23 December 2024

ಬೀದಿ ನಾಯಿ ಕಡಿತ:ಶಾಸಕ ಗವಿಯಪ್ಪ ಸಾಂತ್ವನ

ಬೀದಿ ನಾಯಿ ಕಡಿತ:ಶಾಸಕ ಗವಿಯಪ್ಪ ಸಾಂತ್ವನ

ಹೊಸಪೇಟೆ ವಿಜಯನಗರ ಜೂ-31.ನಗರದ ಚಿತ್ತವಾಡ್ಗಿ ವಾರ್ಡ ರಸ್ತೆ ಮಾರ್ಗದಲ್ಲಿ ಪರಶುರಾಮ್ 4 ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಾಡಿದೆ.ಹೊಸಪೇಟೆ ನಗರ ಪ್ರದೇಶದಲ್ಲಿ ಬೀದಿ ನಾಯಿ ಉಪಟಳ ಹೆಚ್ಚಾಗಿರುವುದು ಕಾರಣ ಎಂದು ಸ್ಥಳೀಯರ ಆರೋಪ. ಪ್ರಾಣಿಗಳ ಆರೋಗ್ಯ ಕ್ಷೇಮ ಮತ್ತು ನಿಯಂತ್ರಣದ ವ್ಯವಸ್ಥೆ ಇಲ್ಲದಿರುವುದು ನಾಯಿಗಳ ಸಂಖ್ಯೆ ಬಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ ನಾಯಿಗಳಿಗೆ ಸಿಗಬೇಕಾದ ಆಹಾರ ನಗರದಲ್ಲಿ ಸಿಗುತ್ತಿಲ್ಲ.ಇಂಥ ವೇಳೆಯಲ್ಲಿ ಸಿಟ್ಟಿಗೆದ್ದ ನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡುತ್ತವೆ ಜೊತೆಗೆ ಹಲವಾರು ಸೋಂಕುಗಳಿಗೆ ಕಾರಣವಾಗುತ್ತದೆ.

ಭಾರತೀಯ ಸಂವಿಧಾನದ ಆರ್ಟಿಕಲ್‌ 51ಎ(ಜಿ) ಪ್ರಕಾರ, ಭಾರತದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಪ್ರಾಣಿಯನ್ನು ಕಾಪಾಡಬೇಕು ಮತ್ತು ಇತರ ಜೀವವಿರುವ ಪ್ರಾಣಿಗಳ ಬಗ್ಗೆ ದಯೆ ಹೊಂದಿರಬೇಕು.ಇದರ ಜತೆಗೆ ಬೀದಿ ನಾಯಿಗಳಿಗೆ ಆಹಾರ ಒದಗಿಸುವುದು ಕಾನೂನು ಬದ್ಧ.ಕಳೆದ ವರ್ಷ ದಿಲ್ಲಿ ಹೈಕೋರ್ಟ್‌ ಆದೇಶವೊಂದನ್ನು ನೀಡಿ, ಪ್ರದೇಶವೊಂದರ ನಿವಾಸಿಗಳು ಬೀದಿ ನಾಯಿಗಳಿಗೆ ಆಹಾರ ಒದಗಿಸಬಹುದು ಎಂದಿತ್ತು.

ಬೀದಿ ನಾಯಿಗಳ ನಿಯಂತ್ರಣದ ವಿಚಾರವಾಗಿ ಕಠಿಣ ಕಾನೂನು ಕ್ರಮ ತರಲಾಗುತ್ತಿಲ್ಲ ಸರ್ಕಾರಗಳ ನಿರ್ಲಕ್ಷದಿಂದಾಗಿ ಅವುಗಳ ನಿಯಂತ್ರಣ ಆಗುತ್ತಿಲ್ಲ

ನಗರಸಭೆ ಇಲಾಖೆ ನಾಯಿಗಳ ಹಾವಳಿ ಮತ್ತು ನಿಯಂತ್ರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ಸಾರ್ವಜನಿಕರ ಅಳಲು.

ಸರ್ಕಾರಿ ಆಸ್ಪತ್ರೆಗೆ ಶಾಸಕ ಗವಿಯಪ್ಪ ಭೇಟಿ ನೀಡಿ ಮಗುವಿನ ಪಾಲಕರಿಗೆ ಸಾಂತ್ವನ ಹೇಳಿದರು ಜಿಲ್ಲಾ ವೈದ್ಯಧಿಕಾರಿಗಳಾದ ಶಂಕರ್ ನಾಯಕ್ ಉಪಸ್ಥಿತಿ ಇದ್ದರು.