ಬಳಗೇರಿ ಹಳ್ಳಕ್ಕೆ ಟಿಪ್ಪರ್ ಪಲ್ಟಿ : ಚಾಲಕ ಪ್ರಾಣಾಪಾಯದಿಂದ ಪಾರು
ಕೊಪ್ಪಳ : ಕುಕನೂರು ತಾಲೂಕು ಬಳಗೇರಿ ಗ್ರಾಮದ ಮರಳು ಪಾಯಿಂಟ್ ನಿಂದ ಮರುಳು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಒಂದು ಬಳಗೇರಿ ಹಳ್ಳದ ಮೇಲೆ ಬರುತ್ತಿದ್ದ ಸಂದರ್ಭದಲ್ಲಿ ಪಲ್ಟಿಯಾದ ಘಟನೆ ಮಂಗಳವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಜರುಗಿದೆ ಎನ್ನಲಾಗಿದೆ.
ಬಳಗೇರಿಯ ಹಳ್ಳದ ಬಳಿ ಇರುವ ಮರುಳು ಪಾಯಿಂಟ್ ನಿಂದ 12ಟನ್ ಮರುಳು ತುಂಬಿದ ಟಿಪ್ಪರ ಬಳಗೇರಿಯಿಂದ ಹಿರೇವಂಕಲಕುಂಟಕ್ಕೆ ಹೋಗುತ್ತಿದ್ದ ವೇಳೆ ಹಳ್ಳದ ಮೇಲೆ ಹೋಗುವ ಸಂದರ್ಭದಲ್ಲಿ ಹಳ್ಳ ಕುಸಿದದರಿಂದ ಟಿಪ್ಪರ್ ಪಲ್ಟಿಯಾಗಿ ಬುಡ ಮೇಲಾಗಿ ಬಿದಿದ್ದು, ಚಾಲಕ ನೀಲಪ್ಪನ ಕಾಲು ಮುರಿದಿದ್ದು, ಯಾವುದೇ ಗಂಭೀರ ಗಾಯಗಳಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಟಿಪ್ಪರ್ ಚಾಲಕ ನೀಲಪ್ಪ ಮಲ್ಲಪ್ಪ ಹಿರ್ಯಾಳ ಆಗಿದ್ದು, ಟಿಪ್ಪರ್ ಇಲಕಲ್ ನ ಮಹಾಂತೇಶ ಪಾಟೀಲ್ ಎನ್ನುವವರಿಗೆ ಸೇರಿದ ವಾಹನ ಜಖಂಗೊಡಿದೆ ಎಂದು ತಿಳಿದು ಬಂದಿದೆ.
ಸ್ಥಳೀಯರ ಮಾಹಿತಿ ನೀಡುತ್ತಿದ್ದಂತೆ ಘಟನಾ ಸ್ಥಳಕ್ಕೆ 108 ದೌಡಾಯಿಸಿ ಕುಕನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಾಲಕನನ್ನು ದಾಖಲಿಸಲಾಗಿದ್ದು, ಈ ಕುರಿತಂತೆ ಕುಕನೂರು ಠಾಣೆಯವರು ಆಸ್ಪತ್ರೆಗೆ ಭೇಟಿ ನೀಡಿದರು ಎಂದು ತಿಳಿದು ಬಂದಿದೆ.
More Stories
ಕಿನ್ನಾಳ ಗ್ರಾಮದಲ್ಲಿ ಜನರ ಮನ ಸೆಳೆದ ಸಂಗೀತ ಸಂಭ್ರಮ.
ಅಕ್ಷರ ಜ್ಞಾನಕ್ಕಿಂತ ಅರಿವಿನ ಜ್ಞಾನವೇ ಶಿಕ್ಷಣ : ಗವಿಶ್ರೀ
ಪ್ರಾಥಮಿಕ ಹಂತದ ಶಿಕ್ಷಣದಲ್ಲಿಯೇ ಸಹಕಾರಿ ಆಂದೋಲನದಮಾಹಿತಿ ತಿಳಿಸಬೇಕು – ಸಹಕಾರ ಸಚಿವ ಕೆ.ಎನ್.ರಾಜಣ್ಣ