23 December 2024

ಹಡಪದ ಅಪ್ಪಣ್ಣನವರವ ಚನಗಳು ಹಾಗೂ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ದಾರಿದೀಪಗಳಾಗಿವೆ:-ಆದಪ್ಪ ಹಡಪದ

ಹಡಪದ ಅಪ್ಪಣ್ಣನವರವ ಚನಗಳು ಹಾಗೂ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ದಾರಿದೀಪಗಳಾಗಿವೆ:-ಆದಪ್ಪ ಹಡಪದ

ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣದಲ್ಲಿ ಹಡಪದ ಅಪ್ಪಣ್ಣನವರ ಜಯಂತಿಯನ್ನು ಆಚರಣೆ ಮಾಡಲಾಯಿತು.

ದಿವ್ಯ ಸಾನಿಧ್ಯವನ್ನು ಅನ್ನದಾನೇಶ್ವರ ಶಾಖಾಮಠದ ಮಹದೇವಯ್ಯ ಮಹಾಸ್ವಾಮಿಗಳು ವಹಿಸಿದ್ದರು.

ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಅವರು ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆ ಶ್ರಮಿಸಿದ ಮಹಾನ್ ಶರಣರಾಗಿದ್ದಾರೆ. ಅವರು ವಚನಗಳು ಹಾಗೂ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ದಾರಿದೀಪಗಳಾಗಿವೆ’ಎಂದು ಡಪದ ಸಮಾಜದ ಮುಖಂಡರಾದ ಆದಪ್ಪ ಹಡಪದ ಮಾತನಾಡಿದರು.

ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಹಡಪದ ಅಪ್ಪಣ್ಣನವರು ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಕಾಯಕ ತತ್ವದಡಿ ಬದುಕು ರೂಪಿಸಿಕೊಳ್ಳುವುದೇ ಶರಣ ಆಶಯವಾಗಿತ್ತು’ .ಹಡಪದ ಅಪ್ಪಣ್ಣ ಅವರು ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ಕಂದಾಚಾರ, ಮೂಢನಂಬಿಕೆ ವಿರುದ್ಧ ಹೋರಾಡಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ತಮ್ಮ ವಚನಗಳ ಮೂಲಕ ಶ್ರಮಿಸಿರುವುದು ಅವಿಸ್ಮರಣೀಯ’ಎಂದು ಹೇಳಿದರು. 

 

ಈ ಸಂದರ್ಭದಲ್ಲಿ ಶಿವಪ್ಪ ರಾಜೂರ,ಶೇಖಪ್ಪ, ದೇವಪ್ಪ, ಮಲ್ಲಪ್ಪ, ಈರಪ್ಪ, ಶಿವಾನಂದಪ್ಪ ಗಾಣಿಗೇರ, ಚಿದಾನಂದಪ್ಪ ಹಡಪದ, ಮಲ್ಲಪ್ಪ ಮ್ಯಾಗಳ ಮನಿ, ರಮೇಶ್ ರಾಜೂರ, ರಫಿ ಸಾಬ ಕೊಪ್ಪಳ, ಶಂಕ್ರಪ್ಪ ರಾಜೂರ, ಭೂದೇಶ ಬಳಗೇರಿ, ವಿಜಯಕುಮಾರ, ಬಸಯ್ಯ ಕಲ್ಲೂರ, ಇತರರು ಇದ್ದರು

ವರದಿ : ಚನ್ನಯ್ಯ ಹಿರೇಮಠ ಕುಕನೂರು