*ಹಲಗೇರಿ ಕೂಸಿನ ಮನೆಗೆ ಲಂಡನ್ ಕಿಂಗ್ಸ್ ಕಾಲೇಜು ಸಂಶೋಧನಾ ತಂಡ ಭೇಟಿ*
*ಮಕ್ಕಳ ಹಾಜರಾತಿ, ಆಹಾರ ವಿತರಣೆ ಕುರಿತು ಮಾಹಿತಿ ಸಂಗ್ರಹ*
*ಕೊಪ್ಪಳ:-* ಜಿಲ್ಲೆಯಲ್ಲಿರುವ ಕೂಸಿನ ಮನೆ ಕಾರ್ಯನಿರ್ವಹಣೆ ಕುರಿತು *ಲಂಡನ್ ಕಿಂಗ್ಸ್ ಕಾಲೇಜು ಸಂಶೋಧನಾ ತಂಡವು ದಿನಾಂಕ:08-04-2025ರಂದು ಕೊಪ್ಪಳ ತಾಲೂಕಿನ ಹಲಗೇರಿ ಕೂಸಿನ ಮನೆಗೆ ಜೊಸೆಫ್ ಪೌಲ್ ಮತ್ತು ತಂಡ* ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.
ಕೂಸಿನ ಮನೆಯಲ್ಲಿಯ ಮಕ್ಕಳ ದಾಖಲಾತಿ ರಜಿಸ್ಟರ್ ಪರಿಶೀಲಿಸಿ ಕೇರ್ ಟೆಕರ್ ಗಳಿಗೆ ಹಣ ಪಾವತಿಯಾಗಿರುವ ಬಗ್ಗೆ ಸಂವಾದ ನಡೆಸಿತು. ನಂತರ ಪ್ರತಿ ದಿನ ಮಕ್ಕಳಿಗೆ ಮುಂಜಾನೆ ಮತ್ತು ಮಧ್ಯಾಹ್ನ ಆಹಾರ ವಿತರಣೆ ಕುರಿತು ಪಂಚಾಯತ ಅಭಿವೃದ್ದಿ ಅಧಿಕಾರಿ ಹಾಗು ಕೇರ್ ಟೆಕರ್ಸ್ ವಿವರಿಸಿದರು. ಕೂಸಿನ ಮನೆಗೆ ಬರುವ ಮಕ್ಕಳ ದಾಖಲಾತಿ, ಮಕ್ಕಳ ಆರೈಕೆ, ಪೌಷ್ಠಿಕ ಮತ್ತು ಅಪೌಷ್ಠಿಕ ಮಕ್ಕಳಿಗೆ ಮೆನು ಚಾರ್ಟ ಪ್ರಕಾರ ಆಹಾರ ವಿತರಣೆ, ಮಕ್ಕಳ ಆರೋಗ್ಯ ತಪಾಸಣೆ ಮತ್ತು ಮಕ್ಕಳ ಆರೈಕೆದಾರರ ವೇತನಕ್ಕೆ ಸಂಬಂಧಿಸಿದ ವಹಿಗಳನ್ನು ಪರಿಶೀಲಿಸಿದರು. ಪಾಲಕರು ತಮ್ಮ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಟ್ಟು ಬರುತ್ತಿರುವದರಿಂದ ಆಗುತ್ತಿರುವ ಅನುಕೂಲತೆ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೂಲಿ ಕೆಲಸಕ್ಕೆ ಪಾಲಕರು ಹೋಗುತ್ತಿರುವದರಿಂದ ಮಕ್ಕಳ ಆರೈಕೆಗೆ ಕೂಸಿನ ಮನೆ ಬಹಳಷ್ಟು ಅನುಕೂಲವಾಗಿದೆ ಎಂದು ಪಾಲಕರಾದ ಸುನಂದಾ ವಿವರಿಸಿ ಸದರಿ ಕೇಂದ್ರದಲ್ಲಿ ಮಕ್ಕಳಿಗೆ ಹಾಲು, ಮೊಟ್ಟೆ, ಬಾಳೆಹಣ್ಣು, ಹೆಸರು ಬೆಳೆ ಪಾಯಸ, ರಾಗಿ ಗಂಜಿ, ಉಪ್ಪಿಟ್ಟು ಸೇವನೆ ಮಾಡುತ್ತಿರುವದರಿಂದ ಮಕ್ಕಳಲ್ಲಿ ಅಪೌಷ್ಠಿಕ ಕೊರತೆ ನಿಗಿಸುತ್ತದೆ ಎಂಬ ಮಾಹಿತಿ ನೀಡಿದರು. ಪ್ರತಿ ತಿಂಗಳಿಗೊಮ್ಮೆ ಕೂಸಿನ ಮನೆಯ ಮಕ್ಕಳ ಆರೋಗ್ಯ ತಪಾಸಣೆ ಜರುಗಿಸಿ ಅವರ ಬೆಳವಣಿಗೆ,ತೂಕ ಇತ್ಯಾದಿ ಮಾಹಿತಿಯನ್ನು ರಜಿಸ್ಟರ್ ನಲ್ಲಿ ದಾಖಲಿಸುತ್ತಿರುವದರಿಂದ ಪ್ರತಿ ಮಗುವಿನ ಆರೋಗ್ಯದ ಖಚಿತಪಡಿಸಿಕೊಳ್ಳಲು ಅನುಕೂಲವಾಗುತ್ತಿರುವ ಕುರಿತು ಪಂಚಾಯತ ಅಭಿವೃದ್ದಿ ಅಧಿಕಾರಿ ವಿವರಿಸಿದರು. ಸಂಶೋಧನಾ ತಂಡವು ಹಲಗೇರಿ ಕೂಸಿನ ಮನೆ ಕಾರ್ಯನಿರ್ವಹಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತು.
ಈ ಸಂದರ್ಭದಲ್ಲಿ *ಗ್ರಾಮ ಪಂಚಾಯತಿ ಅಧ್ಯಕ್ಷರಾದ ಯಲ್ಲಪ್ಪ ಓಜನಹಳ್ಳಿ, ಪಂಚಾಯತ ಅಭಿವೃದ್ದಿ ಅಧಿಕಾರಿ ಅಶೋಕ ರಾಂಪುರ, ಕಾರ್ಯದರ್ಶಿ ದೊಡ್ಡನಗೌಡ ಪಾಟೀಲ್, ಗ್ರಾಮ ಪಂಚಾಯತ ಸದಸ್ಯರಾದ ಕಳಕನಗೌಡ ಹಳೆಮನಿ, ಮಕ್ಕಳ ಆರೈಕೆದಾರರಾದ ಭರಮವ್ವ ಹರಿಜನ, ಅನ್ನಪೂರ್ಣ ಸಂಜಿವಗೌಡ್ರ,ಡಿಇಒ ಪಂಚಾಕ್ಷರಿ,ಮಾಲತೇಶ* ಹಾಜರಿದ್ದರು.
More Stories
ಸಹಕಾರ ಸಂಘಗಳ ನೌಕರರಿಂದ ಸಹಾಯ ಹಸ್ತ: ಎನ್.ಸತ್ಯನಾರಾಯಣ
ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಸಂಭ್ರಮ ಸಡಗರದಿಂದ ರಂಜಾನ್ ಆಚರಣೆ..!
ಕುದರಿಮೋತಿ ಪ್ರೀಮಿಯರ್ ಲೀಗ್(KPL)ಗೆ ಚಾಲನೆ