23 December 2024

ಪತ್ರಿಕಾ ದಿನಾಚರಣೆ ಯಶಸ್ವಿಗೋಳಿಸಿ: ಇಮಾಮ್ ಸಂಕನೂರ

 

ಪತ್ರಿಕಾ ದಿನಾಚರಣೆ ಯಶಸ್ವಿಗೋಳಿಸಿ: ಇಮಾಮ್ ಸಂಕನೂರ

ವರದಿ : ರವಿ ಛಲವಾದಿ 

ಯಲಬುರ್ಗಾ: ಪಟ್ಟಣದ ಎಸ್ ಎ ನಿಂಗೋಜಿ ಬಿ.ಇಡಿ ಕಾಲೇಜಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಘಟಕದಿಂದ ಜೂ.29 ರಂದು ಬೆಳಿಗ್ಗೆ 10:30ಕ್ಕೆ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರಿಗೆ ಕಾರ್ಡ ವಿತರಣೆ ಸಮಾರಂಭ ನಡೆಯಲಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಗೌರವ ಅಧ್ಯಕ್ಷ ಇಮಾಮ್ ಸಂಕನೂರ ಹೇಳಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಶಾಸಕರಾದ ಬಸವರಾಜ ರಾಯರಡ್ಡಿ ನೇರವೇರಿಸಲಿದ್ದಾರೆ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶಿವಮೂರ್ತಿ ಇಟಗಿವಹಿಸಲಿದ್ದಾರೆ.ಡಿ ವ್ಹಿ ಜಿಯವರ ಭಾವಚಿತ್ರಕ್ಕೆ ಪುಸ್ಪಾರ್ಚನೆಯನ್ನು ಮಾಜಿ ಸಚಿವರಾದ ಹಾಲಪ್ಪ ಆಚಾರ ನೇರವೇರಿಸಲಿದ್ದಾರೆ ಹಾಗೂ ಲೋಕಸಭಾ ಸದಸ್ಯರಾದ ರಾಜಶೇಖರ ಹಿಟ್ನಾಳ ಪತ್ರಕರ್ತರ ಗುರುತಿನ ಕಾರ್ಡ ವಿತರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಗೂಡ್ಲಾನೂರ.ಉಪಾಧ್ಯಕ್ಷ ಹುಮಂತಪ್ಪ ಹಳ್ಳಿಕೇರಿ. ಪ್ರ.ಕಾ. ನಾಗರಾಜ್ ವೈ.ರಾಜ್ಯ ಸಮಿತಿ ಸದಸ್ಯ ಸಾದಿಕ್ ಅಲಿ.ಹರೀಶ್ ಎಚ್ ರಾಷ್ಟ್ರೀಯ ಸಮಿತಿ ಸದಸ್ಯ ಎಸ್.ಜಿ ಎಸ್ ಗೋನಾಳ್ ಹಾಗೂ ಮುಖಂಡರಾದ ಬಸವರಾಜ ಉಳ್ಳಾಗಡ್ಡಿ. ಎಸ್ ಆರ್ ನವಲಿಹಿರೇಮಠ. ಬಸವಲಿಂಗಪ್ಪ ಭೂತೆ. ತಹಸೀಲ್ದಾರ ಬಸವರಾಜ ತೆನ್ನಳ್ಳಿ. ಸಿಪಿಐ ಮೌನೇಶ್ವರ ಮಾಲಿಪಾಟೀಲ.ತಾಪಂ ಇಓ ಸಂತೋಷ ಪಾಟೀಲ ಬಿರಾದಾರ. ಪಪಂ ಮುಖ್ಯಾಧಿಕಾರಿ ನಾಗೇಶ. ನ್ಯಾಯವಾದಿ ಹಾಗೂ ನಿಂಗೋಜಿ ಸಂಸ್ಥೆಯ ಅದ್ಯಕ್ಷ ಎಸ್ ಎ ನಿಂಗೋಜಿ ಸೇರಿದಂತೆ ಇನ್ನೂ ಅನೇಕ ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ಪತ್ರಕರ್ತರು ಹಾಜರಿರುತ್ತಾರೆ ಎಂದರು ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಮಲ್ಲು ಮಾಟರಂಗಿ ಉಪಾಧ್ಯಕ್ಷ ಚಂದ್ರಶೇಖರ ಮರದಡ್ಡಿ ಹಾಜರಿದ್ದರು.