23 December 2024

ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಅಗಸ್ತ್ಯ ಅರಕೇರಿ ಆಯ್ಕೆ

  1. ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಅಗಸ್ತ್ಯ ಅರಕೇರಿ ಆಯ್ಕೆ

ಕೊಪ್ಪಳ : ಬಿಕೆಎಸ್ ಅಯ್ಯಂಗಾರ್ ಸ್ಮರಣಾರ್ಥ ಎಂಟನೇ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಅಗಸ್ತ್ಯ ಅರಿಕೇರಿ ಬಾಲ ಪ್ರತಿಭೆ ಆಯ್ಕೆ ಯಾಗಿದ್ದಾರೆ .

ಕೊಪ್ಪಳ ನಗರದ ಬಹುಮುಖ ಪ್ರತಿಭೆ ಹಾಗೂ ಸಕಲಕಲವಲ್ಲಭ ಅಗಸ್ತ್ಯ ಅರಕೇರಿ ಅಗಸ್ಟ್ 23 24 25 ರಂದು ನಡೆಯುವ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಯೋಗಾಸನದಲ್ಲಿ ತನ್ನದೇ ಆದ ಚಾಪ ಮೂಡಿಸಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಯಶಸ್ವಿಗೊಳ್ಳುವ ಮೂಲಕ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ .

ಈ ಹಿಂದೆ ಹಲವಾರು ಕಾರ್ಯಕ್ರಮ ನೀಡುತ್ತಾ ಬಂದಿರುವ ಅಗಸ್ತ್ಯ ಅರೆಕೇರಿ ಬೆಂಗಳೂರಿನಲ್ಲಿ ನಡೆಯುವ ಎಂಟನೇ ರಾಷ್ಟ್ರಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ಪಿನಲ್ಲಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ವಿಜಯಶಾಲಿಯಾಗಿ ಕೊಪ್ಪಳ ಜಿಲ್ಲೆಯ ಕೀರ್ತಿ ಬೆಳಗಿಸಲಿ ಎಂದು ಕ್ರೀಡಾ ಅಭಿಮಾನಿಗಳು ಶುಭ ಹಾರೈಸಿದ್ದಾರೆ.