ಅಲ್ಲಲ್ಲಿ ಸ್ವಾಗತ ಕಮಾನು, ಧ್ವಜಗಳು
ಮುಖ್ಯ ಕಾರ್ಯಕ್ರಮದ ವೇದಿಕೆ ಸಿದ್ಧ
==
ಸೆ.15ರಂದು ಮಾನವ ಸರಪಳಿ ಕಾರ್ಯಕ್ರಮ: ಕೊಪ್ಪಳ ಜಿಲ್ಲೆಯಲ್ಲಿ ಹಬ್ಬದ ಸಂಭ್ರಮ
==
ಕೊಪ್ಪಳ ಸೆಪ್ಟೆಂಬರ್ 14 : ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಅಕ್ಷರಶಃ ಹಬ್ಬದ ಸಂಭ್ರಮ ಕಾಣುತ್ತಿದೆ.
ಹೌದು..! ಸೆ.15ರಂದು ಅಂತಾರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿನ ಮಾನವ ಸರಪಳಿ ಮಾರ್ಗವು ಜನಮನ ಸೆಳೆಯುವ ಹಾಗೆ ಸಿದ್ಧವಾಗಿದೆ.
ಅಂತಾರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆಯ ಲೋಗೊ ಇರುವ ಧ್ವಜಗಳನ್ನು ಪ್ರತಿ ಒಂದು ಕಿ.ಮಿ.ಗೊಂದರAತೆ ಅಳವಡಿಸಲಾಗಿದೆ. ಅಲ್ಲಲ್ಲಿ ಸ್ವಾಗತ ಕಮಾನುಗಳನ್ನು ಹಾಕಿದ್ದು ಮಾನವ ಸರಪಳಿ ಮಾರ್ಗದಲ್ಲಿ ಊರ ಹಬ್ಬದ ಸಡಗರ ಕಾಣುತ್ತಿದೆ.
• ಮಾನವ ಸರಪಳಿ ಹೊರಡುವ ಮಾರ್ಗದಲ್ಲಿ ಧ್ವಜ ಹಾಕಿರುವುದು.
ಅಲ್ಲಲ್ಲಿ ಸಭೆಗಳು : ಮಾನವ ಸರಪಳಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲಾ, ತಾಲೂಕು ಮತ್ತು ಹೋಬಳಿ ಕೇಂದ್ರದಲ್ಲಿ ಕಾರ್ಯಕ್ರಮದ ಮುನ್ನಾ ದಿನವಾದ ಸೆ.14ರಂದು ಸಹ ಬಿರುಸಿನಿಂದ ಸಭೆಗಳು ನಡೆದವು. ಮಾನವ ಸರಪಳಿ ಕಾರ್ಯಕ್ರಮಕ್ಕೆ ನಿಯೋಜನೆಗೊಂಡ ಸೆಕ್ಟರ್ ಅಧಿಕಾರಿಗಳು ಸಹ ಆಯಾ ಕಡೆಗಳಲ್ಲಿ ಸಭೆ ನಡೆಸಿ ಚರ್ಚಿಸಿದರು.
ಮುಖ್ಯ ವೇದಿಕೆ ನಿರ್ಮಾಣ:ಐತಿಹಾಸಿಕ ಅಂತಾರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆಯ ಮುಖ್ಯ ಕಾರ್ಯಕ್ರಮ ಕೊಪ್ಪಳ ನಗರದ ಅಶೋಕ ಸರ್ಕಲನಲ್ಲಿ ನಿಗದಿಯಾಗಿದ್ದು, ಸೆ.14ರಂದು ಸಂಜೆ ವೇಳೆಗೆ ಮುಖ್ಯ ವೇದಿಕೆಯು ಭರ್ಜರಿಯಾಗಿ ಸಿದ್ಧವಾಗಿತ್ತು.
ಭರ್ಜರಿ ಪ್ರಚಾರ: ಪ್ರಜಾಪ್ರಭುತ್ವ ದಿನಾಚರಣೆಗೆ ಜಿಲ್ಲಾಡಳಿತವು ಶಿಸ್ತುಬದ್ಧವಾಗಿ ಸಿದ್ಧತೆ ಮಾಡಿಕೊಂಡಿದ್ದು, ಕಾರ್ಯಕ್ರಮದಲ್ಲಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸುವ ನಿಟ್ಟಿನಲ್ಲಿ ಕಳೆದ 15 ದಿನಗಳಿಂದಲೂ ನಾನಾ ರೀತಿಯ ಪ್ರಚಾರ ಕಾರ್ಯ ನಡೆದಿದ್ದು, ಸೆ.14ರಂದು ಸಹ ಆಟೋಮೂಲಕವು ಅಲ್ಲಲ್ಲಿ ಭರ್ಜರಿಯಾಗಿ ಪ್ರಚಾರ ನಡೆಸಲಾಯಿತು.
ರಸ್ತೆಯ ಮೇಲೆ ಚಿತ್ತಾಕ್ಷರ: ಅಂತಾರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆಯ ಹಿನ್ನೆಲೆಯಲ್ಲಿ ಕೊಪ್ಪಳ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಹ ಜಾತ್ರೆಯ ಸಂಭ್ರಮ ಕಾಣುತ್ತಿದೆ. ಮಾನವ ಸರಪಳಿ ಹೊರಡುವ ಮಾರ್ಗದ ರಸ್ತೆಯ ಮೇಲೆ ಅಲ್ಲಲ್ಲಿ ಪ್ರಜಾಪ್ರಭುತ್ವ ದಿನಾಚರಣೆಗೆ ಸ್ವಾಗತ ಎಂದು ಬರೆದಿರುವುದು ಜನಮನ ಸೆಳೆಯುತ್ತಿದೆ.
ಶಾಲೆಗಳಲ್ಲಿ ರಿಹರ್ಸಲ್ : ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ಉತ್ತಮ ಸಂದೇಶವನ್ನು ರವಾನಿಸುವ ಹಿನ್ನೆಲೆಯಲ್ಲಿ ಮಾನವ ಸರಪಳಿಯಲ್ಲಿ ಭಾಗಿಯಾಗಲಿರುವ ವಿದ್ಯಾರ್ಥಿಗಳಿಗೆ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲಿಸಿ ಕಾರ್ಯಕ್ರಮದ ಬಗ್ಗೆ ತಿಳಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯ ನಡೆಯಿತು.
ಅಧಿಕಾರಿಗಳಿಗೆ ಸೂಚನೆ : ಮಾನವ ಸರಪಳಿ ಕಾರ್ಯಕ್ರಮದಲ್ಲಿ ತಾಲೂಕುಮಟ್ಟದ ಅಧಿಕಾರಿಗಳು ಮತ್ತು ಅಧೀನ ಸಿಬ್ಬಂದಿ ಕಡ್ಡಾಯ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಹಸೀಲ್ದಾರರು ತಾಲೂಕುಮಟ್ಟದ ಅಧಿಕಾರಿಗಳಿಗೆ ಜ್ಞಾಪನಪತ್ರ ಹೊರಡಿಸಿ ಸೂಚನೆ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಕ್ರಮ ವಹಿಸಿದ್ದಾರೆ.
ಜಿಲ್ಲಾಧಿಕಾರಿಗಳಿಂದ ಮೇಲ್ವಿಚಾರಣೆ : ರಜಾ ದಿನವಾದ ಶನಿವಾರದಂದು ಸಹ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಅಧಿಕಾರಿಗಳಿಗೆ ಸಂದೇಶ ರವಾನಿಸುತ್ತ ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆಯನ್ನು ಪರಿಶೀಲಿಸಿ ಅಧಿಕಾರಿಗಳನ್ನು ಸಿದ್ಧಗೊಳಿಸಿದರು.
• ಅಶೋಕ ಸರ್ಕಲನಲ್ಲಿ ಸಿದ್ಧವಾದ ವೇದಿಕೆ
More Stories
ಲೋಕಾಯುಕ್ತ ಬಲೆಗೆ ಬಿದ್ದ ಸಹಕಾರ ಇಲಾಖೆ ಉಪನಿಬಂಧಕ ದಸ್ತಗೀರ್ ಅಲಿ
ಲೋಕಾಯುಕ್ತ ಬಲೆಗೆ ಬಿದ್ದ ಸಹಕಾರ ಇಲಾಖೆ ಉಪನಿಬಂಧಕ ದಸ್ತಗೀರ್ ಅಲಿ
ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಯಿಂದ ಜಾನಪದ ನೃತ್ಯ ವೈಭವದ ಸಮೂಹ ನೃತ್ಯ ಪ್ರದರ್ಶನ