23 December 2024

ಶಿಶು ಅಭಿವೃದ್ಧಿ ಇಲಾಖೆ ಪೂರೈಸಿದ ಆಹಾರ ಕಳಪೆ ಅಧಿಕಾರಿ ಬಿ.ಎಮ್. ಮಾಳೆಕೊಪ್ಪ, ನಿರ್ಲಕ್ಷ್ಯ..!

ಶಿಶು ಅಭಿವೃದ್ಧಿ ಇಲಾಖೆ ಪೂರೈಸಿದ ಆಹಾರ ಕಳಪೆ ಅಧಿಕಾರಿ ಬಿ.ಎಮ್. ಮಾಳೆಕೊಪ್ಪ, ನಿರ್ಲಕ್ಷ್ಯ..!

ಕೊಪ್ಪಳ:06 ಮೇ. ಕುಕನೂರ ತಾಲ್ಲೂಕಿನ ಬೈರನಾಯಕನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಶಿಶು ಅಭಿವೃದ್ಧಿ ಇಲಾಖೆ ಪೂರೈಸಿದ ಆಹಾರ ಸಾಮಗ್ರಿಗಳಲ್ಲಿ ಹುಳುಗಳು ಕಾಣಿಸಿಕೊಂಡಿವೆ ಎಂದು ಸಾರ್ವಜನಿಕರು ಪ್ರತ್ಯಕ್ಷವಾಗಿ ತೋರಿಸಿದ್ದಾರೆ.

6 ತಿಂಗಳಿಂದ 6 ವರ್ಷದ ಒಳಗಿನ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ನೀಡಿರುವ ಬೆಲ್ಲ,ಗೋದಿ,ಅಕ್ಕಿಯಲ್ಲಿ ಮತ್ತು ಹಿಟ್ಟಿನಲ್ಲಿ ಹುಳುಗಳು ಪತ್ತೆಯಾಗಿವೆ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

 

ರಾಗಿ ಹಿಟ್ಟಿನ ಪ್ಯಾಕೆಟ್‌ ಹಳೆಯದಾಗಿದ್ದು, ಹುಳುಗಳಿವೆ. ಬೆಲ್ಲ ಕಮಟು ವಾಸನೆ ಹೊಡೆಯುತ್ತಿದ್ದು ಅದರಲ್ಲಿಯೂ ಹುಳುಗಳು ಮನೆ ಮಾಡಿವೆ, ಬಡವರು ಈ ಹಿಟ್ಟು, ಬೆಲ್ಲ, ಗೋದಿನುಚ್ಚು ಆಹಾರ ಪ್ಯಾಕೆಟ್ ತಯಾರಿಸಿ ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಿಗೆ ನೀಡಿದ್ದಾರೆ. ನಂತರ ಕೆಲವರು ಪರೀಕ್ಷಿಸಿ ನೋಡಿದಾಗ ಹುಳುಗಳು ಇರುವುದು ಗೊತ್ತಾಗಿ ಅದನ್ನು ದನಕರುಗಳಿಗೆ ನೀಡಿದರು ಅವುಗಳು ಕೂಡ ತಿನ್ನುತ್ತಿಲ್ಲ ಎಂದು ಸುದ್ದಿಗಾರರಿಗೆ ಗ್ರಾಮಸ್ಥರು ವಿವರಿಸಿದರು.

 

ಈ ಹಿಂದೆ ಇಂಥದ್ದೇ ಆಹಾರ ಪೂರೈಸಲಾಗಿದೆ. ಸಿದ್ಧ ಆಹಾರವನ್ನು ಯಲಬುರ್ಗಾ ಪಟ್ಟಣದ ಹೊರವಲಯದ ಎಂ.ಎಸ್‌.ಪಿ.ಸಿ ಕೇಂದ್ರದಲ್ಲಿ ತಯಾರಿಸಲಾಗಿದೆ. ಪ್ಯಾಕೆಟ್‌ಗೆ ಭರ್ತಿ ಮಾಡಿದ ಮೂರು ತಿಂಗಳ ಒಳಗಾಗಿ ಆಹಾರ ಬಳಸುವುದು ಸೂಕ್ತ ಎಂದು ಪ್ಯಾಕೆಟ್‌ ಮೇಲೆ ಬರೆದಿದ್ದರೂ ಯಾವ ದಿನಾಂಕ, ಬ್ಯಾಚ್‌ ಸಂಖ್ಯೆಗಳನ್ನು ನಮೂದಿಸಿಲ್ಲ ಎನ್ನುತ್ತಾರೆ ಸ್ಥಳೀಯರು.

 

ಇದು ಎಷ್ಟು ದಿನದ ಹಿಂದಿನ ಆಹಾರ ಎಂಬುದೇ ತಿಳಿಯುತ್ತಿಲ್ಲ. ಪ್ಯಾಕೆ ಟ್‌ಗಳ ಮೇಲೆ ಅಕ್ಕಿ,ರವೆ ಎಂದಿದ್ದರೆ ಒಳಗೆ ರಾಗಿ ಹಿಟ್ಟು ಇದೆ. ಬೇಕಾಬಿಟ್ಟಿ ಯಾಗಿ ಕಳಪೆ ಆಹಾರ ಪೂರೈಸಿರುವುದು ಗಮನಕ್ಕೆ ಬಂದರೂ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಗಮನಹರಿಸಿಲ್ಲ ಎಂದು ಜನರು ದೂರಿದರು.

 

ಅಧಿಕಾರಿಗಳ ಬೆಜವಾಬ್ದಾರಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ  ತಾಲ್ಲೂಕು ಕೇಂದ್ರದ ಅಧಿಕಾರಿ ಬಿ, ಎಮ್, ಮಾಳೆಕೊಪ್ಪ, ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನಿವಾಸಿಗಳು ಅತೃಪ್ತಿ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕುದರಿಮೋತಿ ಗ್ರಾಂಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಬೆಜವಾಬ್ದಾರಿ ಹೇಳಿಕೆ ನೀಡಿದ್ದು ಈ ಹಿಂದೆ ಕೂಡ ಕಳಪೆ ಆಹಾರ ಪೋರೈಕೆ ಘಟನೆ ನನ್ನ ಗಮನಕ್ಕಿಲ್ಲ ಎಂದು ಹೇಳಿದ್ದು ಗ್ರಾಮಸ್ಥರಾದ ಗವಿಸಿದ್ದಪ್ಪ ಕಣಗಣ್ಣನವರ್, ಬಸವರಾಜ್ ಕೊರಮದಾರ, ಸೋಮು ಪೂಜಾರ್, ಮಾರುತಿ ಹಿರೇಹಳ್ಳಿ, ಗ್ರಾಮದ ಮಹಿಳೆಯರ ಆಕ್ರೋಶಕ್ಕೆ ಕಾರಣವಾಯಿತು.