23 December 2024

ಬಿಇಡಿ ಫಲಿತಾಂಶ : ಎಸ್.ಎ.ನಿಂಗೋಜಿ ಕಾಲೇಜು ಉತ್ತಮ ಸಾಧನೆ,,,

ಬಿಇಡಿ ಫಲಿತಾಂಶ : ಎಸ್.ಎ.ನಿಂಗೋಜಿ ಕಾಲೇಜು ಉತ್ತಮ ಸಾಧನ,,,

ವರದಿ : ಪಂಚಯ್ಯ ಹಿರೇಮಠ

ಕೊಪ್ಪಳ (ಯಲಬುರ್ಗಾ) : ಕೊಪ್ಪಳ ವಿಶ್ವವಿದ್ಯಾಲಯದ ವ್ಯಾಪ್ತಿಯ ಬಿಇಡಿ ಪ್ರಥಮ ಸೆಮಿಸ್ಟರ್‌ನ ಫಲಿತಾಂಶ ಪ್ರಕಟವಾಗಿದ್ದು, ಪಟ್ಟಣದ ಎಸ್.ಎ.ನಿಂಗೋಜಿ ಬಿಇಡಿ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆ: ಶಿಲ್ಪಾ ಬಸಪ್ಪ 544 ಅಂಕಗಳನ್ನು ಪಡೆದು ಶೇ.90.66 ಪಡೆದು(ಪ್ರಥಮ ಸ್ಥಾನ), ಶಿಲ್ಪಾ ಕರಂಡಿ 542 ಅಂಕಗಳು ಶೇ.90.33(ದ್ವೀತಿಯ), ಇಬ್ಬರು ವಿದ್ಯಾರ್ಥಿಗಳಾದ ಸುಮಾ ಪೋಲಿಸಪಾಟೀಲ 537 ಅಂಕಗಳು ಶೇ.89.5 (ತೃತೀಯ), ಜ್ಯೋತಿ ಕಮತರ 537 ಅಂಕಗಳು ಶೇ 89.5(ತೃತೀಯ) ಸ್ಥಾನ ಗಳಿಸಿದ್ದಾರೆ.

ಪರೀಕ್ಷೆಗೆ ಒಟ್ಟು 100 ವಿದ್ಯಾರ್ಥಿಗಳು ಹಾಜರಾಗಿದ್ದು ಈ ಪೈಕಿ 100 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 

ವಿವಿ ವ್ಯಾಪ್ತಿಯಲ್ಲಿ ಎಸ್.ಎ.ನಿಂಗೋಜಿ ಬಿಇಡಿ ಕಾಲೇಜು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

 

ವಿದ್ಯಾರ್ಥಿಗಳ ಸಾಧನೆಗೆ ನಿಂಗೋಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಎ.ನಿಂಗೋಜಿ, ಪ್ರಾಚಾರ್ಯ ಬಸವನಗೌಡ ಪಾಟೀಲ, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.