4 April 2025

ಡಾ. ಗೀತಾ ಮುತ್ತಾಳ ಅವರ ನೂತನ ಶ್ರೀ ಮಹಿಳಾ ಪ್ರತಿಧ್ವನಿ ಸೇವಾ ಸಂಸ್ಥೆ ಉದ್ಘಾಟನೆ 

ಡಾ. ಗೀತಾ ಮುತ್ತಾಳ ಅವರ ನೂತನ ಶ್ರೀ ಮಹಿಳಾ ಪ್ರತಿಧ್ವನಿ ಸೇವಾ ಸಂಸ್ಥೆ ಉದ್ಘಾಟನ 

ಯುವ ಜಾಗೃತಿ ನ್ಯೂಸ್ : ಉದಯ ತೋಟದ

ಕೊಪ್ಪಳ : ನಗರದಲ್ಲಿ ಶ್ರೀ ಮಹಿಳಾ ಪ್ರತಿಧ್ವನಿ ಸೇವಾ ಸಂಸ್ಥೆ ಕೊಪ್ಪಳ ಉದ್ಘಾಟನೆ ಜರಗಿತು ಹಾಗೂ ವಿಶ್ವ ಪರಿಸರ ದಿನಾಚರಣೆಯನ್ನು ಸಸಿಗಳನ್ನ ರೈಲ್ವೆ ಸ್ಟೇಷನ್ ಬದಿಯಲ್ಲಿ ನೆಡುಯುವದರ ಮೂಲಕ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್ ಜಿಲ್ಲಾ ಪಂಚಾಯತಿ, ಉಪ ಕಾರ್ಯದರ್ಶಿಗಳು NGO ಉದ್ಘಾಟಿಸಿದರು ಹಾಗೂ ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ವಿಶ್ವ ಪರಿಸರ ದಿನಾಚರಣೆಯ ಗುರಿ ಉದ್ದೇಶವು ಭೂಮಿಯ ತಾಪಮಾನವನ್ನು ಸಮತೋಲನವನ್ನು ಕಾಪಾಡಲು ಅರಣ್ಯ ಬೆಳೆಸಲು ಕರೆ ಕೊಟ್ಟರು. ಉತ್ತಮವಾದ ಮಳೆ ನೀರಿನ ಅಂತರ್ಜಲ ಹೆಚ್ಚಿಸಲು ಹಾಗೂ ಶುದ್ಧ ಆಮ್ಲಜನಕ ಹೊಂದಲು ಪರಿಸರವನ್ನು ಶುದ್ಧವಾಗಿ ಕಾಪಾಡಿಕೊಂಡು ಬರುವುದು ಪ್ರತಿಯೊಬ್ಬರ ನಾಗರಿಕನ ಕರ್ತವ್ಯವೆಂದು ಹೇಳಿದರು. ಮಲ್ಲಿಕಾರ್ಜುನ್ ಸರ್ ಅವರಿಗೆ ಸನ್ಮಾನವನ್ನು ಮಾಡಲಾಯಿತು. ಅದೇ ರೀತಿ ಡಾ. ಗವಿಸಿದ್ದಪ್ಪ ಮುತ್ತಾಳ ಸಿಂಡಿಕೇಟ್ ಸದಸ್ಯರು ಕೊಪ್ಪಳ ವಿಶ್ವವಿದ್ಯಾಲಯ ಇವರನ್ನು ಸನ್ಮಾನಿಸಲಾಯಿತು. ಈ ಸದರಿ ಕಾರ್ಯಕ್ರಮವನ್ನು ಮಹಿಳಾ ಪ್ರತಿನಿಧಿ ಹಾಗೂ ಕೊಪ್ಪಳ ಟೇಲರ್ ಸಂಘ ಆಯೋಜಿಸಿದ್ದರು.

ಈ ಕಾರ್ಯಕ್ರಮದಲ್ಲಿ ಮಹಿಳಾ ಪ್ರತಿಧ್ವನಿ NGO ಸಂಸ್ಥಾಪಕಿ ಡಾ. ಗೀತಾ ಮುತ್ತಾಳ , ಟೇಲರ್ ಸಂಘದ ಅಧ್ಯಕ್ಷ ರಮೇಶ್ ಅವಜಿ, ರಮೇಶ್ ಮೈಕಾನ್, ಕಮಲ್ ಒಂಟೆ ಸಾಬ್, ಅನುರಾಧ ಇತರರು ಉಪಸ್ಥಿತರಿದ್ದರು. ಒಟ್ಟು 100 ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮವು ಯಶಸ್ವಿಯಾಯಿತು.