23 December 2024

ಗೊಂದಲಗೂಡಾದ ಕುಕನೂರು ಪಟ್ಟಣ ಪಂಚಾಯತಿ

ರಾಜ್ಯ ಸರ್ಕಾರ ಪಟ್ಟಣ ಪಂಚಾಯತಿ ಮೀಸಲಾತಿ ಪ್ರಕಟಣೆ

ಪಟ್ಟಣ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ, ಪ್ರತಿನಿಧಿಗಳ ಆಯ್ಕೆ ಪ್ರಕ್ರೀಯೇ ಪ್ರಾರಂಭ

ಗೊಂದಲಗೂಡಾದ ಕುಕನೂರು ಪಟ್ಟಣ ಪಂಚಾಯತಿ

ವರದಿ : ಪಂಚಯ್ಯ ಹಿರೇಮಠ

ಕೊಪ್ಪಳ : ಸುಮಾರು ಎರಡು ವರ್ಷಗಳ ವನವಾಸದ ನಂತರ ಚುನಾಯಿತ ಪಟ್ಟಣ ಪಂಚಾಯತಿ ಪ್ರತಿನಿಧಿಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಣೆ ಮಾಡುವ ಮೂಲಕ ಅಧಿಕಾರದ ಅವಕಾಶ ಮಾಡಿಕೊಡುತ್ತಿದೆ.

ರಾಜ್ಯದ 117 ಪಟ್ಟಣ ಪಂಚಾಯತಿ ಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ರಾಜ್ಯ ಸರ್ಕಾರ ಇಂದು ಮೀಸಲಾತಿ ಪ್ರಕಟಿಸಿದ್ದು, ಅದರಂತೆ ಕುಕನೂರು ಪಟ್ಟಣ ಪಂಚಾಯತಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿ ಡಲಾಗಿದ್ದು, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಒಲಿದಿದೆ

ಇದರಿಂದ ಗೊಂದಲದ ಗೂಡಾಗಿದೆ.

ಸುಮಾರು ಎರಡು ವರ್ಷದ ನಂತರ ಪಟ್ಟಣ ಪಂಚಾಯತಿ ಜನಪ್ರತಿನಿಧಿಗಳ ಆಡಳಿತಕ್ಕೆ ಅವಕಾಶ ಕೂಡಿ ಬಂದಿದೆ.

ಇದುವರೆಗೂ ತಾಲೂಕು ದಂಡಾಧಿಕಾರಿ ಮೇಲಧಿಕಾರದಲ್ಲಿ ಆಡಳಿತ ನಡೆಯುತ್ತಿತ್ತು. ಇನ್ನೂ ಮುಂದೆ ಜನಪ್ರತಿನಿಧಿಗಳ ಆಡಳಿತಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿದೆ.

ಇದರಿಂದಾಗಿ ಅಧ್ಯಕ್ಷ, ಉಪಾಧ್ಯಕ್ಷ ಆಕಾಂಕ್ಷಿಗಳಲ್ಲಿ ರಾಜಕೀಯ ಗರಿಗೆದರಿದೆ ಎನ್ನಬಹುದು.