9 January 2025

ಪ್ರಾಥಮಿಕ ಕೃಷಿ ಪತ್ತಿನ ಚುನಾವಣೆ ಫಲಿತಾಂಶ ಪ್ರಕಟಗೊಳ್ಳದೇ ಮುಂದೂಡಿಕೆ

*ಪ್ರಾಥಮಿಕ ಕೃಷಿ ಪತ್ತಿನ ಚುನಾವಣೆ ಫಲಿತಾಂಶ ಪ್ರಕಟಗೊಳ್ಳದೇ ಮುಂದೂಡಿಕೆ*

*ಆಡಳಿತ ಪಕ್ಷದ ಕೈ ಗೊಂಬೆಯಾದ ಪೋಲಿಸ್ ಇಲಾಖೆ, ಚುನಾವಣಾಧಿಕಾರಿ :, ಮಾರುತಿ ಗಾವರಾಳ ಆರೋಪ,,* 

*ವರದಿ : ಪಂಚಯ್ಯ ಹಿರೇಮಠ,,*

ಕುಕನೂರು : ರವಿವಾರದಂದು ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮತದಾನ ಪ್ರಕ್ರೀಯೇ ಪೂರ್ಣ ಮುಗಿಯುತ್ತಿದ್ದಂತೆ. ಮೊದನೆಯ ಬೂತ್ ಒಂದರ ಎಣಿಕೆ ಕಾರ್ಯ ಪ್ರಾರಂಬಿಸಲು ಅಣಿಯಾಗುತ್ತಿದ್ದಂತೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಾಗೂ ಮುಖಂಡರು ಮೊದಲ ಬೂತ್ ನ ಸಾಲಗಾರರ ಕ್ಷೇತ್ರದ 320 ಮತಗಳು ಚಲಾವಣೆಯಾಗಿದ್ದು ಸಾಲಗಾರರಲ್ಲದ ಕ್ಷೇತ್ರದ 72 ಮತಗಳು ಚಲಾವಣೆಯಾಗಿದ್ದವು ಇವುಗಳನ್ನು ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಿ ಎಂದು ಹೇಳಿದರು ಫಲೀತಾಂಶ ಪ್ರಕಟಿಸದೇ ಇದ್ದರಿಂದ ಬಿಜೆಪಿ ಮುಖಂಡರು ಗರಂ ಆಗಿ ಪ್ರತಿಭಟನೆಗೆ ಇಳಿದರು.

ಈ ಕುರಿತು ಚುನಾವಣಾಧಿಕಾರಿ ಎರಡು ಬಣದ ಅಭ್ಯರ್ಥಿಗಳ ಸಮುಕ್ಷಮದಲ್ಲಿ ಮತ ಎಣಿಕೆ ಮಾಡಲು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಕೇಳಿದಾಗ ಎರಡು ಬೂತ್ ಗಳ ಮತ ಎಣಿಕೆ ಮಾಡಿ ಫಲಿತಾಂಶ ಘೋಷಿಸುವಂತೆ ಚುನಾವಣಾ ಅಧಿಕಾರಿಗಳಿಗೆ ಹೇಳುತ್ತಿದ್ದಂತೆ, ಬಿಜೆಪಿ ಅಭ್ಯರ್ಥಿಗಳು ಕೊರ್ಟ್ ಆದೇಶ ಪಾಲನೆಯಂತೆ ಮೊದಲ ಒಂದು ಬೂತ್ ಮತದಾನದ ಪೆಟ್ಟಿಗೆ ತೆರೆದು ಫಲಿತಾಂಶ ಘೋಷಣೆ ಮಾಡಿ, ನಂತರ ಕೊರ್ಟ್ ಆದೇಶದಂತೆ ಹತ್ತು ದಿನಗಳ ಅವಧಿಯಲ್ಲಿ ಎರಡನೇ ಮತ ಪೆಟ್ಟಿಗೆ ಫಲಿತಾಂಶ ತಿಳಿಸಿ, ಆಗ ಬರುವ ಫಲಿತಾಂಶದಂತೆ ನಾವು ನಡೆದುಕೊಳ್ಳುತ್ತೇವೆ ಎಂದಿದ್ದಕ್ಕೆ. ಹಾಗೇ ಬರುವುದಿಲ್ಲಾ ಎನ್ನುತ್ತಿದಂತೆ ಗೊಂದಲ ಉಂಟಾಗಿ ಮತ ಎಣಿಕೆ ಕಾರ್ಯ ಪ್ರಾರಂಭಿಸದೇ ಕೊರ್ಟ್ ನ ಆದೇಶ ದಿಕ್ಕರಿಸುತ್ತಿದ್ದಿರಿ ಎಂದು ಬಿಜೆಪಿಯ ಅಭ್ಯರ್ಥಿಗಳು ಪ್ರತಿಭಟಿಸಿದಾಗ ಪೋಲಿಸ್ ಇಲಾಖೆ ತಡೆದು, ಮತ ಪೆಟ್ಟಿಗೆಗಳನ್ನು ಸ್ಟ್ರಾಂಗ್ ರೂಮಿಗೆ ತೆಗೆದುಕೊಂಡು ಹೋದರು.

ಇದನ್ನು ಬಿಜೆಪಿ ಅಭ್ಯರ್ಥಿಗಳು ಹಾಗೂ ಮುಖಂಡರು ಖಂಡಿಸಿ ಪೋಲಿಸ್ ಇಲಾಖೆಯ ಹಾಗೂ ಚುನಾವಣಾ ಅಧಿಕಾರಿಯ ವಿರುದ್ದ ಘೋಷಣೆ ಕೂಗಿದರು.

ಈ ವೇಳೆ ಬಿಜೆಪಿ ಅಭ್ಯರ್ಥಿ ಮಾರುತಿ ಗಾವರಾಳ ಮಾತನಾಡಿ ಪತ್ತಿನ ಸಹಕಾರಿ ಸಂಘದ ಅಧಿಕೃತ ಮತದಾರರು ಎಷ್ಟು ಜನ ಇದ್ದರು ಅವರ ಮಾಹಿತಿಯಂತೆ 338 ಸಾಲಗಾರರ ಮತ್ತು 79 ಸಾಲಗಾರರಲ್ಲದ ಮತದಾರರಲ್ಲಿ ನಾವು ಚುನಾಣೆಯ ಪ್ರಯುಕ್ತ ಮತ ನೀಡುವಂತೆ ಪ್ರಚಾರ ಮಾಡಿದ್ದೇವು, ಇನ್ನೂಳಿದಂತೆ ಅನರ್ಹ ಮತದಾರರಿದ್ದರು. ಆದರೆ ಏಕಾ ಏಕಿ ಇಂದು ಬೆಳಗ್ಗೆ 436 ಮತದಾರರನ್ನು ಕೊರ್ಟ್ ಆದೇಶದ ಮೆರೆಗೆ ಮತದಾನಕ್ಕೆ ಅರ್ಹರು ಎಂದು ತಿಳಿಸಿ, ಅವರಿಗೆ ಒಂದು ಬೂತ್ ಮಾಡಿದ್ದು ಖಂಡನೀಯ ಹಾಗೊಂದು ವೇಳೆ ಇವರು ಅರ್ಹರು ಎಂದಾದಲ್ಲಿ ನಮಗೆ ಮೊದಲು ಏಕೆ,,? ತಿಳಿಸಲಿಲ್ಲಾ ಇದು ಆಡಳಿತ ಪಕ್ಷದ ನಿಯೋಜಿತ ಸಂಚಾಗಿದೆ ಈ ರೀತಿ ಮತದಾರರನ್ನು ಸೃಷ್ಠಿಸಿ ನಮ್ಮನ್ನು ಹತ್ತಿಕ್ಕುವ ಷಡ್ಯಂತ್ರ ನಡೆಸಿದೆ ಎಂದು ಆರೋಪಿಸಿ ಮಾತನಾಡಿದರು.

ನಾವು ಈ ಕುರಿತು ನ್ಯಾಯ ಕೇಳಿ ಪ್ರಶ್ನಿಸಲು ಹೋದರೇ ಪೋಲಿಸ್ ಇಲಾಖೆಯವರು ದಬ್ಬಾಳಿಕೆ ನಡೆಸುತ್ತಿದ್ದಾರೆ, ಲಾಠಿ ಚಾರ್ಜ ಮಾಡಲು ಮುಂದಾಗುತ್ತಿದ್ದಾರೆ. ಸರಕಾರಿ ಅಧಿಕಾರಿಗಳು ಆಡಳಿತ ಪಕ್ಷದ ಕೈಗೊಂಬೆಯಾಗಿಯಾಗಿದ್ದಾರೆ. ಚುನಾವಣಾ ಅಧಿಕಾರಿ ಕೊರ್ಟ್ ನ ಆದೇಶಕ್ಕೂ ಬೆಲೆ ನೀಡುತ್ತಿಲ್ಲಾ ಎಂದು ಪ್ರತಿಭಟನೆ ನಡೆಸುತ್ತಿದ್ದರಿಂದ ರಾತ್ರಿ 9 ಗಂಟೆಯಾದರು ಫಲಿತಾಂಶ ಹೊರ ಬೀಳಲಿಲ್ಲಾ.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ನಮಗೆ ನ್ಯಾಯ ದೊರಕುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲಾ ಎಂದು ಪಟ್ಟಣದ ಎಪಿಎಂಸಿ ಆವರಣದ ಸ್ಟ್ರಾಂಗ್ ರೂಮ್ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.