ದೇಹ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ಸಾಹಿತಿ ವಿಮಲಾ ಇಮಾದಾರ
ಮೆಡಿಕಲ್ ಕಾಲೇಜಿಗೆ ದೇಹ ದಾನ ಮಾಡಿದ ಕುಟುಂಬದವರು
ಕೊಪ್ಪಳ,: ಹಿರಿಯ ಸಾಹಿತಿ ವಿಮಲಾ ಗಂಡ ಭುಜಂಗಸ್ವಾಮಿ ಇನಾಮದಾರ ಅವರು ಅಲ್ಪಕಾಲದ ಅಸ್ವಸ್ಥತೆಯಿಂದ ನಿನ್ನೆ ಶುಕ್ರವಾರ ನಿಧನರಾದರು.
ಕೊಪ್ಪಳ ಜಿಲ್ಲೆಯ ಹಿರಿಯ ಸಾಹಿತಿಯಾಗಿದ್ದ ವಿಮಲಾ ಇನಾಮದಾರ ಅವರು 18ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ತಮ್ಮ ಸಾಹಿತ್ಯ ಸೇವೆಗಾಗಿ ಹಲವಾರು ಪುರಸ್ಕಾರಗಳನ್ನು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
8 ಕವನ ಸಂಕಲನ ಎರಡು ಕಥಾ ಸಂಕಲನ 5 ಚುಟುಕು ಕವನಗಳ ಸಂಕಲನ ಸೇರಿದಂತೆ 18ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದರು.
ವಿಮಲಾ ಇನಾಮದಾರ ಅವರ ನಿಧನಕ್ಕೆ ಕೊಪ್ಪಳ ಸಾಹಿತ್ಯ ಬಳಗ ಕಂಬನಿ ಮಿಡಿದಿದೆ. ಕವಿ ಸಮಯ ಕಾರ್ಯಕ್ರಮದಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದ ವಿಮಲಾ ಇನಾಮದಾರ ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತಮ್ಮ ದೇಹವನ್ನು ಕೊಪ್ಪಳ ಮೆಡಿಕಲ್ ಕಾಲೇಜಿಗೆ ದಾನವಾಗಿ ನೀಡಲು ನಿರ್ಧರಿಸಿದ್ದರು. ಅದರಂತೆ ಅವರ ದೇಹವನ್ನು ದಾನ ಮಾಡಲಾಯಿತು.
ನಿನ್ನೆ ರಾತ್ರಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರ್ ಎಚ್‌ಎಸ್ ಪಾಟೀಲ್, ಡಿಎಂ ಬಡಿಗೇರ, ಎಎಂ ಮದರಿ, ಈಶ್ವರ ಹತ್ತಿ, ಜಿಎಸ್ ಗೋನಾಳ್, ಮಹೇಶ ಮನ್ನಾಪೂರು, ಶ್ರೀನಿವಾಸ ಚಿತ್ರಗಾರ, ಗವಿಸಿದ್ದಪ್ಪ ಬಾರಕೇರ, ಮಂಜುನಾಥ ಚಿತ್ರಗಾರ, ವಿಜಯಲಕ್ಷ್ಮಿ ಕೊಟಗಿ, ಪುಷ್ಪಲತಾ ಏಳುಭಾವಿ, ಸಾವಿತ್ರಿ ಮುಜಮದಾರ, ಅನ್ನಪೂರ್ಣ ಮನ್ನಾಪೂರು ಸೇರಿದಂತೆ ಅನೇಕರು ಭಾಗವಹಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಸಾಹಿತಿಗಳು ಮಾತನಾಡಿ, ವಿಮಲಾ ಇನಾಮದಾರ ಅವರು ಕೊಪ್ಪಳ ಜಿಲ್ಲೆಯಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಅತ್ಯಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಅವರ ಸಾವು ಸಾಹಿತ್ಯ ಲೋಕದ ಬಳಗಕ್ಕೆ ತುಂಬಲಾರದ ನಷ್ಟವಾಗಿದೆ. ವಿಮಲಾ ಇನಾಮದಾರ
ಅವರ ಇಚ್ಛೆಯಂತೆ ಕುಟುಂಬದವರು ಕೊಪ್ಪಳದ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಅವರ ದೇಹ ದಾನವನ್ನು ಮಾಡಿದ್ದಾರೆ ಎಂದು ಭಾವಪೂರ್ವ ಶ್ರದ್ಧಾಂಜಲಿ ಅರ್ಪಿಸಿದರು.
More Stories
ಲೋಕಾಯುಕ್ತ ಬಲೆಗೆ ಬಿದ್ದ ಸಹಕಾರ ಇಲಾಖೆ ಉಪನಿಬಂಧಕ ದಸ್ತಗೀರ್ ಅಲಿ
ಲೋಕಾಯುಕ್ತ ಬಲೆಗೆ ಬಿದ್ದ ಸಹಕಾರ ಇಲಾಖೆ ಉಪನಿಬಂಧಕ ದಸ್ತಗೀರ್ ಅಲಿ
ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಯಿಂದ ಜಾನಪದ ನೃತ್ಯ ವೈಭವದ ಸಮೂಹ ನೃತ್ಯ ಪ್ರದರ್ಶನ