4 April 2025

ಮೈನಹಳ್ಳಿ ಶ್ರೀ ಶಿವಶರಣಿ ಬುಡ್ಡಮ್ಮ ದೇವಿ ಜಾತ್ರಾ ಮಹೋತ್ಸವ

* ಮೈನಹಳ್ಳಿ ಶ್ರೀ ಶಿವಶರಣಿ ಬುಡ್ಡಮ್ಮ ದೇವಿ ಜಾತ್ರಾ ಮಹೋತ್ಸವ*

ಕೊಪ್ಪಳ: ಕೊಪ್ಪಳ ತಾಲೂಕಿನ ಮೈನಹಳ್ಳಿ ಗ್ರಾಮದ ಶ್ರೀ ಶಿವಶರಣಿ ಬುಡ್ಡಮ್ಮ ದೇವಿ ಜಾತ್ರಾ ಮಹೋತ್ಸವ ಹಾಗೂ ಮಹಾೋತ್ಸವ ಇದೇ ದಿನಾಂಕ 26.5.2024 ರಿಂದ 29.05.2024ರ ವರೆಗೆ ಜಾತ್ರಾ ಮಹೋತ್ಸವ. 

 ದಿನಾಂಕ: 26-5 -2024 ರವಿವಾರ ರಾತ್ರಿ 9:30ಕ್ಕೆ ಲಘುರಥೋತ್ಸವ ಜರುಗುತ್ತದೆ ದಿನಾಂಕ 27.05.2024 ಸೋಮವಾರ ಸಾಯಂಕಾಲ ಮಹಾರಥೋತ್ಸವ ನಡೆಯಲಿದೆ ದಿ. 28.05.2024 ಮಂಗಳವಾರದಂದು ಶ್ರೀ ಶಿವಶರಣೆ ಬುಡ್ಡಮ್ಮ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ರಾತ್ರಿ 8:00 ಗಂಟೆಗೆ ಶ್ರೀ ಮೈಲಾರಲಿಂಗೇಶ್ವರ ಮತ್ತು ಗಂಗಿ ಮಾಳಮ್ಮನವರ ವಿವಾಹ ಕಾರ್ಯಕ್ರಮ ತದನಂತರ ರಾತ್ರಿ ಶ್ರೀ ಗದುಗಿನ ಪಂಡಿತ್ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶ್ರೀ ವೇದಮೂರ್ತಿ ಬೆಟ್ಟದಯ್ಯ ಶಾಸ್ತ್ರಿಗಳಿಂದ ಶಿವ ಕೀರ್ತನ ಹಾಗೂ ಹಾಸ್ಯ ರಸಮಂಜಾರಿ-2024 ದಿನಾಂಕ 29-2024. ಸಾಯಂಕಾಲ 5:30ಕ್ಕೆ ಕಡುಬಿನ ಕಾಳಗ ಕಾರ್ಯಕ್ರಮ ಇರುತ್ತದೆ

 27-5-2024 ಸೋಮವಾರ ಮಹಾ ರಥೋತ್ಸವ ದಿನದಂದು ಶ್ರೀ ಶಿವಶರಣೆ ಬುಡ್ಡಮ್ಮ ದೇವಿ ಕಲಾ ನಾಟ್ಯ ಸಂಘ ಮೈನಹಳ್ಳಿ ಇವರಿಂದ ಅಗಡಿಯವರ ಬಂಧುಗಳ ಬಯಲು ಜಾಗದಲ್ಲಿ ಶ್ರೀ ಬನಶಂಕರಿ ಡ್ರಾಮಾ ಸೀನ್ಸ್ ಬೇವೂರು ತಯಾರಿಸಿದ ಇವರು ಹಾಕಿದ ಭವ್ಯರಂಗ ಸಜ್ಜೆಕೆಯಲ್ಲಿ ಶ್ರೀ ಗುರು ಪಂಚಾಕ್ಷರಿ ವಾದ್ಯವೃಂದ ಶ್ರೀ ಗವಿಶ್ ಹಾಗೂ ಸಂಗಡಿಗರು ಸುಂದರ ಸಂಗೀತ ನಿರ್ದೇಶನದ ಸಂಗಡಿಗರು ಸುಂದರ ಸಂಗೀತ ನಿರ್ದೇಶನದಲ್ಲಿ ವಿರಚಿತ ಧನಿಕರ ದೌರ್ಜನ್ಯ ಅರ್ಥಾತ್ ಅಣ್ಣನ ಕಣ್ಣೀರು ಎಂಬ ಸುಂದರ ಕ್ರಾಂತಿಕಾರಿ ಸಾಮಾಜಿಕ ನಾಟಕ ರಾತ್ರಿ 10:30 ಕ್ಕೆ ಪ್ರದರ್ಶನಗೊಳ್ಳಲಿದೆ 

  ಶಿವಶರಣೆ ಬುಡ್ಡಮ್ಮ ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ದೇವಿ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ಶಿವಶರಣೆ ಬುಡ್ಡಮ್ಮ ದೇವಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ