9 January 2025

ಗೊಂದಲದ ಮದ್ಯೆಯು ಕುತೂಹಲ ಮೂಡಿಸಿದ ಚುನಾವಣೆ

ಶಾಂತಿಯುತವಾಗಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮತದಾನ

  •  ಗೊಂದಲದ ಮದ್ಯೆಯು ಕುತೂಹಲ ಮೂಡಿಸಿದ ಚುನಾವಣೆ

*ವರದಿ : ಪಂಚಯ್ಯ ಹಿರೇಮಠ.*

ಕುಕನೂರು : ರವಿವಾರದಂದು ಬೆಳಗ್ಗೆ ಪ್ರಾರಂಭಗೊಂಡ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ತುರುಸಿನಿಂದ ನಡೆಯಿತಾದರೂ ಗೊಂದಲದ ಮದ್ಯೆ ಚುನಾವಣೆ ಜರುಗಿತು

ಮೊದಲನೇ ಭೂತ್ ನಲ್ಲಿ ಸಾಲಗಾರರ ಕ್ಷೇತ್ರದ 338 ಮತದಾರರು ಹಾಗೂ ಸಾಲಗಾರರಲ್ಲದ 79ಮತದಾರನ್ನು ಹೊಂದಿದಂತೆ ಚುನಾವಣೆ ಪ್ರಾರಂಭಮಾಡುತ್ತಿದ್ದಂತೆ, ಇನ್ನೂಳಿದ ಷೇರುದಾರರಲ್ಲಿ 436 ಮತದಾರರು ಕೊರ್ಟನ ಆದೇಶದ ಮೇಲೆ ಮತದಾನದ ಹಕ್ಕು ಹೊಂದಿದ್ದು ಅವರಿಗೆ ಎರಡನೇ ಭೂತ್ ನ್ನು ಮಾಡಿ ಮತದಾನಕ್ಕೆ ಅನೂಕೂಲ ಕಲ್ಪಿಸಲಾಗಿತ್ತು.

ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ ಮತದಾನದಲ್ಲಿ ಮೊದಲನೇ ಬೂತ್ ನಲ್ಲಿ ಸಾಲಗಾರರ ಕ್ಷೇತ್ರದಲ್ಲಿ 338 ಮತದಾರರ ಪೈಕಿ 320 ಚಲಾವಣೆಗೊಂಡಿವೆ, ಸಾಲಗಾರರಲ್ಲದ 79 ಮತಗಳ ಪೈಕಿ 72 ಮತಗಳು ಚಲಾವಣೆಗೊಂಡಿವೆ.

ಅನರ್ಹಗೊಂಡ 611ಮತದಾರ ಪಟ್ಟಿಯಲ್ಲಿನ 336 ಸೆರ್ಪಡೆಯಾಗಿದ್ದು ಅದರಲ್ಲಿ 248 ಮತಗಳು ಚಲಾವಣೆಯಾಗಿವೆ. ಒಟ್ಟು 674 ಮತಗಳಲ್ಲಿ 568ಮತಗಳು ಚಲಾವಣೆಯಾಗಿವೆ ಎಂದು ಚುನಾವಣಾಧಿಕಾರಿ ಹನುಮಂತಪ್ಪ ನಾಮದಾರ ತಿಳಿಸಿದರು.