4 April 2025

ಹೊಸಪೇಟೆ ಹಾಗೂ ಕೊಪ್ಪಳ ರಸ್ತೆಯಲ್ಲಿರುವ ವಿಶಾಲ್ ಮಾರ್ಟ್ ನಿಂದ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ವಾಹನ ಸವಾರರು ಪರದಾಟ

ಹೊಸಪೇಟೆ ಹಾಗೂ ಕೊಪ್ಪಳ ರಸ್ತೆಯಲ್ಲಿರುವ ವಿಶಾಲ್ ಮಾರ್ಟ್ ನಿಂದ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ವಾಹನ ಸವಾರರು ಪರದಾಟ

ಕೊಪ್ಪಳ : ವಿಶಾಲ್ ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಎಲ್ಲಂದರೆ ವಾಹನ ಪಾರ್ಕಿಂಗ್ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಪುಟ್ ಪಾತ್ ಮೇಲೆ ಜಿಲ್ಲಾಡಳಿತದಿಂದ ಕಬ್ಬಿಣದ ಬ್ಯಾರಿಕೆಟ್ ಹಾಕಲಾಗಿತ್ತು ಅದನ್ನು ಕೂಡ ಅದನ್ನು ಕೂಡ ತಮಗೆ ಇಷ್ಟ ಬಂದಂತೆ ಕಿತ್ತು ಹಾಕಿದ್ದಾರೆ ಕೂಡಲೇ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ ವಿಶಾಲ್ ಮಾಟ್ ಪಕ್ಕದಲ್ಲಿ ಹಾಗೂ ಮುಂದುಗಡೆ , ವಾಹನಗಳನ್ನು ಪಾರ್ಕ್ ಮಾಡುವುದರಿಂದ ಅರ್ಧದಷ್ಟು ರಸ್ತೆ ಪಾರ್ಕಿಂಗ್‌ಗೇ ಮಿಸಲು ಎನ್ನುವಂತಾಗಿದೆ.

ಇದರಿಂದ ರಸ್ತೆಯಲ್ಲಿ ಸಾಗುವ ಇತರ ವಾಹನಗಳಿಗೆ ಅಡ್ಡಿಯಾಗಿದೆ. ರಸ್ತೆಯಲ್ಲಿ ಬಸ್, ಲಾರಿಗಳು ಸಾಗುವುದರಿಂದ ಕೆಲವೊಮ್ಮೆ ಇಕ್ಕಟ್ಟಿನ ಪರಿಸ್ಥಿತಿಯೂ ಉಂಟಾಗುತ್ತದೆ.ಈ ಎಲ್ಲ ಕಾರಣದಿಂದಾಗಿ ರಸ್ತೆಯಲ್ಲಿ ವಾಹನ, ಪಾದಚಾರಿಗಳಿಗೆ ಸಾಗಲು ಸಮಸ್ಯೆಯಾಗುತ್ತಿದೆ.

ಆದ್ದರಿಂದ ಸಂಬಂಧ ಪಟ್ಟವರು ಈ ಬಗ್ಗೆ ಗಮನ ಹರಿಸಿ ಕ್ರಮ ವಹಿಸಬೇಕು ವಿಶಾಲ್ ಮಾರ್ಟ್ ಸರ್ಕಾರದ ನಿಯಮಗಳನ್ನು ಪಾಲನೆ ಮಾಡದೇ ಇದ್ದಲ್ಲಿ ನಗರಸಭೆ ವತಿಯಿಂದ ನೀಡಿದನೀಡಿರುವ ಅನುಮತಿಯನ್ನು ರದ್ದು ಪಡಿಸಬೇಕು ಸಾರ್ವಜನಿಕರು, ಪಾದಚಾರಿಗಳು, ವಾಹನ ಸವಾರರು ಆಗ್ರಹಿಸಿದ್ದಾರೆ