23 December 2024

ಕೆ.ರಾಜಶೇಖರ ಹಿಟ್ನಾಳ ಗೆಲುವು ಖಚಿತ-ತಂಗಡಗಿ

ಕೆ.ರಾಜಶೇಖರ ಹಿಟ್ನಾಳ ಗೆಲುವು ಖಚಿತ-ತಂಗಡಗಿ

ಕೊಪ್ಪಳ : ಗಂಗಾವತಿಯಲ್ಲಿ ಇಕ್ಸಾಲ್ ಅನ್ಸಾರಿ ಹಾಗೂ ಎಚ್.ಆರ್.ಶ್ರೀನಾಥ ನಡುವೆ ಇರುವ ಮನಸ್ಥಾಪಗಳು ಈಗಿನವಲ್ಲ. ಇವು ಬಹಳ ದಿನಗಳಿಂದ ಇವೆ. ಎಲ್ಲರೂ ಸೇರಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದಾಗಿ ಮಾತು ಕೊಟ್ಟಿದ್ದಾರೆ. ಎಷ್ಟು ಸಭೆಗಳಾದರೂ ಏನೂ ಎಲ್ಲರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಗಳನ್ನೇ ಮಾಡುವುದು. ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನ ಮಾಡುತ್ತೇವೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲವು ಖಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಕೊಪ್ಪಳದ ಫಾರ್ಚೂನ ಹೋಟಲ್ ನ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಲೋಕಸಭಾ ಚುನಾವಣೆಯ ರಿಜಲ್ಟ್ ಮೇಲೆ ಯಾರ ತಲೆದಂಡವೂ ಆಗುವುದಿಲ್ಲ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲುವುದು ಖಚಿತ.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಇದೇ ಸಂದರ್ಭದಲ್ಲಿ
ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳನ್ನು ಸಚಿವ ಶಿವರಾಜ್ ತಂಗಡಗಿ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪುರ ಬಿಡುಗಡೆಗೊಳಿಸಿದರು.
೧೬ರಂದು ನಾಮಪತ್ರ ಸಲ್ಲಿಕೆ- ರಾಜ್ಯ ಮುಖಂಡರು ಭಾಗೀ ಎಂದು ಹೇಳಿದರು. ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷಾ, ಕೃಷ್ಣಾ ಇಟ್ಟಂಗಿ, ರೆಡ್ಡಿ ಶ್ರೀನಿವಾಸ,ಕಾಂಗ್ರೆಸ್ ಪಕ್ಷದ ಮುಖಂಡರಾದ ಪಾಲಾಕ್ಷಪ್ಪ ಗುಂಗಾಡಿ, ಶರಣಬಸವರೆಡ್ಡಿ, ಕೃಷ್ಣ ಗಲಬಿ ರವಿ ಕುರಗೋಡ ಸೇರಿದಂತೆ ಇತರರು ಉಪಸ್ಥಿತರಿದ್ದರು.