23 December 2024

ಬೆಂಗಳೂರಿನಲ್ಲಿ ಕಲಾವಿದರ ನಿರ್ಲಕ್ಷ್ಯವನ್ನು ಖಂಡಿಸಿ ಪ್ರತಿಭಟನೆ

  1. *ಬೆಂಗಳೂರಿನಲ್ಲಿ ಕಲಾವಿದರ ನಿರ್ಲಕ್ಷ್ಯವನ್ನು ಖಂಡಿಸಿ ಪ್ರತಿಭಟನ*

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿ ಬಂದ ಮೇಲೆ ಸಚಿವರು ಒಂದು ಬಾರಿಯಾದರೂನಾಡಿನ ಜಾನಪದ ಸಾಂಸ್ಕೃತಿಕ ಕಲಾವಿದರ ಕುಂದು ಕೊರತೆಗಳನ್ನು ಆಲಿಸುವ ಕುರಿತು 

ಮೀಟಿಂಗ್ ಕರೆಯದೆ ಕಲಾವಿದರ ಸಮಸ್ಯೆಗಳನ್ನು ಆಲಿಸದೆ ಅವರನ್ನು ನಿರ್ಲಕ್ಷಿಸುತ್ತಾ

ಅಧಿಕಾರಿಗಳ ಹಂತದಲ್ಲಿ ನಿರ್ಣಯಗಳನ್ನು ತೆಗೆದುಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯ ನೀಡುವಿಕೆಯಲ್ಲಿ ಮಾರ್ಗಸೂಚಿಯನ್ನು ಉಲ್ಲಂಘಿಸಿ ಪ್ರಥಮ ಬಾರಿಗೆ ಕಂತುಗಳಲ್ಲಿ ಹಣವನ್ನು ಬಿಡುಗಡೆ ಮಾಡಿ ಕಲಾವಿದರ ಕೋರಿಕೆಯನ್ನು ನಿರ್ಲಕ್ಷಿಸಿದ್ದಾರೆ. 

ಜೂನ್ ತಿಂಗಳಲ್ಲಿ ಹಣ ಬಿಡುಗಡೆ ಮಾಡುತ್ತೇನೆಂದು ಹೇಳಿ ಈಗವಿ ಳಂಬ ನೀತಿಯನ್ನು ಅನುಸರಿಸುತ್ತಿರುವ ಇಲಾಖೆ ಅಧಿಕಾರಿಗಳ ವರ್ತನೆಯನ್ನು ಖಂಡಿಸಿ ಬೀದಿಗೆ ಇಳಿದು ಹೋರಾಟ ಮಾಡಲು ಆಸ್ಪದ ಮಾಡಿಕೊಟ್ಟಿದ್ದಾರೆ. 

ಈ ಅಧಿಕಾರಿಗಳ ವರ್ತನೆಗೊಂದು ಧಿಕ್ಕಾರವಿರಲಿ ಎಂದು ನೇತೃತ್ವ ವಹಿಸಿದ್ದ ಹಿರಿಯ ಹೋರಾಟಗಾರ ಪಟ್ಲು ಗೋವಿಂದರಾಜ್ ಹೇಳಿದರು.

ಕಳೆದ ಹತ್ತು ವರ್ಷಗಳಿಂದಲೂ ಕೇಂದ್ರ ಕಚೇರಿಯಲ್ಲಿ ಬಿಡುಬಿಟ್ಟಿರುವ ಅಧಿಕಾರಿ ವರ್ಗದ ಸಲಹೆ ಮೇರೆಗೆ ಕಲಾವಿದರ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಇಲಾಖೆಯ ಈ ವರ್ತನೆ ಕಂಡನೀಯ ಮತ್ತು ದುರಹಂಕಾರದ ಪರಮಾವಧಿ ….

ಈ ಕೂಡಲೇ ಕಲಾವಿದರ ಬಾಕಿ ಹಣವನ್ನು ಪಾವತಿಸುವಂತೆ ಆಗ್ರಹಿಸಿದರು. 

ಕ್ರಮ ಕೈಗೊಳ್ಳದಿದ್ದರೆ ಬೃಹತ್ ತಮಟೆ ಚಳುವಳಿಯನ್ನ ಮಾಡಲಾಗುವುದೆಂದರು. 

ಹಿರಿಯ ಕಲಾವಿದ ಅಗ್ನಿ ಅಸ್ತ್ರ ಅಂಜನಪ್ಪ ಮಾತನಾಡಿ

ಕಾರಣವಿಲ್ಲದೆ ನಿಲ್ಲಿಸಿದ ವಿಶೇಷ ಘಟಕದ ಅನೇಕ ಯೋಜನೆಗಳನ್ನು ಪುನಃ ಪ್ರಾರಂಭಿಸಿ ದಲಿತ ಜನಪದ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದರ ಜೊತೆಗೆ ಧನಸಹಾಯ ನೀಡುವಿಕೆಯಲ್ಲಿ ಜಿಲ್ಲಾ ಹಂತದಲ್ಲಿ ನಡೆಯುವ ಭ್ರಷ್ಟಾಚಾರವನ್ನು ಹೋಗಲಾಡಿಸಬೇಕೆಂದರು. 

ಹಿರಿಯ ಜನಪದ ಗಾಯಕ ಸಬ್ಬನಹಳ್ಳಿ ರಾಜು ಅವರು ಕೇಂದ್ರ ಕಚೇರಿಯಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ ಹಿರಿಯ ಅಧಿಕಾರಿಗಳನ್ನು ಕೂಡಲೇ ಬೇರೆ ಬೇರೆ ಕಡೆ ವರ್ಗಾಯಿಸಬೇಕು 

ಜನಪದ ಜಾತ್ರೆ ಮಹಿಳಾ ಉತ್ಸವಗಳನ್ನ ಪುನಃ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು  

ಈ ಪ್ರತಿಭಟನೆಯನ್ನು ಸಂಘಟಿಸಿದ್ದ ಜಯಸಿಂಹ ಅವರು ಮಾತನಾಡುತ್ತಾ 2017 ರಿಂದ ಇಲಾಖೆ ಇಲಾಖೆಯಿಂದ ಪ್ರಯಾಜಿಸಿದ ಕಲಾತಂಡಗಳ ಪ್ರಯೋಜನೆ ಹಣವನ್ನ ಕೂಡಲೇ ನೀಡಬೇಕು ಸಂಘ ಸಂಸ್ಥೆಗಳಿಗೆ ನೀಡುವ ಧನಸಹಾಯ ಯೋಜನೆಯಲ್ಲಿ ಅಧಿಕಾರಿಗಳು ನಡೆಸುವ ಭ್ರಷ್ಟಾಚಾರಕ್ಕೇ ಕಡಿವಾಣ ಹಾಕಬೇಕು ಎಂದರು.

ಪ್ರತಿಭಟನೆಯ ನೇತೃತ್ವವಿಸಿದ್ದ ಚಿಕ್ಕೆರೆ ಲೋಕೇಶ್ ಅವರುಇಲಾಖೆಯ ಸಚಿವರು ಅಧಿಕಾರಿಗಳ ಮಾತನ್ನು ಕೇಳಿ ಕಲಾವಿದರಿಗೆ ಯೋಜನೆಗಳು ಸಮರ್ಪಕವಾಗಿ ದೊರೆಯದಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಂಘ ಸಂಸ್ಥೆಗಳ ಧನಸಾಯವನ್ನ ಕಡಿಮೆ ಎಂದರೆ ಮೂರು ಲಕ್ಷಕ್ಕೆ ಮಿತಿಗೊಳಿಸಬೇಕು ಸೇವಾಸಿoದುವಿನಲ್ಲಿ ಅರ್ಜಿ ಹಾಕುವ ಸಂಘ ಸಂಸ್ಥೆಗಳಿಗೆ ಜಿಲ್ಲೆಯ ಸಹಾಯಕ ನಿರ್ದೇಶಕರು ಹಾಗೂ ವಲಯ ಜಂಟಿ ನಿರ್ದೇಶಕರು ನಡೆಸುವ ಭ್ರಷ್ಟಾಚಾರಕ್ಕೆ ಕಡ್ಡಾಯವಾಗಿ ಕಡಿಯೋಣ ಹಾಕಬೇಕು ಎಂದರು 

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಲ್ಬುರ್ಗಿ ಜಿಲ್ಲೆಯ ಕನ್ನಡಪರ ಹೋರಾಟಗಾರ ಶರಣು ಗದ್ದಿಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ 

ಇಲಾಖೆ ದನ ಸಹಾಯ ನೀಡುವಿಕೆಯಲ್ಲಿ ಕಲ್ಯಾಣ ಕರ್ನಾಟಕವನ್ನ ನಿರ್ಲಕ್ಷಿಸುತ್ತದೆ ಆ ಭಾಗದ ಸಂಘದ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡುತ್ತಿಲ್ಲ ಇದು ಖಂಡನೀಯ ಸಚಿವರು ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. 

ಮುಂಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲಾವದರ ನಿರ್ಲಕ್ಷವನ್ನು ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದರು. 

ಕೊಪ್ಪಳ ಜಿಲ್ಲೆಯ ಮಹೇಶ್ ಬಾಬು ಸುರುವೇ ಅವರು ಸಚಿವರ ಜಿಲ್ಲೆಯಲ್ಲಿ ನ ಸಹಾಯ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ.

ದನ ಸಹಾಯ ಆಯ್ಕೆ ಸಮಿತಿಯ ಹೆಸರಿನಲ್ಲಿ ಪಾರದರ್ಶಕತೆ ನಡೆಸಿಲ್ಲ ಸಂಘ-ಸಂಸ್ಥೆಗಳಿಗೆ ಎಷ್ಟೆಷ್ಟು ಹಣ ನೀಡಬೇಕೆಂಬ ಬಗ್ಗೆ ಕೂಡ ಸಮಿತಿಯ ಸದಸ್ಯರೊಂದಿಗೆ ಚರ್ಚಿಸದೆ ಅಧಿಕಾರಿಗಳು ತಮ್ಮ ಹಂತದಲ್ಲಿ ನಿರ್ಣಯಿಸಿ ಆಯ್ಕೆ ಆಯ್ಕೆ ಸಮಿತಿಯ ಸಹಿ ಪಡೆದಿದ್ದಾರೆ ಎಂದು ಆರೋಪಿಸಿದರು.

ಕಲಬುರ್ಗಿ ವಲಯ ಜಂಟಿ ನಿರ್ದೇಶಕ ಹಾಗೂ ಕೊಪ್ಪಳದ ಸಹಾಯಕ ನಿರ್ದೇಶಕರು ತಮಗೆ ಬೇಕಾದ ಸಂಘ-ಸಂಸ್ಥೆಗಳಿಗೆ4 ಮತ್ತು ಮೂರು ವರೆಲಕ್ಷ ನೀಡಿದ ಸಂಘ ಸಂಸ್ಥೆಗಳ ಕಾರ್ಯಕ್ರಮಗಳ ಮಾಹಿತಿಯನ್ನು ಪ್ರದರ್ಶಿಸಿ ಅಧಿಕಾರಿಗಳ ಭ್ರಷ್ಟಾಚಾರಕ್ಕೇ ಕಡಿವಾಣ ಹಾಕಿ ಪ್ರಾಮಾಣಿಕ ಸಂಘ ಸಂಸ್ಥೆಗಳಿಗೆ ಕಡೆ ಕಡಿಮೆ ಹಣ ನೀಡಿರುವುದನ್ನು ಖಂಡಿಸಿದರು

*ಮೂರು ತಾಸಿನ ಕಾರ್ಯಕ್ರಮ ಮಾಡಿದವರಿಗೆ ನಾಲ್ಕು ಲಕ್ಷ…*

*ಮೂರು ದಿನ ಕಾರ್ಯಕ್ರಮ ಮಾಡಿದವರಿಗೆ ಒಂದು ಲಕ್ಷ*

ನೀಡಿದ ಭ್ರಷ್ಟಾಚಾರದ ಒಂದು ನಿದರ್ಶನವನ್ನು 

ಮಾಹಿತಿ ಹಕ್ಕಿನಲ್ಲಿ ಪಡೆದ ದಾಖಲೆ ಸಮೇತ ವಿವರಿಸಿದರು

ಈ ಕುರಿತು ನಿರ್ದೇಶಕರಿಗೆ ಕಾರ್ಯದರ್ಶಿಗಳಿಗೆ ಸಚಿವರಿಗೆ ಹಾಗೂ ಲೋಕಾಯುಕ್ತರಿಗೆ ದೂರು ದಾಖಲೆ

ಮಾಡುತ್ತೇನೆ ಎಂದರು 

ಬೆಳಗಾವಿಯ ಸುರೇಶ್ ವಾಗ್ಮೊರೆ ಯವರು ಧನಸಾಯ ನೀಡುವಿಕೆಯಲ್ಲಿ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಬೇಕೆಂದು ಒತ್ತಾಯಿಸಿದರು  

ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಲಾವಿದರು ಭಾಗವಹಿಸಿ ತಮ್ಮ ಬೇಡಿಕೆಗಾಗಿ ಒತ್ತಾಯಿಸಿದರು

ಪ್ರತಿಭಟನೆಯಲ್ಲಿ ಭೂಮಿಪುತ್ರ ರಾಜೇಗೌಡ ಚೆಕ್ಕೆರೆ, ಲೋಕೇಶ್

ಗುಬ್ಬಿ ವೀರೇಶ್ ರಾಯಪ್ಪ ಬೆಳಗಾವಿ ರಾಜೇಗೌಡ ಹುಲಿಬೆಲೆ ಸಿದ್ದರಾಜುಯ್ಯ 

ಸಾಹಿತಿ ಭೂಹಳ್ಳಿ ಪುಟ್ಟಸ್ವಾಮಿ ರಾಂಪುರ ಸಿದ್ದರಾಜು ಹೊನಿಗಾನಹಳ್ಳಿ ಸಿದ್ದರಾಜಯ್ಯ ಬಿ.ಪಿ.ಸುರೇಶ್ ಹೊಂಬಾಳಯ್ಯ ಏಕತಾರಿ ರಾಮಯ್ಯ ಕುಣಿಗಲ್ ರಾಮಚಂದ್ರ ಕೊಡಗಿನ ಸತ್ಯ ಪ್ರಕಾಶ್ ಬೆಳಗಾವಿಯ ನಾಗೇಂದ್ರ ಮಳವಳ್ಳಿ ಪೂರಿ ಗಾಲಿ ಮಹದೇವಸ್ವಾಮಿ ಪುಟ್ಟ ಸ್ವಾಮಿ 

  • ನಮನ ಶಿವಕುಮಾರ್ ಸಂತ ವಾಣಿ ಸುಧಾಕರ್ ಸವಿಗಾನ ಮಂಜು ಮಾಗಡಿ ಕೃಷ್ಣಪ್ಪ ಪುಟ್ಟರಾಜು ಕುಂತೂರು ದೊಡ್ಡಿ ಸಿದ್ದರಾಮು ಕೂಡ್ಲೂರು ಕೊಳತ್ತೂರು ಮಹದೇವಸ್ವಾಮಿ ಕಾಳಯ್ಯ ಕನಕಪುರ ಪುಟ್ಟಸ್ವಾಮಿ ಪ್ರದೀಪ್ ಮಂಜು ದರ್ಪಣ ಶ್ರೀನಿವಾಸ್ ಕಿರುಗುಂದ ಮಹಾದೇವ್ ಟಿ ನರಸೀಪುರ ಸಾಗರ್ ಮೈಸೂರು ಚಿಕ್ಕ ರಾಜು ರಾಂಬೊ ಸುರೇಶ್ ದಿವಾಕರ್ ಮೀನಾಕ್ಷಿ ರೋಜ್ ಮೇರಿ ಗೋವಿಂದಳ್ಳಿ ನಾಗರಾಜು ಗಂಗನರಸಯ್ಯ ಮಹೇಶ್ ಡಿಕೆ ಬನಶಂಕರಿ ನಾಗು ದೇವರಾಜು ಎಚ್ ಡಿ ಕೋಟೆ ರಾಘವೇಂದ್ರ ಗಣೇಶ್ ರಾಕೇಶ್ ಕಾಂಬಳೆ ತಸ್ಮಿಯಾ ಗೋಪಾಲ್ ಮರಿಸ್ವಾಮಿ ಸರಗೂರು ಲಕ್ಷ್ಮಿ ನಾರಾಯಣ ಬಧನಾಳು ಮೆಣಸಿಗನಹಳ್ಳಿ ಸ್ವಾಮಿ ಚಂದ್ರಶೇಖರ್ ರಾಘು ಶಾರದಾ ಧನಲಕ್ಷ್ಮೀ…. ಇತರರು ಭಾಗವಹಿಸಿದ್ದರು.

*ಪ್ರತಿಭಟನೆಯ ನಿರತ ಕಲಾವಿದರ ಒತ್ತಾಯಗಳು*

👉ವಿಶೇಷ ಘಟಕದ ನಿಲ್ಲಿಸಿರುವ ಯೋಜನೆಗಳನ್ನು ಪುನಃ ಪ್ರಾರಂಭಿಸಿ

👉 ಇಲಾಖೆ ಪ್ರಾಯೋಜಿಸಿದ 2017 ಬಾಕಿ ಇರುವ ಹಣವನ್ನು ಪಾವತಿ 

👉 ಕೂಡಲೇ ಧನಸಾಯದ 60% ಹಾಗೂ 70% ಹಣವನ್ನು ಬಿಡುಗಡೆ ಮಾಡಿ 

👉 ಜಾನಪದ ಜಾತ್ರೆಯನ್ನು ಪುನಃ ಪ್ರಾರಂಭಿಸಿ 

👉 ಬೆಂಗಳೂರು ಹಬ್ಬದ ತನಿಖೆಯನ್ನು ಎಸ್ಐಟಿಗೆ ವಹಿಸಿ 

👉 ಧನಸಾಯ ಹಂಚಿಕೆಯಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಗಟ್ಟಿ 

👉 ಸೇವಾ ಸಿಂಧೂರಿನಲ್ಲಿ ಮೂಲಕ ಬರುವ ದಾಸಾಯಕ್ಕೆ ಒಂದು ನ್ಯಾಯ 

ಗಳ ಶಿಫಾರಸು ಮೂಲದವರು ನನಸಾಗಿ ಒಂದು ನ್ಯಾಯ ಸರೀನಾ 

👉 ಸುಗ್ಗಿ ಹುಗ್ಗಿ ಮಹಿಳಾ ಉತ್ಸವ ಯೋಜನೆಗಳನ್ನು ಪುನಃ ಪ್ರಾರಂಭಿಸಿ 

👉 ಬೆಂಗಳೂರಿನಲ್ಲಿ ಬಿಡು ಬಿಟ್ಟಿರುವ ಅಧಿಕಾರಿಗಳನ್ನು ವರ್ಗಾಯಿಸಿ 

👉 ದೂರುಗಳಿರುವ ಜಂಟಿ ನಿರ್ದೇಶಕರನ್ನ ಬೆಂಗಳೂರಿನಿಂದ ವರ್ಗಾಯಿಸುವುದು 

👉 ಕಲ್ಯಾಣ ಕರ್ನಾಟಕದ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ನೀಡುವುದು ಮತ್ತು ಅಧಿಕಾರಿಗಳು ಪಾರದರ್ಶಿಕವಾಗಿ ಕೆಲಸ ನಿರ್ವಹಿಸುವಂತೆ ಕ್ರಮವಹಿಸುವುದು 

👉 ದನ ಸಹಾಯ ಹಂಚಿಕೆಯಲ್ಲಿ ಭ್ರಷ್ಟಾಚಾರ ಸಿಕ್ಕಿದ ದೂರು ದಾಖಲಾದ ಜಂಟಿ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರನ್ನ ತನಿಖೆಗೆ ಒಳಪಡಿಸಿ ಅಮಾನತುಗೊಳಿಸುವುದು

👉 ಮಾಹಿತಿ ಕಾಯ್ದೆ ಹಕ್ಕಿನ ನಿರ್ಲಕ್ಷ ತೋರುಸ್ತಿರುವ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ 

👉 ವಿಶೇಷ ಘಟಕದ ಹೊರನಾಡು ಉತ್ಸವವನ್ನು ಪ್ರಾರಂಭಿಸಿ 

👉 ದನ ಸಹಾಯದ ಕನಿಷ್ಠ ಮೊತ್ತವನ್ನ 3 ಲಕ್ಷ .ಗರಿಷ್ಠ 10 ಲಕ್ಷ 

ಸೀಮಿತಗೊಳಿಸಿ ಸಾಮಾಜಿಕ ನ್ಯಾಯ ನೀಡಲು ಒತ್ತಾಯ