3 April 2025

ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಸಂಭ್ರಮ ಸಡಗರದಿಂದ ರಂಜಾನ್ ಆಚರಣೆ..!

ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಸಂಭ್ರಮ ಸಡಗರದಿಂದ ರಂಜಾನ್ ಆಚರಣೆ..!

ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ಮುಸ್ಲಿಂ ಬಾಂಧವರು ಸಡಗರ ಹಾಗೂ ಸಂಭ್ರಮದಿಂದ ಈದ್ ಉಲ್ ಫೀತ್ರ ರಂಜಾನ್ ಹಬ್ಬವನ್ನು ಆಚರಿಸಿದರು.

ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ಮುಸ್ಲಿಂಭಾಂದವರು ಬೆಳಿಗ್ಗೆ 8.30.ಕ್ಕೆ ಗ್ರಾಮದ ಜಾಮಿಯಾ ಮಸೀದಿ ಹತ್ತಿರ ಎಲ್ಲರೂ ಸೇರಿಕೊಂಡು, ಅಲ್ಲಿಂದ ದೇವರ ನಾಮ ಹೇಳುತ್ತಾ. ಬಸವೇಶ್ವರ ವೃತ್ತದ ಮಾರ್ಗವಾಗಿ ಅಂಬೇಡ್ಕರ್ ಸರ್ಕಲ್ ದಿಂದ ಈದ್ಗ ಮೈದಾನಕ್ಕೆ ಆಗಮಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದರು.ನಂತರ ಸಮುದಾಯದ ಪ್ರತಿಭಾವಂತೆ ವಿದ್ಯಾರ್ಥಿನಿ , ಕುಮಾರಿ, ಅಂಜುಮ್ ಖಾಜಾಸಾಬ ಹೀರಾಳ,ಇವರು ಫಿನಿಕ್ಸ್ ಕಾಲೇಜ್. ವಿಜಯನಗರ,ಬಿಎಸ್ಸಿ -ಬಿಎಡ್, 2024/25-ನೇ ಸಾಲಿನಲ್ಲಿ 98% ಅಂಕಗಳನ್ನು ಪಡೆದು ವಿಜಯನಗರ ಜಿಲ್ಲೆಗೆ ಪ್ರಥಮ ಸ್ಥಾನಪಡೆದಿರುವ ಕುಮಾರಿ ಅಂಜುಮ್, ಅವರ ಪೋಷಕರಿಗೆ ಸನ್ಮಾನಿಸಲಾಯಿತು.

ಮತ್ತು ಗ್ರಾಮದಲ್ಲಿ ಯಾವದೇ ಸಮಾಜದಿಂದ ಶುಭ ಸಮಾರಂಭವಾದರು ಕರೆದರೂ ಅಥವಾ ಕರೆಯದಿದ್ದರೂ ಹೋಗಿ ಎಲ್ಲರ ಜೊತೆಗೆ ಬೆರೆತು ತಮ್ಮ ಕೈಲಾದಷ್ಟು ಸೇವೆ ಮಾಡುವಂತ ಗ್ರಾಮದಲ್ಲಿ ಹೆಸರು ವಾಸಿಯಾಗಿರುವ ಯುವಕ, ಮೈನು ಮುಧೋಳ, ಇವರನ್ನು ಕೂಡ ಸನ್ಮಾನಿಸಲಾಯಿತು.ನಮಾಜ್ ಮುಗಿದನಂತರ ಹಿಂದಿನ ಸಂಪ್ರದಾಯದಂತೆ ಪ್ರತಿ ವರ್ಷ ಕಿನ್ನಾಳದ ದೇಸಾಯಿಯವರ ಮನೆಗೆ ಎಲ್ಲರೂ ಹೋಗಿ ಶುಭಾಶಯ ಕೋರುವುದು ಸಂಪ್ರದಾಯವಾಗಿದೆ.ಈ ಸಂಧರ್ಭದಲ್ಲಿ ಕಿನ್ನಾಳ ಜಾಮಿಯಾ ಮಜೀದ್ ಕಮಿಟಿಯ ಅಧ್ಯಕ್ಷರಾದ ಮಾಬುಸಾಬ ಹೀರಾಳ, ಉಪಾಧ್ಯಕ್ಷರಾದ ಕಾಸಿಂಸಾಬ್, ತಟಗಾರ ಖಾಜಾಸಾಬ್ ಹೀರಾಳ, ಸುಬಾನಸಾಬ್ ಹೀರಾಳ್, ಶರೀಫಸಾಬ ಹೀರಾಳ್, ಬಾಷುಸಾಬ್ ಹಿರೇಮನಿ,ಮೈಬು ಬಾದಾಮಿ, ಇಸುಫ್ ಬೈ, ಉಸ್ಮಾನ್‌ ಹಿರೇಮನಿ, ಮೈನು ಹಿರೇಮನಿ, ಇಬ್ರಾಹಿಂ ತಟಗಾರ,ರಫೀಕ್ ಇಟಗಿ,ರಫೀಕ ನೀರಲಗಿ,ನೌಜವಾನ್‌ ಕಮಿಟಿ ಸದಸ್ಯರು ಸೇರಿದಂತೆ ಇತರರು ಇದ್ದರು.