12 April 2025

ಬಸ್ ನಿಲ್ದಾಣದಲ್ಲಿ ವಸೂಲಿಗೆ ಇಳಿದ ಪಾರ್ಕಿಂಗ್ ಮಾಲೀಕರು

ಕ್ರಮಕ್ಕೆ ಮುಂದಾಗದ ವಿಭಾಗೀಯ ನಿಯಂತ್ರಣ ಅಧಿಕಾರಿಗಳು

ಕೊಪ್ಪಳ : ನಗರದ ಬಸ್ ನಿಲ್ದಾಣದಲ್ಲಿರುವ ಪಾರ್ಕಿಂಗ್ ಮಾಲೀಕರಿಗೆ ಹೇಳೋರಿಲ್ಲ ಕೇಳೋರಿಲ್ಲ ಆದಂತಿದೆ ಯಾವುದೇ ಪಾರ್ಕಿಂಗ್ ನಲ್ಲೂ ಸಹ ಟೆಂಡರ್ ಯಾರಿಗೆ ಆಗಿದೆ ಅದರ ಮಾಲೀಕರು ಯಾರು ಯಾವ ಯಾವ ವಾಹನಕ್ಕೆ ಎಷ್ಟು ದರ ಎಂದು ನಿಗದಿತ ಬೋರ್ಡ್ ಗಳನ್ನ ಹಾಕಿರುತ್ತಾರೆ.

ಆದರೆ ಅದಕ್ಕೆಲ್ಲ ವಿರುದ್ಧದಂತೆ ನಮ್ಮ ಕೊಪ್ಪಳದ ಪಾರ್ಕಿಂಗ್ ವ್ಯವಸ್ಥೆಯಾಗಿದೆ ಯಾವುದೇ ದ್ವಿಚಕ್ರ ವಾಹನ ಅಲ್ಲಿ ಬಿಟ್ಟು ಹೋದಾಗ ಅದಕ್ಕೆ ಮನಬಂದಂತೆ ವಸೂಲಿಗೆ ಇಳಿದಿದ್ದಾರೆ ಎಂದು ಕನಕಪ್ಪ ತಳವಾರ್ ಸಾಮಾಜಿಕ ಕಾರ್ಯಕರ್ತ ಆಪಾದಿಸಿದ್ದಾರೆ ಇತ್ತೀಚಿಗೆ ಅವರ ದ್ವಿಚಕ್ರ ವಾಹನವನ್ನು ಬಸ್ ನಿಲ್ದಾಣದಲ್ಲಿ ಇರುವ ಪಾರ್ಕಿಂಗ್ ನಲ್ಲಿ ನಾಲ್ಕು ಗಂಟೆಗಳ ಕಾಲ ವಾಹನ ಪಾರ್ಕ್ ಮಾಡಿದ್ದಕ್ಕೆ ಅವರಿಗೆ ರೂ. 20 ಶುಲ್ಕದ ರಸೀದಿ ನೀಡಿದ್ದಾರೆ ಹಾಗೂ ಇನ್ನಿತರರು ತಮ್ಮ ದ್ವಿಚಕ್ರ ವಾಹನ ಬಿಟ್ಟು ಹೋದಾಗ ಅವರಲ್ಲಿ ಗಂಟೆಗೂ ಮೀರಿದ ಹಣ ಪಡೆದುಕೊಂಡಿದ್ದಾರೆ ಇದರ ಬಗ್ಗೆ ಧ್ವನಿ ಎತ್ತಿದ ಸಾಮಾಜಿಕ ಕಾರ್ಯಕರ್ತ ಕನಕಪ್ಪ ತಳವಾರ್ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಕೊಪ್ಪಳ ಇವರಿಗೆ ಜನವರಿ ಮೂರರಂದು ಮನವಿ ಪತ್ರ ಸಲ್ಲಿಸಿದರು ಅದಕ್ಕೆ ಕ್ರಮ ತೆಗೆದುಕೊಳ್ಳಬೇಕಾದ ವಿಭಾಗಿಯ ನಿಯಂತ್ರಣ ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಂತಾಗಿದೆ ಸಾರಿಗೆ ಸಚಿವರೆ ಇತ್ತ ಕಡೆ ಗಮನ ಕೊಡಿ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ ಮುಂದಿನ ದಿನಗಳಲ್ಲಿ ವಿಭಾಗಿಯ ನಿಯಂತ್ರಣ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.