ಹಿಂದು-ಮುಸ್ಲಿಂ ಭಾವೈಕ್ಯದ ಸಂಕೇತವಾದ ಅಲಾಯಿ ದೇವರಗಳ ಭೇಟಿ ಅದ್ದೂರಿ ಮೊಹರಂ ಆಚರಣೆ.
ಲಿಂಗಸೂಗೂರ:ಮೊಹರಂ ಕೊನೆಯ ದಿನ ಅಂಗವಾಗಿ ಲಿಂಗಸೂಗೂರು ಹಿಂದು-ಮುಸ್ಲಿಂ ಭಾವೈಕ್ಯದ ಸಂಕೇತವಾದ ಅಲಾಯಿ ದೇವರಗಳ ಭೇಟಿ ನಗರದ ಗಡಿಯಾರ ಚೌಕ್ ನಲ್ಲಿ ಹಿಂದು-ಮುಸ್ಲಿಂ ಭಾವೈಕ್ಯದ ಸಂಕೇತವಾದ ಅಲಾಯಿ ದೇವರಗಳ ಭೇಟಿ ಹಾಗೂ ಮೆರವಣಿಗೆ ಆರಾಧನೆ ಎಲ್ಲೆಡೆ ಜೋರಾಗಿತ್ತು.
ನಗರದ ವಿವಿಧ ಮಸೀದಿಗಳಲ್ಲಿ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರು ಶನಿವಾರ ಬೆಳಗ್ಗೆಯೇ ಸವಾರಿ ಹೋಗಿಬಂದವು. ಭಕ್ತರು ಶ್ರದ್ಧಾ ಭಕ್ತಿಯಿಂದ ದೇವರಿಗೆ ನಮಿಸಿ ಇಷ್ಟಾರ್ಥ ಪೂರೈಸುವಂತೆ ಬೇಡಿಕೊಂಡರು. ಕೆಂಪು ಸಕ್ಕರೆ, ಹೂವಿನ ಹಾರ ನೈವೇದ್ಯ ಅರ್ಪಿಸಿದರು. ಅಲಾಯಿ ಕುಣಿಯಲ್ಲಿ ಕಟ್ಟಿಗೆ, ಉಪ್ಪು ಹಾಕಿ ಭಕ್ತಿ ಮೆರೆದರು.
ಕೊನೆಯ ದಿನವಾದ ಕಾರಣ ಸಿಂಗಾರಗೊಂಡಿದ್ದ ದೇವರುಗಳು ಸಂಜೆಯಾಗುತ್ತಲೇ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟವು. ಜನರು ದಾರಿಯುದ್ದಕ್ಕೂ ತಂಡೋಪ ತಂಡವಾಗಿ ನಿಂತುಕೊಂಡು ಅಂತಿಮ ದರ್ಶನ ಪಡೆದು ಪುನೀತರಾದರು.
ಪಟ್ಟಣದಲ್ಲಿ ಪ್ರತಿ ವರ್ಷ ವಿಶೇಷವಾಗಿ ವಿಜೃಂಭಣೆಯಿಂದ ಹಬ್ಬ ಆಚರಿಸುವುದು ವಾಡಿಕೆ. ಈ ವರ್ಷವೂ ಬೆಳಗ್ಗೆಯಿಂದಲೇ ಪಟ್ಟಣದಲ್ಲಿ ಹಬ್ಬದ ಸಡಗರ ಕಂಡುಬಂತು. ಜನರು ಮಸೀದಿ ಬಳಿ ಆಗಮಿಸಿ ದೈವದ ಕಾರ್ಯದಲ್ಲಿ ಭಾಗಿಯಾದರು. ಸಂಜೆ ಅಂತಿಮ ಮೆರವಣಿಗೆ ಮುಗಿದ ಬಳಿಕ ದೇವರನ್ನು ವಿಸರ್ಜಿಸಿ ಹಬ್ಬಾಚರಣೆ ಮುಗಿಸಲಾಯಿತು.
More Stories
ಶರಣ ಶ್ರೀ ಶಂಕರ ದಾಸಿಮಯ್ಯ ಜಯಂತೋತ್ಸವ.
ಗೊಂದಲಗೂಡಾದ ಕುಕನೂರು ಪಟ್ಟಣ ಪಂಚಾಯತಿ
ದೇಹ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ಸಾಹಿತಿ ವಿಮಲಾ ಇಮಾದಾರ