23 December 2024

ಕೊಪ್ಪಳ ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸಿನ ಅಮ್ಜದ್ ಪಟೇಲ್, ಉಪಾಧ್ಯಕ್ಷರಾಗಿ ಅಶ್ವಿನಿ ಗದುಗಿನಮಠ ಆಯ್ಕೆ

‍ಅಲ್ಪಸಂಖ್ಯಾತ ಸಮುದಾಯದ ನಾಯಕನಿಗೆ ನಗರಸಭಾ ಅಧ್ಯಕ್ಷ ಸ್ಥಾನ

ಮೂರುವರೆ ದಶಕದ ಬೇಡಿಕೆ ಈಡೇರಿಸಿದ ಶಾಸಕ ಹಿಟ್ನಾಳ 

====

  • ಕೊಪ್ಪಳ ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸಿನ ಅಮ್ಜದ್ ಪಟೇಲ್, ಉಪಾಧ್ಯಕ್ಷರಾಗಿ ಅಶ್ವಿನಿ ಗದುಗಿನಮಠ ಆಯ್ಕೆ

=========

ಕೊಪ್ಪಳ, ಆ.21 ಕೊಪ್ಪಳ ನಗರಸಭೆ 14 ತಿಂಗಳ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರದಂದು ಚುನಾವಣೆ ನಿಗದಿಯಾಗಿದ್ದು, ಕೊಪ್ಪಳ ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಸದಸ್ಯ, ಅಲ್ಪಸಂಖ್ಯಾತರ ಸಮುದಾಯದ ಹಿರಿಯ ನಾಯಕ ಕಾಂಗ್ರೆಸ್ಸಿನ ಅಮ್ಜದ್ ಪಟೇಲ್ ಪ್ರಚಂಡ ಬಹುಮತದ ಗೆಲವು ಸಾಧಿಸಿ ಆಯ್ಕೆಗೊಂಡಿದ್ದಾರೆ ,

ಕೊಪ್ಪಳ ನಗರಸಭೆಯ ಒಟ್ಟು 31 ವಾರ್ಡ್ ಗಳಲ್ಲಿ ಇಬ್ಬರು ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಇನ್ನುಳಿದ 29 ಸದಸ್ಯರಲ್ಲಿ 23 ಸದಸ್ಯರು ಶಾಸಕ ಸಂಸದ ಸೇರಿ ಒಟ್ಟು 25 ಮತ ಕಾಂಗ್ರೆಸ್ ಅಭ್ಯರ್ಥಿ ಅಮ್ಜದ್ ಪಟೇಲ್ ಗೆ ಲಭಿಸಿದರೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ ಬಿಜೆಪಿಯ ಸೋಮಣ್ಣ ಹಳ್ಳಿಗೆ 6 ಮತ ಒಳಗೊಂಡಂತೆ ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕರ ಒಂದು ಮತ ಸೇರಿ ಒಟ್ಟು 07 ಮತ ಬಿಜೆಪಿ ಅಭ್ಯರ್ಥಿ ಗೆ ಲಭಿಸಿದೆ ಅದೇ ರೀತಿ ಉಪಾಧ್ಯಕ್ಷ ಸ್ಥಾನ ಕ್ಕೆ ಸ್ಪರ್ಧಿಸಿದ ಅಶ್ವಿನಿ ಗದುಗಿನ ಮಠ ರವರಿಗೆ 25 ಮತ ಲಭಿಸಿದರೆ ಬಿಜೆಪಿಯಿಂದ ಉಪಾಧ್ಯಕ್ಷ ಸ್ಥಾನಕ್ಕೆಸ್ಪರ್ಧಿಸಿದ ದೇವಮ್ಮ ಕಂದಾರಿಗೆ 07 ಮತ ಲಭಿಸಿದೆ

ಈ ಚುನಾವಣೆಗ ಎನ್ನುಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಘೋಷಣೆ ಮಾಡಿದರು ,

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಗರಸಭೆ ಗಾದಿಗೇರಲು ಚಟುವಟಿಕೆಗಳು ಬಲು ಜೋರಾಗಿ ಕೆಲವು ದಿನಗಳಿಂದ ನಡೆಯುತ್ತಿದ್ದು. ಅಧ್ಯಕ್ಷ ಸ್ಥಾನಕ್ಕೆ ಸಾಮನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಯಾಗಿದ್ದು, ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರ ಪ್ರಯತ್ನದಿಂದಾಗಿ 35 ವರ್ಷಗಳ ಬಳಿಕ ಅಲ್ಪಸಂಖ್ಯಾತ ಸಮುದಾಯದ ಹಿರಿಯ ನಾಯಕನಿಗೆ ಸಿಎಂಸಿ ಚೇರ್ಮನ್ ಪಟ್ಟ ದೊರೆಯಿತು ಸುಮಾರು ಮೂರುವರೆ ದಶಕಗಳ ಬೇಡಿಕೆಯಾಗಿದ್ದ ಕನಸು ಶಾಸಕರ ಪ್ರಮಾಣಿಕ ಪ್ರಯತ್ನದಿಂದ ಸಫಲಗೊಂಡಿತು ,ಈ ಹಿನ್ನೆಲೆಯಲ್ಲಿ ಹಲವು ಸದಸ್ಯರ ಬೆಂಬಲದಿಂದಾಗಿ ಅಲ್ಪಸಂಖ್ಯಾತರ ಸಮುದಾಯದ ಮುಖಂಡ, ನಗರಸಭೆ ಮಾಜಿ ಉಪಾಧ್ಯಕ್ಷ, ಸತತ ನಾಲ್ಕು ಬಾರಿ ನಗರಸಭೆ ಚುನಾವಣೆಯಲ್ಲಿ ಜಯಗಳಿಸಿದ ಹಿರಿಯ ಸದಸ್ಯ ಹ್ಯಾಟ್ರಿಕ್ ಹೀರೋ ಎಂದೇ ಫೇಮಸ್ ಆಗಿದ್ದ ಅಮ್ಜದ್ ಪಟೇಲ್ ಅವರು ನಗರಸಭೆ ಅಧ್ಯಕ್ಷರ ಗಾದಿ ಹಿಡಿಯುವ ಹಾದಿ ಸುಗಮವಾಗಿ ಯಶಸ್ವಿ ಕೊಂಡಿತು,ಅಲ್ಲದೆ ಅಮ್ಜದ್ ಪಟೇಲ್ ರವರು ಸ್ಥಳಿಯ ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ರವರ ಆಪ್ತರ ವಲಯದಲ್ಲಿ ಗುರುತಿಸಿಕೊಂಡಿದ್ದು ಸಚಿವ ಜಮೀರ್ ಅಹ್ಮದ್ ಖಾನ್ ರವರ ಪ್ರೀತಿಯ ವ್ಯಕ್ತಿ ಹಾಗೂ ಯುವ ನಾಯಕ ಯಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಸಹ ಚಿರ ಪರಿಚಿತ ರಾಗಿರುವುದರಿಂದ ಹೆಚ್ಚಿನ ಅಭಿವೃದ್ಧಿ ಇವರ ಅಧಿಕಾರ ಅವಧಿಯಲ್ಲಿ ನಡೆಯಬಹುದು ಎಂಬ ಲೆಕ್ಕಚಾರ ಮಾಡಲಾಗಿದೆ ಕೊಪ್ಪಳ ನಗರಕ್ಕೆ ಹೆಚ್ಚಿನ ಅನುದಾನ ತರುವಲ್ಲಿ ಇವರು ಶ್ರಮಿಸಬಹುದು ಎನ್ನಲಾಗಿದೆ ಇವರ ಮೇಲೆ ಹೆಚ್ಚಿನ ನಿರೀಕ್ಷೆ ಸಹ ಮಾಡಲಾಗಿದೆ ಕೊಪ್ಪಳ ನಗರದ ಅಭಿವೃದ್ಧಿಗಾಗಿ ಹತ್ತು ಹಲವಾರು ಸಮಸ್ಯೆ ಗಳಿವೆ, ಕಡಿಮೆ ಸಮಯವಿದ್ದರೂ ಸಹ ಈ ಸುವರ್ಣ ಅವಕಾಶ ಓರ್ವ ಹಿರಿಯ ಸದಸ್ಯನಿಗೆ ಒಲಿದು ಬಂದಿರುವುದು ಕೊಪ್ಪಳವು ಮತ್ತಷ್ಟು ಅಭಿವೃದ್ಧಿಗೆ ಹೆಸರಾಗಲಿ ಎಂಬುವುದೇ ನಗರದ ಜನರ ಪ್ರಮುಖ ಬಯಕೆಯಾಗಿದೆ.

ಸುಮಾರು ಮೂರುವರೆ ದಶಕಗಳ ಬಳಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸಿಕ್ಕಿರುವ ಈ ಅವಕಾಶ ಕೆ ಪ್ರಮುಖ ಕಾರ್ಣಿಕರ್ತ ರಾಗಿರುವ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಸಂಸದ ಕೆ ರಾಜಶೇಖರ ಹಿಟ್ನಾಳ ಮಾಜಿ ಶಾಸಕ ಕೆ ಬಸವರಾಜ ಹಿಟ್ನಾಳ ಅಲ್ಲದೆ ಮಾಜಿ ಸಂಸದ ಸಂಗಣ್ಣ ಕರಡಿ ಅಲ್ಪಸಂಖ್ಯಾತ ಸಮುದಾಯದ ರಾಜ್ಯ ನಾಯಕರಾಗಿರುವ ಸಚಿವ ಜಮೀರ್ ಅಹ್ಮದ್ ಖಾನ್ ರವರ ಪ್ರಯತ್ನದ ಫಲಕ್ಕೆ ಸಂದ ಜಯ ಮತ್ತು ಸಮಾಜಕ್ಕೆ ಸಂದ ಗೌರವವಾಗಿದೆ ಅಮ್ಜದ್ ಪಟೇಲ್ ಜಯ ಸಾಧಿಸಿದ ಬಳಿಕ ಕೊಪ್ಪಳ ನಗರದ ಮುಸ್ಲಿಂ ಸಮಾಜ ಬಾಂಧವರು ಸೇರಿದಂತೆ ವಿವಿಧ ಸಮಾಜ ಬಾಂಧವರು ಹರ್ಷ ವ್ಯಕ್ತಪಡಿಸಿ ಒಬ್ಬ ಹಿರಿಯ ಅನುಭವಿ ಸದಸ್ಯರಿಗೆ ಕೊಪ್ಪಳ ನಗರಸಭಾ ಅಧ್ಯಕ್ಷ ಪಟ್ಟ ಸಿಕ್ಕಿರುವುದು ಸಂತೋಷ ಉಂಟು ಮಾಡಿದೆ ಅಭಿವೃದ್ಧಿಗೆ ಬಹಳಷ್ಟು ಅನುಕೂಲ ಹೋಗುತ್ತದೆ ಜಿಲ್ಲಾ ಕೇಂದ್ರವಾದ ಕೊಪ್ಪಳಕ್ಕೆ ಒಳ್ಳೆಯ ಸ್ಥಾನಮಾನ ಸಿಗುವ ದಿಶೆಯಲ್ಲಿ ಹಾಗೂ ನಗರದ ಸರ್ವಾಂಗಣ ಅಭಿವೃದ್ಧಿ ಇವರ ಅವಧಿಯಲ್ಲಿ ನಡೆಯಲಿ ಎಂಬ ಆಶಯ ಸಮಾಜ ಬಾಂಧವರು ವ್ಯಕ್ತಪಡಿಸಿದ್ದಾರೆ ಆಯ್ಕೆಸಂದರ್ಭ ದಲ್ಲಿ ಕೊಪ್ಪಳ ನಗರಸಭೆ ಮುಂದೆ ಭಾರಿ ಸಂಖ್ಯೆಯಲ್ಲಿ ಜನಸಮುದಾಯ ಸೇರಿ ಪಟಾಕಿ ಸಿಡಿಸಿ ಸಿಹಿ ಹಂಚಿಸಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು ವಿವಿಧ ಸಂಘಟನೆಗಳು ಮತ್ತು ಅವರ ಅಭಿಮಾನಿ ಬಳಗ ಸಹ ಪಾಲ್ಗೊಂಡು ಸಂಭ್ರಮಾಚರಣೆ ಮಾಡಿದರು ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ ನೀಡಿ ಸುಗಮ ವಾಗಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವಂತೆ ವ್ಯವಸ್ಥೆ ಮಾಡಿದ್ದರು ನೂತನ ಅಧ್ಯಕ್ಷ ಅಮ್ಜದ್ ಪಟೇಲ್ ರವರಿಗೆ ಅಭಿನಂದನೆಗಳ ಸುರಿಮಳೆ ಕಂಡುಬಂದಿತು

ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಅಶ್ವಿನಿ ಭರತ್ ಕುಮಾರ್ ಗದಗಿನಮಠ್ ರವರು ಜಯ ಸಾದಿಸಿದರು ,ಮಾಜಿ ಸಂಸದ ಸಂಗಣ್ಣ ಕರಡಿಯವರ ಬೆಂಬಲಿಗ ಅಭ್ಯರ್ಥಿ ಯಾಗಿರುವ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿ ಜಯ ಸಾಧಿಸಿ ಆಯ್ಕೆ ಗೋಂಡರು