22 December 2024

ಲೋಕಾಯುಕ್ತ ಬಲೆಗೆ ಬಿದ್ದ ಸಹಕಾರ ಇಲಾಖೆ ಉಪನಿಬಂಧಕ ದಸ್ತಗೀರ್‌ ಅಲಿ

ಲೋಕಾಯುಕ್ತ ಬಲೆಗೆ ಬಿದ್ದ ಸಹಕಾರ ಇಲಾಖೆ ಉಪನಿಬಂಧಕ ದಸ್ತಗೀರ್‌ ಅಲಿ

ಲಂಚ ಸ್ವೀಕರಿಸುತ್ತಿದ್ದಾಗ ನಡೆದ ಲೋಕಾಯುಕ್ತ ದಾಳಿ, ಹಣ ನುಂಗಲು ಪ್ರಯತ್ನ

ಕೊಪ್ಪಳ: ಜಿಲ್ಲೆಯ ಸಹಕಾರಿ ಸಂಘಗಳ ಉಪ ನಿಬಂಧಕ ದಸ್ತಗಿರಿ ಅಲಿ ಶನಿವಾರ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದು, ಲಂಚ ಪಡೆದ ಹಣ ನುಂಗಲು ಪ್ರಯತ್ನ ಮಾಡಿದ್ದಾನೆ ಹಣ ಹೊರತೆಗೆದು ಲೋಕಾಯುಕ್ತರು ವಶಕ್ಕೆ ಪಡೆದುಕೊಳ್ಳಲಾಯಿತು

ಎನ್‌ಜಿಓ ನೊಂದಣಿ ಮಾಡಿಸಲು ಭೀಮನಗೌಡ ಅವರು ನೋಂದಣಿಗೆ ಅರ್ಜಿ ಸಲ್ಲಿಸಿದ್ದು, 2 ಸಾವಿರ ಲಂಚ ನೀಡುವಂತೆ ದಸ್ತಗಿರ ಅಲಿ ಬೇಡಿಕಿ ಇಟ್ಟಿದ್ದರು ಮನನೊಂದ ಭೀಮನಗೌಡ ಅವರು ಲೋಕಾಯುಕ್ತ ಅವರಿಗೆ ದೂರು ನೀಡಿದ್ದರು. ಶನಿವಾರ ಜಿಲ್ಲಾಡಳಿತ ಭವನದ‌ಲ್ಲಿರುವ ಸಹಕಾರಿ‌ ಇಲಾಖೆ ಕಚೇರಿಯಲ್ಲಿಯೇ ಹಣ ಪಡೆಯುವಾಗ ಅಧಿಕಾರಿ ಮೇಲೆ ದಾಳಿ ನಡೆಸಿದರು.

ರಾಯಚೂರು ಲೋಕಾಯುಕ್ತ ಎಸ್ಪಿ ಶಶಿಧರ್ ಮಾರ್ಗದರ್ಶನದಲ್ಲಿ ದಾಳಿ ನಡೆದಿದ್ದು, ಕೊಪ್ಪಳ ಲೋಕಾಯುಕ್ತ ಪಿಐ ನಾಗರತ್ನ, ಸುನೀಲ್ ಮೇಗಿಲಮನಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.