*ಮಂಗಳೂರಿನಲ್ಲಿ ಜನ ಸ್ಪಂದನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ನಳಿನ್ ಕುಮಾರ್ ಅತುಲ್ ಚಾಲನೆ*
- ವೃದ್ದ ಅಜ್ಜಿ ದೇವಸ್ಥಾನ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಕೆ ಖುದ್ದು ಜಿಲ್ಲಾಧಿಕಾರಿ ಅರ್ಜಿ ಸ್ವೀಕಾರ
ಶಾಲಾ ಮಕ್ಕಳು ರೈತ ಗೀತೆ ಹಾಡಿ ಜನಮನ ಸೂರೆಗೊಂಡರು, ಮಾನ್ಯ ಜಿಲ್ಲಾಧಿಕಾರಿಗಳು ರೈತಗೀತೆ ಹಾಡಿದ ವಿಧ್ಯಾರ್ಥಿಗಳಿಗೆ ಪುಸ್ತಕ ಹಾಗೂ ಪೆನ್ನುಗಳನ್ನು ನೀಡಿದರು.
ಕೊಪ್ಪಳ : ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಕೊಪ್ಪಳ ತಾಲೂಕ ಆಡಳಿತ ಮತ್ತು ಪಂಚಾಯತ ಕುಕನೂರ ಮತ್ತು ಗ್ರಾಮ ಪಂಚಾಯತ ಮಂಗಳೂರು ಸಹಯೋದೊಂದಿಗೆ ಜನಸ್ಪಂದನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಕಾರ್ಯಕ್ರಮದಲ್ಲಿ ನೂರಾರು ಜನ ತಮ್ಮ ಸಮಸ್ಸೆಗಳನ್ನು ಮಾನ್ಯ ಜಿಲ್ಲಾಧಿಕಾರಿಗಳ ಮುಂದೆ ಸಲ್ಲಿಸಿದರು ವಿಶೇಷವಾಗಿ ಗ್ರಾಮದ ಮುಖ್ಯ ರಸ್ತೆಯನ್ನು ಕೋರ್ಟ ಆದೇಶದಂತೆ ನಿರ್ಮಾಣ ಮಾಡಬೇಕು ಎಂದರು.
ನಂತರ ರೈತರು ಬೆಳೆ ವಿಮೆಯ ಬಗ್ಗೆ, ಮನೆಗಳ ಹಕ್ಕು ಪತ್ರಗಳ ಬಗ್ಗೆ, ನಮ್ಮ ಹೊಲ ನಮ್ಮ ದಾರಿಗಳ ಬಗ್ಗೆ, ವೈಯಕ್ತಿಕ ವ್ಯಾಜ್ಯಗಳು ಸೇರಿದಂತೆ ಹಲವಾರು ಅರ್ಜಿಗಳು ಮಾನ್ಯರು ಚರ್ಚಿಸಿದರು.
ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಮ್ ಪಾಂಡೆ, ಮಾನ್ಯ ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಸಾವಿತ್ರಿ ಖಡಿ, ಮಾನ್ಯ ಎಸಿ ಮಹೇಶ್ ಮಾಲಗಿತ್ತಿ, ಮಾನ್ಯ ಡಿ.ಡಿ.ಎಚ್ ಕೃಷ್ಣಾ ಉಕ್ಕುಂದ, ಮಾನ್ಯ ಎಸ್.ಪಿ ರಾಮ್ ಎಲ್ ಅರಸಿದ್ದಿ, ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಬಿರಾದರ್ ಪಾಟೀಲ್, ತಹಶೀಲ್ ದಾರರು, ಸ್ಥಳೀಯ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ನೀಲಂ ಚಳಗೇರಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಕ್ರಪ್ಪ ಚಿನ್ನೂರ (ಮುತ್ತಪ್ಪ) ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು ಸದಸ್ಯರು ಹಾಗೂ ಸಿಬ್ಬಂದಿಗಳು ಮಂಗಳೂರು ಹೋಬಳಿಯ ಎಲ್ಲಾ ಗ್ರಾಮ ಪಂಚಾಯತಿಗಳ ಸಾರ್ವಜನಿಕರು ಹಾಜರಿದ್ದರು.
More Stories
ಗೊಂದಲದ ಮದ್ಯೆಯು ಕುತೂಹಲ ಮೂಡಿಸಿದ ಚುನಾವಣೆ
ಶರಣ ಶ್ರೀ ಶಂಕರ ದಾಸಿಮಯ್ಯ ಜಯಂತೋತ್ಸವ.
ಗೊಂದಲಗೂಡಾದ ಕುಕನೂರು ಪಟ್ಟಣ ಪಂಚಾಯತಿ