*ಸರಕಾರಿ ಶಾಲೆಗಳಲ್ಲಿ ಪಠ್ಯ ಪುಸ್ತಕಗಳು ಸಂಪೂರ್ಣ ಹಂಚಿಕೆ ಆಗಿಲ್ಲ. ಶಿಕ್ಷಣಾಧಿಕಾರಿಗಳೇ ಗಮನ ಹರಿಸಿರಿ*
ವರದಿ : ಎಸ್.ಎಂ.ಪವಾರ
ಲಿಂಗಸೂಗೂರು, ಜ.19- ತಾಲೂಕಿನಲ್ಲಿರುವ 48 ಪ್ರೌಢ ಹಾಗೂ 313 ಪ್ರಾಥಮಿಕ ಸರಕಾರಿ ಶಾಲೆಗಳಿದ್ದು, ರಾಜ್ಯ ಸರಕಾರದಿಂದ ಶಿಕ್ಷಣ ಇಲಾಖೆಯು ಪಠ್ಯ ಪುಸ್ತಕ ವಿತರಣೆ ಸರಿಯಾಗಿ ಸರಬರಾಜು ಮಾಡಲು ಅನುದಾನ ಬಿಡುಗಡೆ ಯಾಗಿದ್ದರೂ ಇಲ್ಲಿಯವರೆಗೂ ಶಾಲಾ ಮಕ್ಕಳಿಗೆ ಎಲ್ಲಾ ಪಠ್ಯ ಪುಸ್ತಕಗಳು ಸೆಮಿಸ್ಟರ್- 1 ಸೆಮಿಸ್ಟರ್ -2 ಸರಿಯಾಗಿ ಎಲ್ಲಾ ವಿಷಯದ ಪಠ್ಯ ಪುಸ್ತಕಗಳು ಶಾಲೆ ಆರಂಭವಾಗಿ 2 ತಿಂಗಳು ಆದರೂ ಮಕ್ಕಳಿಗೆ ಪುಸ್ತಕ ಭಾಗ್ಯ ದೊರಕಿರುವದಿಲ್ಲ ಎಂದು ಹೇಳಲಾಗುತ್ತಿದೆ. ಶಿಕ್ಷಣಾಧಿಕಾರಿಗಳು ಇತ್ತ ಕಡೆ ಸ್ವಲ್ಪ ಗಮನ ಹರಿಸಬೇಕು.
ಲಿಂಗಸೂಗೂರು ತಾಲೂಕಿನಲ್ಲಿ ಇನ್ನೂ ಶಾಲಾವಾರು ಪಠ್ಯ ಪುಸ್ತಕ ಹಂಚಿಕೆ ಮಾಡಿದರೂ ಇನ್ನೂ ಸರಿಯಾಗಿ ಎಲ್ಲಾ ಶಾಲೆಗಳಿಗೆ ಪಠ್ಯ ಪುಸ್ತಕ ಹಂಚಿಕೆಯಾಗಿರುವುದಿಲ್ಲ.
ತಾಲೂಕಿನ ಸರಕಾರಿ ಶಾಲಾ ಮಕ್ಕಳಿಗೆ 2024- 25ನೇ ಸಾಲಿನಲ್ಲಿ ಮೊದಲ ಹಂತದ . ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಉಚಿತ ಪುಸ್ತಕ ಆರ.ಟಿ ಇ ಬೇಡಿಕೆ 9.74.734 ಸರಬರಾಜಾಗಿದ್ದು 7,65464 ವಿತರಣೆಯಾಗಿವೆ.
ತಾಲೂಕಿನಲ್ಲಿ ಪ್ರತಿ ವರ್ಷ ಖಾಸಗಿ ಆಂಗ್ಲ ಕನ್ನಡ ಭಾಷೆಯ ಶಾಲೆಗಳು ಅಕ್ರಮವಾಗಿ ಆರಂಭವಾಗುತ್ತಿದ್ದು, ಕೆಲ ಆಂಗ್ಲ ಶಾಲೆಗೆ ಅನಧೀಕೃತ ಹೆಚ್ಚುವರಿ ಶಾಲಾ ಫೀ ಸಂಗ್ರಹಿಸ ಲಾಗುತ್ತಿದ್ದು. ಶಿಕ್ಷಣ ಇಲಾಖೆ ನಿಯಂತ್ರಣ ಇಲ್ಲದಿರುವುದರಿಂದ ಪಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.
More Stories
ಶರಣ ಶ್ರೀ ಶಂಕರ ದಾಸಿಮಯ್ಯ ಜಯಂತೋತ್ಸವ.
ಗೊಂದಲಗೂಡಾದ ಕುಕನೂರು ಪಟ್ಟಣ ಪಂಚಾಯತಿ
ದೇಹ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ಸಾಹಿತಿ ವಿಮಲಾ ಇಮಾದಾರ