದಕ್ಕೆ ಕೋಪಗೊಂಡ ವ್ಯಕ್ತಿ ಬಾಲಕಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಕೊಲೆ ಮಾಡಿದ ವ್ಯಕ್ತಿ
ಸುಳಿವೆ ಇಲ್ಲದ ಪ್ರಕರಣ ಭೇದಿಸಲು ಶ್ರೀಮತಿ ಯಶೋಧಾ ವಂಟಗೋಡಿ ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಕೊಪ್ಪಳ, ಶ್ರೀ ಹೇಮಂತ್ಕುಮಾರ ಆರ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೊಪ್ಪಳ, ಶ್ರೀ ಮುತ್ತಣ ಸರವಗೋಳ ಡಿ.ಎಸ್.ಪಿ ಕೊಪ್ಪಳ ಉಪ-ವಿಭಾಗ, ರವರ ಮಾರ್ಗದರ್ಶನದಲ್ಲಿ ಶ್ರೀ ಆಂಜನೇಯ ಡಿ.ಎಸ್ ಪಿ.ಐ ಮಹಿಳಾ ಠಾಣೆ ಕೊಪ್ಪಳ ರವರ ನೇತೃತ್ವದಲ್ಲಿ ಶ್ರೀ ಮೌನೇಶ್ವರ ಪಾಟೀಲ್ ಸಿಪಿಐ ಯಲಬುರ್ಗಾ ವೃತ್ತ, ಶ್ರೀ ಸುರೇಶ ಡಿ. ಸಿಪಿಐ ಕೊಪ್ಪಳ ಗ್ರಾಮೀಣ ವೃತ್ತ, ಶ್ರೀ ಡಾಕೇಶ ಪಿ.ಎಸ್.ಐ ಕೊಪ್ಪಳ ಗ್ರಾಮೀಣ ಠಾಣೆ ಮತ್ತು ಸಿಬ್ಬಂದಿಯವರಾದ ವೆಂಕಟೇಶ ಎಎಸ್ಐ, ಸಿಹೆಚ್ಸಿ ನಾಗರಾಜ, ಖಾಜಾಸಾಬ, ಚಂದುನಾಯಕ, ನಿಂಗಪ್ಪ ಹೆಬ್ಬಾಳ, ಮೆಹಬೂಬ, ದೇವೆಂದ್ರಪ್ಪ, ಮಹೇಶ ಸಜ್ಜನ, ಚಿರಂಜೀವಿ, ವಿಶ್ವನಾಥ, ಶಿವಕುಮಾರ ಕೊಟೇಶ, ಅಶೋಕ, ರಿಜ್ವಾನ ಮತ್ತು ಸಿಪಿಸಿ ಹನಮಗೌಡ, ಕನಕರಾಯ, ಉಮೇಶ, ಮಹ್ಮದರಫಿ, ಪ್ರಸಾದ, ಈರೇಶ, ಚಂದ್ರಶೇಖರ, ಮಲ್ಲಪ್ಪ, ಆಶ್ರಫ್ ರವರನ್ನು ಒಳಗೊಂಡ ವಿಶೇಷ ಪತ್ತೆ ತಂಡವನ್ನು ರಚನೆ ಮಾಡಲಾಗಿತ್ತು.
ಕೊಲೆ ಪ್ರಕರಣ ಬೇದಿಸಿದ ಕೊಪ್ಪಳ ಪೊಲೀಸ್ ತಂಡ
ಈ ರೀತಿಯಲ್ಲಿ ರಚಿಸಿದ ವಿಶೇಷ ಪತ್ತೆ ತಂಡದಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಯವರು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಕೊಲೆ ಮಾಡಿದ ಆಪಾದಿತರ ಸುಳಿವೇ ಇಲ್ಲದ ಮತ್ತು ಅತೀ ಸೂಕ್ಷ್ಮ ಸ್ವರೂಪದ ಪ್ರಕರಣದಲ್ಲಿ ಚಾಣಾಕ್ಷತೆಯಿಂದ ಮಾಹಿತಿಯನ್ನು ಸಂಗ್ರಹಿಸಿ ಅಪಾದಿತ ಸಿದ್ದಲಿಂಗಯ್ಯ ತಂದೆ ಗುರುಸ್ವಾಮಿ ನಾಯ್ಕಲ್ ವಯ:51 ವರ್ಷ, ಉ:ಮೆಕ್ಯಾನಿಕ್ ಕೆಲಸ ಸಾ: ಕಿನ್ನಾಳ ಈತನನ್ನು ಇಂದು ದಿನಾಂಕ-16.06.2024 ರಂದು ಬೆಳೆಗ್ಗೆ ಕಿನ್ನಾಳ ಗ್ರಾಮದಲ್ಲಿ ವಶಕ್ಕೆ ಪಡೆದು ವಿಚಾರಿಸಿದಾಗ, ಕು.ಅನುಶ್ರೀ ಈಕೆಯು ತನಗೆ ಗುಟ್ಕಾ ತಂದು ಕೊಡಲಿಲ್ಲ ಎಂಬ ಸಿಟ್ಟಿನಿಂದ ಕೋಪಗೊಂಡು ಕೋಲಿನಿಂದ ತಲೆಗೆ ಜೋರಾಗಿ ಹೊಡೆದು ಕೊಲೆ ಮಾಡಿರುವದಾಗಿ ತಪ್ರೊಪ್ಪಿಕೊಂಡಿದ್ದು ಇರುತ್ತದೆ. ಆಪಾದಿತನಿಂದ ಕೃತ್ಯಕ್ಕೆ ಉಪಯೋಗಿಸಿದ ಕಟ್ಟಿಗೆ (ಕೋಲು), ಮುಚ್ಚಿಟ್ಟಿದ್ದ ಮೃತಳ ಚಪ್ಪಲ್ ಮತ್ತು ಮೃತದೇಹದ ಚೀಲ ಕಾಣದಂತೆ ಅಡ್ಡಲಾಗಿ ಇಟ್ಟಿದ್ದ ನೀರಿನ ಸ್ಟೀಲ್ ಟ್ಯಾಂಕ್ ವಶಪಡಿಸಿಕೊಂಡಿದ್ದು, ಆಪಾದಿತನನ್ನು ದಸ್ತಗಿರಿ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ.
ಏಳು ವರ್ಷದ ಅಪ್ರಾಪ್ತ ಬಾಲಕಿ ಕೊಲೆಯಾಗಿ ಹೆಚ್ಚಿನ ಮಟ್ಟದಲ್ಲಿ ಸುದ್ದಿಯಾಗಿದ್ದ ಮತ್ತು ಪತ್ತೆಗೆ ಸವಾಲಾಕಿದ್ದ ಅತೀ ಸೂಕ್ಷ್ಮ ಕೊಲೆ ಪ್ರಕರಣವನ್ನು ಪತ್ತೆ ಮಾಡಿ ಆಪಾದಿತನನ್ನು ಬಂಧಿಸಿ ಕೊಲೆ ಪ್ರಕರಣ ಭೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರು ಪ್ರಶಂಸನೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿರುತ್ತಾರೆ.
More Stories
ಸಹಕಾರ ಸಂಘಗಳ ನೌಕರರಿಂದ ಸಹಾಯ ಹಸ್ತ: ಎನ್.ಸತ್ಯನಾರಾಯಣ
ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಸಂಭ್ರಮ ಸಡಗರದಿಂದ ರಂಜಾನ್ ಆಚರಣೆ..!
ಕುದರಿಮೋತಿ ಪ್ರೀಮಿಯರ್ ಲೀಗ್(KPL)ಗೆ ಚಾಲನೆ