7 April 2025

ಬಿಜೆಪಿ ದೇಶದ ಹಿತಕ್ಕಾಗಿ ರಾಜಕಾರಣ ಮಾಡುವ ಏಕೈಕ ಪಕ್ಷ- ಕ್ಯಾವಟರ್

ಬಿಜೆಪಿ ದೇಶದ ಹಿತಕ್ಕಾಗಿ ರಾಜಕಾರಣ ಮಾಡುವ ಏಕೈಕ ಪಕ್ಷ- ಕ್ಯಾವಟರ್

ಕೊಪ್ಪಳ: ದೇಶ ಮೊದಲು ಎಂಬ ಚಿಂತನೆಯಲ್ಲಿ ಶುರುವಾದ ಬಿಜೆಪಿ ಪಕ್ಷವು ನಿರಂತರ ಹೋರಾಟ, ಸಂಘರ್ಷ ಮತ್ತು ಪಕ್ಷದ ಅನೇಕ ಹಿರಿಯ ನಾಯಕರ ಬಲಿದಾನದಿಂದಾಗಿ ಇಂದು ವಿಶ್ವದ ಅತಿದೊಡ್ಡ ಪಕ್ಷವಾಗಿ ನಿಂತಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಹೇಳಿದರು.

ನಗರದ ಮಹೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ “ಪಂಡಿತ ದೀನ ದಯಾಳ ಉಪಾಧ್ಯಾಯ” ಮಹಾಶಕ್ತಿ ಕೇಂದ್ರದ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಹಿತಕ್ಕಾಗಿ ರಾಜಕಾರಣ ಮಾಡುವ ಏಕೈಕ ಪಕ್ಷ ಬಿಜೆಪಿ. ದೇಶದ ಅಭಿವೃದ್ಧಿಗಾಗಿ ರಜೆ ಪಡೆಯದೆ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿಯಾಗುವ ನಿಟ್ಟಿನಲ್ಲಿ ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮನವರಿಕೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಕಳೆದ 10 ವರ್ಷಗಳಲ್ಲಿ ಪ್ರಣಾಳಿಕೆಯ ಪ್ರತಿಯೊಂದು ಅಂಶವನ್ನು ಜಾರಿಗೆ ತಂದಿದ್ದೇವೆ. ಕೌಶಲ್ಯಭಿವೃದ್ಧಿ, ಸಾಟ್೯‌ಅಪ್ ಸೇರಿ ಇನ್ನಿತರೆ ಯೋಜನೆ ಮೂಲಕ ಕೇಂದ್ರ ಸರ್ಕಾರವು ಸ್ವಯಂ ಉದ್ಯೋಗಕ್ಕೆ ಒತ್ತು ನೀಡಿದೆ. ಅದರಂತೆ ರಸ್ತೆ, ಹೆದ್ದಾರಿ, ರೈಲ್ವೆ, ಸೇತುವೆ ನಿರ್ಮಾಣದಿಂದ ದೇಶದ ಅಭಿವೃದ್ಧಿಯತ್ತ ಹೆಜ್ಜೆ ಇಡಲಾಗಿದೆ. ಸ್ವಾತಂತ್ರ್ಯ ಭಾರತದಿಂದ 2014ರೊಳಗೆ ನಿರ್ಮಿಸಿದ್ದಕ್ಕಿಂತ ದುಪ್ಪಟ್ಟು ಕೇವಲ 10 ವರ್ಷಗಳಲ್ಲೇ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಆದ್ದರಿಂದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಆನಂದ ಅಗಡಿ, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ, ಪ್ರಮುಖರಾದ ಚಂದ್ರು ಕವಲೂರು, ಮುರ್ತೆಪ್ಪ ಹಿಚ್ಯಾಳ, ವಿರುಪಾಕ್ಷ ಬಾರಕೇರ, ಶರಣಪ್ಪ ನಾಯಕ, ಜಯಶ್ರೀ ಗೊಂಡಬಾಳ, ವಿದ್ಯಾ ಹೆಸರೂರು, ವಿರೂಪಾಕ್ಷಪ್ಪ ಕಟಿಗಿ, ಬಸಮ್ಮ ದಿವಟರ, ಮೆಹಬೂಬ್ ಬಿಲ್ಲೆ, ರಾಜು ಬಾಕಳೆ, ಕೆ.ಜಿ.ಕುಲಕರ್ಣಿ, ಭೂಸನೂರಮಠ, ಸದಾಶಿವಯ್ಯ ಹಿರೇಮಠ ಹಾಗೂ ಉಭಯ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಯಕರ್ತರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಲು ಪ್ರತಿಯೊಬ್ಬ ಮತದಾರ ಬಿಜೆಪಿಗೆ ಮತ ನೀಡಲಿ. ದೇಶದ ಅಭಿವೃದ್ಧಿಗೆ ನರೇಂದ್ರ ಮೋದಿಯವರ ಆಡಳಿತ ಮುಂದುವರಿಯಬೇಕು.