- ರಾಷ್ಟ್ರ ಹಾಗೂ ಸಂವಿಧಾನದ ಬಗ್ಗೆ ಪ್ರತಿಯೊಬ್ಬರು ಗೌರವ, ಅಭಿಮಾನ ಹೊಂದಿದವರಾಗಿರಬೇಕು : ನಿವೃತ್ತ ಯೋಧ ಹಂಚ್ಯಾಳಪ್ಪ
ಕೊಪ್ಪಳ : ಇಂದು ದೇಶಾದ್ಯಂತ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅತಿ ವಿಜೃಂಬಣೆಯಿಂದ ನೆರವೇರುತ್ತಿರುವುದು ಹಬ್ಬದ ವಾತಾವರಣ ಸೃಷ್ಠಿಸಿದೆ ಎಂದು ನಿವೃತ್ತ ಯೋಧ ಹಂಚ್ಯಾಳಪ್ಪ ಹೇಳಿದರು.
ಅವರು ಕೊಪ್ಪಳ ಜಿಲ್ಲೆಯ ಕುಕನೂರ ಪಟ್ಪಣದ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ 78ನೇ ಸ್ವಾತಂತ್ರ್ಯೋತ್ಸವದ ದ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಮಹನೀಯರು ತಮ್ಮ ಜೀವವನ್ನೇ ಮುಡುಪಾಗಿಟ್ಟು ಸ್ವಾತಂತ್ರ್ಯ ತಂದು ಕೊಟ್ಟರು, ಅಂತಹ ಮಹನೀಯರ ಆದರ್ಶಗಳು ಒಂದು ದಿನಕ್ಕೆ ಸೀಮಿತವಾಗದೇ ಅವರ ಆದರ್ಶಗಳನ್ನು ಹಾಗೂ ಸಂವಿಧಾನದ ಆಶಯಗಳನ್ನು ನಾವೆಲ್ಲರೂ ಪಾಲಿಸಲು ಮುಂದಾಗಿ, ರಾಷ್ಟ್ರದ ಬಗ್ಗೆ ಗೌರವ ಅಭಿಮಾನ ಹೊಂದಿರಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರವಂತರಾಗಿ, ಸದೃಡ ಆರೋಗ್ಯ ಬೆಳಸಿಕೊಳ್ಳಬೇಕು. ವಿದ್ಯಾರ್ಥಿ ಜೀವನ ದೇಶೆಯಲ್ಲಿ ಮಕ್ಕಳು ದುಶ್ಚಟಗಳ ದಾಸರಾಗದೇ ದೇಶದ ಒಳ್ಳೆಯ ಸತ್ರ್ಪಜೆಗಳಾಗಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಿವಿ ಮಾತನ್ನು ಹೇಳಿದರು.
ಮೊದಲು ಸೈನಿಕರಾಗಿ ಸೇವೆ ಸಲ್ಲಿಸಲು ಹೋಗುವುದಕ್ಕೆ ಜನ ಭಯ ಬೀಳುತ್ತಿದ್ದರು, ನನ್ನ ಜೊತೆ ತರಬೇತಿಗೆ ಬಂದ ಕೆಲವೊಂದಿಷ್ಟು ಶಿಬಿರಾರ್ಥಿಗಳು ಹೇಳದೇ ಪಲಾಯನ ಮಾಡಿದ್ದರು. ದೇಶದ ಗಡಿಯನ್ನು ಕಾಯುವ ಈ ಕೆಲಸ ತುಂಬಾ ಪರಿಶ್ರಮದ ಜೊತೆ ಕಠಿಣವಾಗಿತ್ತು, ನಮ್ಮ ಜೊತೆಯಲ್ಲಿದ್ದವರು ಹಲವಾರು ಜನ ನಾಡ ರಕ್ಷಣೆಯ ಕಾರ್ಯದಲ್ಲಿ ವೀರ ಮರಣವನ್ನಪ್ಪಿದ್ದಾರೆ, ಆದರೆ ನಾವು ಎದೆಗುಂದದೆ 42 ವರ್ಷಗಳ ಕಾಲ ಭಾರತ ಮಾತೆಯ ಸೇವೆ ಮಾಡಿ ಇಂದು ನಿಮ್ಮ ಮುಂದೆ ಬಂದು ನಿಂತಿದ್ದೀನಿ ಎಂದರೇ ಅದು ಹಿರಿಯರ, ಭಗವಂತನ ಹಾಗೂ ನಿಮ್ಮೆಲ್ಲರ ಆಶಿರ್ವಾದವೇ ಕಾರಣ ಎಂದು ಹೇಳಿದರು.
ಈಗಿನ ಆಹಾರ ಪದ್ದತಿ ಸರಿ ಇಲ್ಲಾ, ಎಲ್ಲಾ ಆಹಾರವು ವಿಷಕಾರಿ ಆಹಾರವಾಗಿದ್ದರಿಂದ ಮಕ್ಕಳು ಅಪೌಷ್ಠಿಕತೆಯಿಂದ ಬಳಲುವಂತಾಗುತ್ತಿದೆ. ಆದ್ದರಿಂದ ಒಳ್ಳೇಯ ಆಹಾರ ಪದ್ದತಿ ಅನುಸರಿಸುವ ಜೊತೆಯಲ್ಲಿ ದಿನ ನಿತ್ಯ ಯೋಗವನ್ನು ಮಾಡಿ ಸದೃಡ ಕಾಯವನ್ನು ಬೆಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಂತರದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಶವಂತ ರಾಜ್ ಜೈನ್ ಸ್ವಾತಂತ್ರ್ಯೋತ್ಸವದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ರಾಜಶೇಖರ್ ಹೊಸ್ಮನಿ, ಶಿಕ್ಷಕರಾದ ವಿದ್ಯಾಪತಿ, ಪ್ರಭು, ಅನ್ವರ್ ಮಕಾಂದರ, ಮಂಜು ಗದಗಿನ, ಮಾರುತಿ ಯಾಳಗಿ, ಪವನ್ ಕುಮಾರ, ಆಡಳಿತ ಮಂಡಳಿಯ ವೀರಯ್ಯ ಉಳ್ಳಾಗಡ್ಡಿ ಸೇರಿದಂತೆ ಶಿಕ್ಷಕ, ಶಿಕ್ಷಕಿಯರು, ಸಿಬ್ಬಂದಿಯವರು, ಪಾಲಕರು ಇದ್ದರು.
ವರದಿ : ಪಂಚಯ್ಯ ಹಿರೇಮಠ,,
More Stories
ಲೋಕಾಯುಕ್ತ ಬಲೆಗೆ ಬಿದ್ದ ಸಹಕಾರ ಇಲಾಖೆ ಉಪನಿಬಂಧಕ ದಸ್ತಗೀರ್ ಅಲಿ
ಲೋಕಾಯುಕ್ತ ಬಲೆಗೆ ಬಿದ್ದ ಸಹಕಾರ ಇಲಾಖೆ ಉಪನಿಬಂಧಕ ದಸ್ತಗೀರ್ ಅಲಿ
ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಯಿಂದ ಜಾನಪದ ನೃತ್ಯ ವೈಭವದ ಸಮೂಹ ನೃತ್ಯ ಪ್ರದರ್ಶನ