- ಕೊಪ್ಪಳಪರಿಶಿಷ್ಟ ಪಂಗಡ ಮೆಟ್ರಿಕ್ ನಂತರ ಬಾಲಕಿಯರ ಹಾಸ್ಟೆಲ್ ನ್ನು ವಿಭಾಗ ಮಾಡಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು:SFIರಾಜ್ಯಾಧ್ಯಕ್ಷ ಅಮರೇಶ ಕಡಗದ ಆಗ್ರಹ
ಕೊಪ್ಪಳ:ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಕರ್ನಾಟಕ ರಾಜ್ಯ ಸಮಿತಿಯು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪರಿಶಿಷ್ಟ ಪಂಗಡ ಮೆಟ್ರಿಕ್ ನಂತರ ಬಾಲಕಿಯರ ಹಾಸ್ಟೆಲ್ ನ್ನು ವಿಭಾಗ ಮಾಡಿ ಮೂಲಭೂತ ಸೌಕರ್ಯಗಳನ್ನು ಹಾಗೂ ವಿವಿಧ ಮೂಲಭೂತ ಸೌಕರ್ಯಗಳ ಕುರಿತು ಧರಣಿ ಮಾಡುವ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಧರಣಿಯನ್ನು ನಿಲ್ಲಿಸುವಂತೆ ಮನವಿ ಮಾಡಿಕೊಂಡ ನಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮಾನ್ಯ ರಾಹುಲ್ ರತಂ ಪಾಂಡೆ ರವರಿಗೆ ಮನವಿ ಸಲ್ಲಿಸಿ ನಂತರ ಕೊಪ್ಪಳ ನಗರದಲ್ಲಿರುವ ಪರಿಶಿಷ್ಟ ಪಂಗಡ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ನಲ್ಲಿ ಅನೇಕ ಮೂಲಭೂತ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿನಿಯರಿಗೆ ವಿಧ್ಯಾಭ್ಯಾಸ ಮಾಡಲು ಅನಾನುಕೂಲ ಆಗುತ್ತದೆ.*
ಸುಮಾರು 100 ವಿದ್ಯಾರ್ಥಿನಿಯರು ಇರಬೇಕಾದ ಕಟ್ಟಡದಲ್ಲಿ ಸುಮಾರು 375 ಕ್ಕೂ ಅಧಿಕ ವಿದ್ಯಾರ್ಥಿನಿಯರು ಹಾಸ್ಟೆಲ್ ನಲ್ಲಿ ಇದ್ದಾರೆ ಇದರಿಂದಾಗಿ ಹಲವಾರು ವಿದ್ಯಾರ್ಥಿನಿಯರಿಗೆ ಮಲಗಲು ಜಾಗ ಇಲ್ಲ ಹಾಗೂ ಸಮಯಕ್ಕೆ ಸರಿಯಾಗಿ ಸ್ನಾನ ಮಾಡಲು, ಬಟ್ಟೆ ತೋಳೆಯಲು ಸಮಸ್ಯೆ ಎದುರುಸುತ್ತಾ ಇದ್ದಾರೆ ಹಾಗೂ ಹಾಸ್ಟೆಲ್ ನಲ್ಲಿ ಪ್ರತಿನಿತ್ಯ ಕಳೆಪ ಮಟ್ಟದ ಅಡುಗೆ ಮಾಡುತ್ತಾರೆ ಮತ್ತು ಕಳಪೆ ಮಟ್ಟದಿಂದ ಕೂಡಿದ ತರಕಾರಿಗಳನ್ನು ಬಳಕೆ ಮಾಡುತ್ತಾರೆ ಈ ಬಗ್ಗೆ ಹಲವಾರು ಸಾರಿ ವಿದ್ಯಾರ್ಥಿಗಳು ಹೇಳಿದರು ಯಾವುದೇ ರೀತಿಯಿಂದ ಬದಲಾವಣೆ ಮಾಡಿಕೊಂಡಿರವುದಿಲ್ಲ, ಕೊಪ್ಪಳ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯಿಂದ ನಡೆಯುತ್ತಿರುವ ಹಾಸ್ಟೆಲ್ ಗಳಿಗೆ ಸಂಬಂಧಿಸಿದ ಇಲಾಖೆಯ ಆಯುಕ್ತರು ಹಾಗೂ ನ್ಯಾಯಾಧೀಶರು, ಉಪ ಲೋಕಯುಕ್ತರು ಹಲವಾರು ಅಧಿಕಾರಿಗಳು ಹಾಸ್ಟೆಲ್ ಗಳಿಗೆ ಬೇಟೆ ನೀಡಿದಾಗ ಸುಧಾರಣೆ ಮಾಡಲು ಸೂಚನೆ ಕೊಟ್ಟಿದರು ಹಲವಾರು ಸಮಸ್ಯೆಗಳು ಇನ್ನೂ ಜೀವಂತವಾಗಿ ಹಾಗೇಯೆ ಇವೆ ಆದ್ದರಿಂದ ಈ ಕೆಳಕಾಣಿಸಿದ ವಿದ್ಯಾರ್ಥಿನಿಯರ ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಕರ್ನಾಟಕ ರಾಜ್ಯ ಸಮಿತಿ ಹಾಗೂ ಕೊಪ್ಪಳ ಜಿಲ್ಲಾ ಸಮಿತಿ ಮನವಿ ಪತ್ರದ ಮೂಲಕ ಒತ್ತಾಯ ಮಾಡುತ್ತದೆ.ST ಮೆಟ್ರಿಕ್ ನಂತರ ಬಾಲಕಿಯರ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಜಾಸ್ತಿ ಇರುವುದರಿಂದ ಕೂಡಲೇ ವಿಭಾಗ ಮಾಡಬೇಕು.
*ವಿದ್ಯಾರ್ಥಿನಿಯರಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಿಸಬೇಕು. ಹಾಸ್ಟೆಲ್ ಗೆ C.C ಕ್ಯಾಮೆರಾ ಅಗತ್ಯ ಇದ್ದು C.C ಕ್ಯಾಮರಾ ಹಾಕಿಸಬೇಕು.*ಹಾಸ್ಟೆಲ್ ನಲ್ಲಿ ಗ್ರಂಥಾಲಯ ಪ್ರಾರಂಭ ಮಾಡಿ ವಿದ್ಯಾರ್ಥಿನಿಯರಿಗೆ ವಿದ್ಯಾಭ್ಯಾಸದ ಪುಸ್ತಕ ಹಾಗೂ ಸ್ಪರ್ಧಾತ್ಮಕ ಪುಸ್ತಕಗಳನ್ನು ಒದಗಿಸಬೇಕು.*ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕಾಗಿ SFI ಮುಂಖಡರನ್ನು ಒಳಗೊಂಡಂತೆ ಜಂಟಿ ಸಭೆ ಮಾಡಬೇಕು.ಅಮರೇಶ ಕಡಗದರಾಜ್ಯಾಧ್ಯಕ್ಷರು ಶಿವಕುಮಾರ ರಾಜ್ಯ ಸಮಿತಿ ಸದಸ್ಯರು ಬಾಲಾಜಿಜಿಲ್ಲಾ ಮುಂಖಡರು.ಅಂಬ್ರಯ್ಯ ಹಿರೇಮಠ್ ಜಿಲ್ಲಾ ಮುಂಖಡರು ಅಮರೇಶ್ ಲಿಂಗದಹಳ್ಳಿ*ಜಿಲ್ಲಾ ಮುಂಖಡರುವಿದ್ಯಾರ್ಥಿನಿಯರಾದ ಪೂಜಾ, ಲಲಿತಾ, ಲಕ್ಷ್ಮೀ, ಕವಿತಾ, ಶರಣಮ್ಮ ಇತರರು ಇದ್ದರು.
ವರದಿ : ಲಕ್ಷ್ಮಣ್ ನವಲಹಳ್ಳಿ(ಹೊಮ್ಮಿನಾಳ)
More Stories
ಲೋಕಾಯುಕ್ತ ಬಲೆಗೆ ಬಿದ್ದ ಸಹಕಾರ ಇಲಾಖೆ ಉಪನಿಬಂಧಕ ದಸ್ತಗೀರ್ ಅಲಿ
ಲೋಕಾಯುಕ್ತ ಬಲೆಗೆ ಬಿದ್ದ ಸಹಕಾರ ಇಲಾಖೆ ಉಪನಿಬಂಧಕ ದಸ್ತಗೀರ್ ಅಲಿ
ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಯಿಂದ ಜಾನಪದ ನೃತ್ಯ ವೈಭವದ ಸಮೂಹ ನೃತ್ಯ ಪ್ರದರ್ಶನ