3 April 2025

ಸಹಕಾರ ಸಂಘಗಳ ನೌಕರರಿಂದ ಸಹಾಯ ಹಸ್ತ: ಎನ್.ಸತ್ಯನಾರಾಯಣ

ಸಹಕಾರ ಸಂಘಗಳ ನೌಕರರಿಂದ ಸಹಾಯ ಹಸ್ತ: ಎನ್.ಸತ್ಯನಾರಾಯಣ

ಗಂಗಾವತಿ : ತಾಲೂಕಿನ ಎಪಿಎಂಸಿಯ ಹಾಲು ಒಕ್ಕೂಟದ ಕಚೇರಿಯಲ್ಲಿ ಕನಕಗಿರಿ ತಾಲೂಕಿನ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾದ ಶ್ರೀಮತಿ ಅಜರತ್ ಬಿ ಇವರ ಮನೆ ಬಾಳ ದುರಸ್ತಿಯಲ್ಲಿದ್ದು, ಮಳೆ ಬಂದರೆ ಇವರ ಮನೆಯಲ್ಲಿ ಮಳೆಯಂತೆ ನೀರು ಅರಿತಿದ್ದು, ಇದನ್ನು ಅರಿತ ಸಂಘದ ಕಾರ್ಯದರ್ಶಿಗಳು ಹಾಗೂ ಕೆಎಂಎಫ್ ಒಕ್ಕೂಟದ ಮಾಜಿ ಅಧ್ಯಕ್ಷರಾದ ಎನ್ ಸತ್ಯನಾರಾಯಣ ಇವರು ಹಾಗೂ ಎಮ್ ಸತ್ಯನಾರಾಯಣ ಇವರ ಸಂಯೋಗದಲ್ಲಿ ಮತ್ತು ನಿವೃತ್ತಿ ಹೊಂದಿದ ಜಿಲ್ಲೆ ಉಪ ವ್ಯವಸ್ಥಾಪಕರಾದ ಜಿ.ಐ ಪಡಸಲಗಿ ಹಾಗೂ ಗವಿಸಿದ್ದಪ್ಪ ಅಧಿಕಾರಿಗಳ ತಂಡದ ನೇತೃತ್ವದಲ್ಲಿ ಇವರಿಗೆ ಗಂಗಾವತಿ ಕಾರಟಗಿ ಕನಕಗಿರಿನ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ಸಹಾಯಧನವನ್ನು ವಿತರಿಸಿದರು. ನಂತರ ಮಾತನಾಡಿದ ಎನ್ ಸತ್ಯನಾರಾಯಣಿಯವರು, ಸಹಕಾರ ಸಂಘದಲ್ಲಿ ನೌಕರಿಗೆ ಯಾವುದೇ ಸರಕಾರದ ವೇತನ ಇಲ್ಲದಿದ್ದರೂ ತಮ್ಮ ಅಲ್ಪ ವೇತನದಲ್ಲಿ ಸಹಾಯಧನ ನೀಡಿಸಿದ್ದು, ಇದೇ ಮೊದಲ ಬಾರಿಗೆ ಮಾನವನ ಧರ್ಮಕ್ಕೆ ಜಯವಾಗಲಿ ಎಂಬ ನಾಡ ನುಡಿಯಂತೆ ಎಲ್ಲಾ ಸಹಕಾರ ಸಂಘದ ತಮ್ಮ ಸಾಯಸ್ತಕ್ಕೆ ಧನ್ಯವಾದಗಳು ತಿಳಿಸಿದರು, ಈ ಸಂದರ್ಭದಲ್ಲಿ ತಾಲೂಕು ಅಧಿಕಾರಿಗಳಾದ

ಎ.ನಾರಾಯಣ, ದೇವೇಂದ್ರಪ್ಪ, ತಾಲೂಕಿನ ಎಲ್ಲಾ ಸಹಕಾರ ಸಂಘದ ಕಾರ್ಯದರ್ಶಿಗಳು ಕಚೇರಿ ಸಹಾಯಕರಾದ, ರಮೇಶ್ ಮತ್ತು ರೇವಣಪ್ಪ ಭಾಗಿಯಾಗಿದ್ದರು,