- ಕೊಪ್ಪಳದ ಪ್ರಸಿದ್ಧ ಉರ್ದು ಕವಿ ಮೊಹಮ್ಮದ್ ನಯ್ಯರ್ ಪಾಷಾ ಖಲೀಲಿ ನಿಧನ.
ಕೊಪ್ಪಳ : ಸಂಘಟಕ, ಹೋರಾಟಗಾರ ಎಸ್.ಎ.ಗಫಾರ್ ಅವರ ಹಿರಿಯ ಅಕ್ಕನ ಗಂಡ ನಗರದ ಗೌರಿ ಅಂಗಳದ ಉರೂಬ್ ಮಸೀದಿ ಪಕ್ಕದಲ್ಲಿರುವ ಪ್ರಸಿದ್ಧ ಹಿರಿಯ ಉರ್ದು ಕವಿ ಮತ್ತು ಶಾಯರ್ ಮೊಹಮ್ಮದ್ ನಯ್ಯರ್ ಪಾಷಾ ಖಲೀಲಿ 83 ವಯಸ್ಸಿನ ಅವರು ಸೆಪ್ಟೆಂಬರ್ 30 ರಂದು ಸೋಮವಾರ ಮಧ್ಯಾಹ್ನ 2:30 ಸುಮಾರಿಗೆ ನಿಧನ ಹೊಂದಿದರು.
ಮಂಗಳವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ನಗರದ ಗೌರಿ ಅಂಗಳದ ಉರೂಬ್ ಮಸೀದಿ ಪಕ್ಕದಲ್ಲಿರುವ ಅವರ ನಿವಾಸದಿಂದ ಹೊರಟು ಮರ್ದಾನ್ ಎ ಗೈಬ್ ದರ್ಗಾದ ಮುಂಭಾಗದಲ್ಲಿರುವ ಮೋಥಿ ಕೆರೆ (ಮೋಥಿ ತಲಾಬ್) ಬಳಿಯ ಕಮಾನ್ ಹತ್ತಿರದ ಖಬ್ರಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಹಿರಿಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೃತರಿಗೆ ಮೊಹಮ್ಮದ್ ಇಬ್ರಾಹಿಮ್ ಖಲೀಲಿ, ಮೌಲಾನಾ ಮೊಹಮ್ಮದ್ ಮೋಯೀನ್ ಖಲೀಲಿ ಕಾಮಿಲ್ ಜಾಮಿಯಾ ನಿಜಾಮಿಯಾ, ಕಲಬುರಗಿ ಯಿಂದ ಹೊರ ಬರುತ್ತಿರುವ ಜುನುಬಿ ಹಿಂದ್ ಉರ್ದು ವಾರ ಪತ್ರಿಕೆ ಸಂಪಾದಕ ಮೌಲಾನಾ ಮೊಹಮ್ಮದ್ ಮೋಹಸೀನ್ ಖಲೀಲಿ ಖಾದ್ರಿ ಈ ಮೂವರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿ ಇದ್ದಾರೆ.
More Stories
ಲೋಕಾಯುಕ್ತ ಬಲೆಗೆ ಬಿದ್ದ ಸಹಕಾರ ಇಲಾಖೆ ಉಪನಿಬಂಧಕ ದಸ್ತಗೀರ್ ಅಲಿ
ಲೋಕಾಯುಕ್ತ ಬಲೆಗೆ ಬಿದ್ದ ಸಹಕಾರ ಇಲಾಖೆ ಉಪನಿಬಂಧಕ ದಸ್ತಗೀರ್ ಅಲಿ
ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಯಿಂದ ಜಾನಪದ ನೃತ್ಯ ವೈಭವದ ಸಮೂಹ ನೃತ್ಯ ಪ್ರದರ್ಶನ