ಜಯದೇವ ಮುರುಘರಾಜೇಂದ್ರ ಸ್ವಾಮಿಗಳ 150 ನೇ ಜಯಂತೋತ್ಸವ
ಚಿತ್ರದುರ್ಗದ ಮುರುಘಾಮಠದಲ್ಲಿ : ಇಂದಿನಿಂದ ಶರಣ ಸಂಸ್ಕೃತಿ ಉತ್ಸವ
ವರದಿ : ಪಂಚಯ್ಯ ಹಿರೇಮಠ
ಕೊಪ್ಪಳ : ಚಿತ್ರದುರ್ಗ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಆಗಿನ ರಾಯಚೂರು ಈಗಿನ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದ ಹಿರೇಮಠದವರಾದ ಗುರುಶಾಂತಯ್ಯ ತಾಯಿ ಬೋರಮ್ಮ ಇವರ ಉದರದಲ್ಲಿ ಜನಿಸಿದ ಇವರು ನಮ್ಮ ಕುಟುಂಬದ ಹಿರಿಯ ತಲೆಮಾರಿನ ಶ್ರೀಗಳು ಎಂದು ಕುಕನೂರು ಕಳ್ಳಿಮಠದ ಸಿದ್ದಯ್ಯ ಶಂಕ್ರಯ್ಯ ಕಳ್ಳಿಮಠ ತಿಳಿಸಿದರು.
ಶ್ರೀಗಳು ಬಿನ್ನಾಳ ಗ್ರಾಮದವರಾಗಿದ್ದರಿಂದ ಅಲ್ಲಿನ ಮಠದ ಭಕ್ತರು ಅವರ ಜಾಗೆಯಲ್ಲಿ ಒಂದು ಮಠ ನಿರ್ಮಾಣ ಮಾಡಿದ್ದು ಮಠದಲ್ಲಿ ಶ್ರೀಗಳ ಮೂರ್ತಿ ಪ್ರತಿಷ್ಠಾಪನೆ ಮುಂದಿನ ದಿನಗಳಲ್ಲಿ ನಡೆಯಲಿದೆ, ಮೂರ್ತಿಯನ್ನು ರಾಜಸ್ಥಾನದಲ್ಲಿ ನಿರ್ಮಿಸಿ ಅಲ್ಲಿಂದ ನೇರ ಬಿನ್ನಾಳಗೆ ತರಲಾಯಿತು.
ಶ್ರೀಗಳ ಮೂರ್ತಿಗೆ ಪೂಜೆ ಸಲ್ಲಿಸಿ ಚಿತ್ರದುರ್ಗ ಮುರಘಾಮಠದಲ್ಲಿ ವಿಜಯದಶಮಿ ಅಂಗವಾಗಿ ಅಕ್ಟೋಬರ್ 05ರಿಂದ 13ರವರೆಗೆ ನಡೆಯುವ ವಿವಿಧ ಗೋಷ್ಠಿ, ಶರಣ ಸಂಸ್ಕೃತಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶ್ರೀಗಳ 150ನೇ ಜಯಂತಿ ಜರುಗಲಿದೆ. ಈ ವೇಳೆ ನಾಡಿನ ಹಲವಾರು ಶರಣರು, ಸಾಹಿತಿಗಳು, ಚಿಂತಕರು ಆಗಮಿಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮದ ನಂತರದಲ್ಲಿ ಮರಳಿ ಬಿನ್ನಾಳ ಗ್ರಾಮಕ್ಕೆ ಶ್ರೀಗಳ ಮೂರ್ತಿ ಆಗಮನವಾಗಲಿದೆ ನಂತರ ಶುಭ ದಿನದಲ್ಲಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮಗಳು ಭಕ್ತಾಧಿಗಳ ಆಶಯದಂತೆ ನಡೆಯಲಿದೆ ಎಂದು ತಿಳಿಸಿದರು.
ಶ್ರೀಗಳು ಪ್ರಾಥಮಿಕ ಶಿಕ್ಷಣ ಸ್ವಗ್ರಾಮ ಬಿನ್ನಾಳದಲ್ಲಿ ಮುಗಿಸಿ ನಂತರ ಪ್ರೌಢ ಶಿಕ್ಷಣವನ್ನು ಗದಗ ತೋಂಟದ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಮುಗಿಸಿದರು ನಂತರ ಇವರ ಉನ್ನತ ವ್ಯಾಸಾಂಗಕ್ಕಾಗಿ ಗದಗ ಶ್ರೀಗಳ ಅಪ್ಪಣೆ ಮೆರೆಗೆ ಕಾಶಿಯಲ್ಲಿ ಕನ್ನಡ ಸಂಸ್ಕೃತ ಪಾಂಡಿತ್ಯವನ್ನು ಪಡೆದು ತದನಂತರದಲ್ಲಿ ಚಿತ್ರದುರ್ಗ ಮುರುಘಾಮಠಕ್ಕೆ ಆಧಿಕಾರ ವಹಿಸಿಕೊಂಡರು ಎಂದು ಹೇಳಿದರು.
ಶ್ರೀಗಳು ಮಹಾತ್ಮ ಗಾಂಧಿಜೀಯವರ ಪ್ರಶಂಸೆಗೊಳಗಾದ ಚಿನ್ಮಲಾದ್ರಿಯ ಚಿದ್ರೂಪಿ ಚಿತ್ರದುರ್ಗ ಶೂನ್ಯ ಪೀಠದ 24ನೇ ಅಧ್ಯಕ್ಷರು, ತ್ರಿವಿಧ ದಾಸೋಹ ತತ್ವದ ರೂವಾರಿಯಾದ ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮಿಗಳು ಮಠದಲ್ಲಿ ಪ್ರತಿವರ್ಷ ವಿಜಯ ದಶಮಿಯ ಹಬ್ಬದ ಸಂದರ್ಭದಲ್ಲಿ ದಸರಾ ಮಹೋತ್ಸವದಂತೆ ಎರಡನೇ ನಾಡ ಹಬ್ಬವಾಗಿ ಈ ಶರಣ ಸಂಸ್ಕೃತಿ ಉತ್ಸವ ಆಚರಿಸುತ್ತಾ, ಶ್ರೀಗಳ ಬೆಳ್ಳಿ ಪ್ರತಿಮೆ ಹಾಗೂ ನೂತನ ಮೂರ್ತಿ ಮೆರವಣಿಗೆಯು ಚಿತ್ರದುರ್ಗದ ರಾಜ ಬೀದಿ ನೆರವೆರಲಿದೆ ಎಂದು ತಿಳಿಸಿದರು.
ಶ್ರೀಗಳಿಂದ ಚಾಲನೆಗೊಂಡ ಹಲವಾರು ಕಡೆಗಳಲ್ಲಿ ವಿದ್ಯಾರ್ಥಿ ನಿಲಯಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಹಲವಾರು ಧ್ರವ್ಯ ಧನ ಸಹಾಯ ಪಡೆದ ಸಂಸ್ಥೆಗಳು ಇಂದಿಗೂ ಪ್ರಸ್ತುತವಾಗಿವೆ ಇದರಿಂದ ನಾಡಿನ ಗಣ್ಯರು ಶ್ಲಾಘೀಸಿದ್ದಾರೆ. ಅಲ್ಲದೇ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಶ್ಲಾಘಸಿದ ಉಲ್ಲೇಖಗಳಿವೆ ಎಂದರು.
ಶ್ರೀಗಳು ಮಹಾ ಜ್ಞಾನಿಗಳಾಗಿದ್ದು ಭಕ್ತರ ಮನದಾಳವನ್ನು ಅರಿತು ದಿವ್ಯ ದೃಷ್ಠಿಯಿಂದ ಸಕಲ ಭಕ್ತಾದಿಗಳ ಬಾಳಿಗೆ ಬೆಳಕು ನೀಡಿ, ಪವಾಡ ಮಾಡಿದ ಐತಿಹ್ಯಗಳಿವೆ ಎಂದು ವಿವರಿಸಿದರು.
ಶ್ರಿಗಳು ಅಭಿಪ್ರಾಯದಂತೆ ಈ ಒಂದು ಪುಸ್ತಕದ ಕೃಪೆ ಈ ರೀತಿಯಾಗಿದೆ. ಒಂದು ಮಠದ ಸ್ವಾಮಿಯೆಂದರೆ ಭಕ್ತಮಂಡಳಿಯಿಂದ ಚುನಾಯಿಸಲ್ಪಟ್ಟ ಅವರ ಒಬ್ಬ ಅಧ್ಯಕ್ಷ. ಹಾಗೆ ಚುನಾಯಿಸಲ್ಪಟ್ಟ ಆ ಸ್ವಾಮಿಗೆ ಸಮಾಜದ ಹಿತಸಾಧನೆಯಲ್ಲದೆ ಬೇರೆ ಉದ್ಯೋಗವಿಲ್ಲ. ಸ್ವಾಮಿಗಳಿಗೆ ದಕ್ಷಿಣೆ ಕೊಡುವುದೊಂದು ಧರ್ಮಕಾರ್ಯವೆಂಬ ನಂಬಿಕೆಯಿದೆ. ಸ್ವಾಮಿಗಳು ವೈರಾಗ್ಯಶೀಲರು. ಆದುದರಿಂದಲೇ ಭಕ್ತರಿಂದ ಸಂದಾಯವಾಗಿ ತಮಗೆ ಬೇಡವಾದ ಆ ದಕ್ಷಿಣೆಯ ಹಣವನ್ನು ಸ್ವಾಮಿಗಳು ಬಡ ಬಗ್ಗರಿಗೆ ಹಂಚುತ್ತಾರೆ. ಅದರಿಂದ ಸಮಾಜದಲ್ಲಿ ಸೌಖ್ಯ ಉಂಟಾಗುತ್ತದೆ. ಇದೇ ಶಿವಶರಣರ ತತ್ವ, ಸಮತಾವಾದದ ತತ್ವ, ಈಗ ಅರ್ಪಿಸಿದ ಬಿನ್ನವತ್ತಳೆಯಲ್ಲಿ ನಮ್ಮ ಔದಾರ್ಯವನ್ನು ಕೊಂಡಾಡಿದ್ದೀರಿ. ಉದಾರವಾಗಿರುವುದು ನಮ್ಮ ಕರ್ತವ್ಯ. ಮನುಷ್ಯನು ದಯಾಶೀಲನಾದಾಗಲೇ ಪರಿಪೂರ್ಣ ಮಾನವನಾಗುವನು. ನಾವು ಮಾಡಿರುವ ಈ ಅತ್ಯಲ್ಪ ಸೇವೆಯನ್ನು ನೀವು ಅಧಿಕವಾಗಿ ವರ್ಣಿಸಿದ್ದೀರಿ, ಅದರಿಂದ ನಮಗೆ ಚಿನ್ನದ ಶೂಲಕ್ಕೇರಿಸಿದಂತಾಗಿದೆ ಎಂದಿದ್ದ ಶ್ರೀಗಳ ಮಾತುಗಳನ್ನು
ಡಾ. ಎಲ್. ಬಸವರಾಜು ಅವರ 1971ರಲ್ಲಿ ಮುದ್ರಣವಾದ ಮಹಾದೇವನ ಮಹಾಲಿಂಗೇಂದ್ರ ವಿಜಯ ಪುಸ್ತಕದಲ್ಲಿ ಉಲ್ಲೇಖವಿದೆ ಎಂದರು.
More Stories
ಲೋಕಾಯುಕ್ತ ಬಲೆಗೆ ಬಿದ್ದ ಸಹಕಾರ ಇಲಾಖೆ ಉಪನಿಬಂಧಕ ದಸ್ತಗೀರ್ ಅಲಿ
ಲೋಕಾಯುಕ್ತ ಬಲೆಗೆ ಬಿದ್ದ ಸಹಕಾರ ಇಲಾಖೆ ಉಪನಿಬಂಧಕ ದಸ್ತಗೀರ್ ಅಲಿ
ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಯಿಂದ ಜಾನಪದ ನೃತ್ಯ ವೈಭವದ ಸಮೂಹ ನೃತ್ಯ ಪ್ರದರ್ಶನ