*ಗ್ರಾಮೀಣ ಕೂಲಿಕಾರರಿಗೆ ನರೇಗಾ ಯೋಜನೆ ಆರ್ಥಿಕ ಸಧೃಡತೆಗೆ ದಾರಿ:ಜಿ.ಪಂ ಸಿಇಒ ರಾಹುಲ್ ರತ್ನಂ ಪಾಂಡೆಯ*
*ಇರಕಲಗಡಾದಲ್ಲಿ ಕೂಲಿಕಾರರು, ಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ಜಿ.ಪಂ ಸಿಇಒ ನರೇಗಾ ದಿವಸದಲ್ಲಿ ಭಾಗಿ*
*ಕೊಪ್ಪಳ*:- ಮಹಾತ್ಮಾ ಗಾಂಧಿ ನರೇಗಾ ಯೋಜನೆಯಿಂದ ಗ್ರಾಮೀಣ ಕೂಲಿಕಾರರಿಗೆ ಕೂಲಿ ಕೆಲಸದಿಂದ ದೊರೆಯುವ ಕೂಲಿ ಹಣವು ಆರ್ಥಿಕ ಸಧೃಡತೆಗೆ ದಾರಿಯಾಗಿದೆ ಎಂದು *ಕೊಪ್ಪಳ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕಅಧಿಕಾರಿಗಳಾಸ ರಾಹುಲ್ ರತ್ನಂ ಪಾಂಡೆಯ* ಕರೆ ನೀಡಿದರು.
*ದಿನಾಂಕ:02-02-2025ರಂದು ಕೊಪ್ಪಳ ತಾಲೂಕಿನ ಇರಕಲ್ಲಗಡಾ ಗ್ರಾಮ ಪಂಚಾಯತಿಯಿಂದ ಯಲಮಗೇರಾ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ* ಆಯೋಜಿಸಿದ್ದ ನರೇಗಾ ದಿವಸ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೇವಲ ಸಾಮುದಾಯಿಕ ಕಾಮಗಾರಿ ಮಾತ್ರವಲ್ಲದೇ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶವಿರುತ್ತದೆ. ವೈಯಕ್ತಿಕ ಕಾಮಗಾರಿಗಳಾದ ದನದಶೆಡ್, ಕುರಿಶೆಡ್, ಕೋಳಿಶೆಡ್, ಹಂದಿಶೆಡ್, ತೋಟಗಾರಿಕೆ ಬೆಳೆ, ರೇಷ್ಮೆ ಬೆಳೆ ಕಾಮಗಾರಿ ಅನುಷ್ಠಾನ ಮಾಡಿಕೊಂಡು ಆರ್ಥಿಕ ಸಬಲರಾಗಬಹುದೆಂದರು.
*ಜಿ.ಪಂ ಮಾನ್ಯ ಯೋಜನಾ ನಿರ್ದೇಶಕರು* ಮಾತನಾಡಿ ನರೇಗಾ ಯೋಜನೆಯು ಗ್ರಾಮೀಣ ಭಾಗದ ಕುಟುಂಬಗಳಿಗೆ ವರದಾನವಾಗಿದೆ. ಪ್ರತಿಯೊಂದು ಕುಟುಂಬವು 100 ದಿನಗಳ ಕೂಲಿ ಕೆಲಸ ನಿರ್ವಹಿಸಿ ಸಬಲರಾಗಬೇಕೆಂದು ಕರೆ ನೀಡಿದರು.
*ಮಾನ್ಯ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು* ಮಾತನಾಡಿ ನರೇಗಾ ಯೋಜನೆ ನಡೆದು ಬಂದ ದಾರಿ ಕುರಿತು ಪ್ರಾಸ್ತಾವಿಕ ಮಾತನಾಡಿದರು.
*ಕೆಕ್ ಕತ್ತರಿಸಿ ಸಂಭ್ರಮಿಸಿದ ಕೂಲಿಕಾರರು*:-ಗ್ರಾಮ ಪಂಚಾಯತಿಯಿಂದ ಆಯೋಜಿಸಿದ 05 ಕೆಜಿ ಕೇಕ್ ಕೂಲಿಕಾರರಿಂದ ಕತ್ತರಿಸಿದ ಮೇಲೆ ಹಿರಿಯ ನಾಗರೀಕ ನಿಂಗಪ್ಪ ಕಾಮನೂರು ಇವರಿಗೆ ಸ್ವತಃ ಸಿಇಒ ಕೆಕ್ ತಿನಿಸಿದ್ದರಿಂದ ಕೂಲಿಕಾರರಲ್ಲಿ ಸಂತಸ ಮನೆ ಮಾಡಿತು. ನರೇಗಾ ದಿವಸ ಕೂಲಿಕಾರರ ದಿನವೆಂದು ಖುಷಿಪಟ್ಟರು.
*ಕೂಲಿಕಾರರು, ಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ವೇದಿಕೆ ಹಂಚಿಕೊಂಡ ಸಿಇಒ*:- ಕಾರ್ಯಕ್ರಮದ ವೇದಿಕೆಯಲ್ಲಿ ಕೂಲಿಕಾರ ಮಹಿಳೆ ಹಾಗು ಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ಸಾಮನ್ಯರಂತೆ ವೇದಿಕೆ ಹಂಚಿಕೊಂಡಿರುವದು ಜಿ.ಪಂ ಸಿಇಒರವರ ನಡೆ ಎಲ್ಲರ ಗಮನ ಸೆಳೆಯಿತು.
*ಕೂಲಿಕಾರರಿಗೆ ಆರೋಗ್ಯ ತಪಾಸಣೆ*:-ನರೇಗಾ ದಿವಸ ಕಾರ್ಯಕ್ರಮದಲ್ಲಿ ಇರಕಲ್ಲಗಡಾ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಕೂಲಿಕಾರರಿಗೆ ಬಿಪಿ, ಶುಗರ್ ಪರೀಕ್ಷಿಸಲಾಯಿತು.
*ಪ್ರಶಂಸನಾಪತ್ರ ವಿತರಣೆ*:- 100 ದಿನಗಳ ಕೂಲಿ ಕೆಲಸ ನಿರ್ವಹಿಸಿದ 9 ಕುಟುಂಬಗಳಿಗೆ ಹಾಗು ಲಿಂಗತ್ವ ಅಲ್ಪಸಂಖ್ಯಾತರಿಗೆ ಶಾಲು, ಹೂವಿನಹಾರ ಹಾಕುವದರ ಮೂಲಕ ಕಾಯಕ ಸಮ್ಮಾನ ಪ್ರಶಸ್ತಿಪತ್ರ ಹಾಗು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರಾದ ಪ್ರಕಾಶ ವಿ,ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಯಂಕಪ್ಪ,ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಿವಮ್ಮ ಶೇಖರಪ್ಪ ನಾಯ್ಕ, ಉಪಾಧ್ಯಕ್ಷೆ ಬಂಗಾರೆಮ್ಮ ವಾಲ್ಮೀಕಿ, ಸದಸ್ಯರಾದ ಗೌರೀಶ ಸಂಗಟಿ ನೀಲಪ್ಪ ತಾವರಗೇರಿ, ರಾಮಣ್ಣ ಗೋಸಲದೊಡ್ಡಿ
ವೀರಭದ್ರಯ್ಯ ಕಲ್ಮಠ, ದ್ಯಾಮಣ್ಣ ದೇಸಾಯಿ, ಶಿವಗಂಗಮ್ಮ ಈರಪ್ಪ ಮನ್ನಾಪುರ, ವೈದ್ಯಾಧಿಕಾರಿ ಲಕ್ಷ್ಮೀ ಕೆ, ಪಂಚಾಯತ ಅಭಿವೃದ್ದಿ ಅಧಿಕಾರಿ ಪರಮೇಶ್ವರಯ್ಯ ತೆಳಗಡೆಮಠ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ,ದ್ವೀತಿಯ ದರ್ಜೆ ಲೆಕ್ಕ ಸಹಾಯಕಿ ರೇಣುಕಾ,
ತಾಂತ್ರಿಕ ಸಹಾಯಕ ಮಲ್ಲಿಕಾರ್ಜುನ ಮೇಗಳಮನಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಬೇರ್ ಪೂಟ್ ಟೆಕ್ನಿಷಿಯನ್ ರವಿಶಂಕರ ಪೂಜಾರಿ,ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಮೌನೇಶ್, ಶರಣಪ್ಪ, ಗ್ರಾಮ ಕಾಯಕ ಮಿತ್ರ ಶ್ರೀದೇವಿ, ಲಿಂಗತ್ವ ಅಲ್ಪಸಂಖ್ಯಾತರಾದ ಹುಲಿಗೆಮ್ಮ, ಕಮಲಾಕ್ಷಿ, ಆಶಾಕಾರ್ಯಕರ್ತೆಯರು ಕಾಯಕ ಬಂಧುಗಳು ಹಾಗು 210 ಕೂಲಿಕಾರರು ಭಾಗವಹಿಸಿದ್ದರು*
More Stories
ಕಿನ್ನಾಳ ಗ್ರಾಮದಲ್ಲಿ ಜನರ ಮನ ಸೆಳೆದ ಸಂಗೀತ ಸಂಭ್ರಮ.
ಅಕ್ಷರ ಜ್ಞಾನಕ್ಕಿಂತ ಅರಿವಿನ ಜ್ಞಾನವೇ ಶಿಕ್ಷಣ : ಗವಿಶ್ರೀ
ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದ ಪಾಯೋನಿಯರ್ ಶಾಲೆಯ ವಿದ್ಯಾರ್ಥಿ ಸಾಕ್ಷಿ ಹುಡೇದ್