3 April 2025

ಕುದರಿಮೋತಿ ಪ್ರೀಮಿಯರ್ ಲೀಗ್(KPL)ಗೆ ಚಾಲನೆ

  • ಕುದರಿಮೋತಿ ಪ್ರೀಮಿಯರ್ ಲೀಗ್(KPL)ಗೆ ಚಾಲನೆ

ಕುಕನೂರು. ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಕೆ.ಪಿ.ಸಿ.ಸಿ ಕ್ರಿಕೆಟ್ ಕ್ಲಬ್ ವತಿಯಿಂದ ಮೂರನೇ ವರ್ಷದ ಹಾರ್ಡ್ ಟೆನ್ನಿಸ್ ಕ್ರಿಕೆಟ್ ಲೀಗ್ ರವಿವಾರ ಚಾಲನೆ ನೀಡಲಾಯ್ತು.

25 ಸಾವಿರ ನಗದು ನಗದು ಬಹುಮಾನದ ಲೀಗ್ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಮಾತನಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಫರೀದಾಬೇಗಂ ತಂಬಾಕದಾರ, ಕ್ರೀಡೆ ಮನುಷ್ಯನ ಜೀವನದ ಒಂದು ಅವಿಭಾಜ್ಯ ಅಂಗ ಇದ್ದಂತೆ, ಇವತ್ತು ಇಡೀ ಜಗತ್ತೇ ಅತೀ ಹೆಚ್ಚು ಮನೋರಂಜನಾತ್ಮಕವಾಗಿ ನೋಡುವ ಕ್ರೀಡೆ ಅಂದ್ರೆ ಅದು ಕ್ರಿಕೆಟ್. ಗಲ್ಲಿ ಕ್ರಿಕೆಟ್ ದಿಲ್ಲಿ ಕ್ರಿಕೆಟಿನ ಅಡಿಪಾಯವಾಗಿದೆ. ಹಾಗಾಗಿ ಗ್ರಾಮೀಣ ಭಾಗದ ಯುವಕರಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ. ಆ ನಿಟ್ಟಿನಲ್ಲಿ ಯುವಕರು ಹೆಚ್ಚಿನ ಮಟ್ಟದಲ್ಲಿ ಅಭ್ಯಾಸನಿರತರಾಗಿ ಜಿಲ್ಲಾಮಟ್ಟದಲ್ಲಿ ಗುರುತಿಸಿಕೊಳ್ಳುವ ಮೂಲಕ ನಮ್ಮ ಊರಿನ ಯುವಕರೂ ಮುಂದೊಂದು ದಿನ ರಾಜ್ಯಮಟ್ಟದಲ್ಲಿ ಆಡಲಿ ಎಂದು ಆಶಿಸಿದ್ರು.

ಇನ್ನು ಗ್ರಾಮದ ಹಿರಿಯರು, ಕ್ರೀಡಾಪ್ರೇಮಿಯೂ ಆಗಿರುವ ದಾನನಗೌಡ್ರು ಮಾತನಾಡಿ ಕ್ರೀಡೆ ದೈಹಿಕ ಮಾನಸಿಕ ಸದೃಢತೆಗೆ ಸಹಕಾರಿಯಾಗುತ್ತೆ. ಸಕ್ರೀಯವಾಗಿ ಕ್ರೀಡಿಯಲ್ಲಿ ತೊಡಗಿಕೊಂಡ್ರೆ ವಯಸ್ಸು ಆಗಿದೆ ಅಂತನೂ ಗೊತ್ತಾಗಲ್ಲ. ಹಾಗಾಗಿ ಕ್ರೀಡಾಮನೋಭಾವ ಬೆಳಸಿಕೊಳ್ಳುವುದು ಉತ್ತಮ ಎಂದ್ರು.

ಕ್ರಿಕೆಟ್ ಪಂದ್ಯಾವಳಿಗೆಯ ಉದ್ಘಾಟನಾ ಪಂದ್ಯ ಗ್ರಾಮದ ಬಿಜೆಪಿ ಮುಖಂಡ ದ್ಯಾಮಣ್ಣ ಉಚ್ಚಲಕುಂಟಿ ಒಡೆತನದ ಡ್ರೀಮ್ ಇಲೆವೆನ್ಸ್ ಮತ್ತು ಗ್ರಾ.ಪಂ ಉಪಾಧ್ಯಕ್ಷರಾದ ಲಕ್ಷ್ಮಿ ವಿಜಯಕುಮಾರ್ ದಾಸರ್ ಮಾಲಿಕತ್ವದ ಹನುಮದೂತ ತಂಡಗಳ ನಡುವೆ ನಡೆಯಿತು. ಲೀಗ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರಾದ ರವಿ ಕಟಗಿ, ಶರಣಯ್ಯ ಜಂಗಮರ್, ಯುವ ಮುಖಂಡರಾದ ಗವಿಸಿದ್ದಪ್ಪ ದೊಡ್ಡಮನಿ, ದ್ಯಾಮಣ್ಣ ಉಚ್ಚಲಕುಂಟಿ, ವಿಜಯಕುಮಾರ್ ದಾಸರ್, ಹುಸೇನ್ ಬಾಷಾ ಚನ್ನಾಳ್, ಪಂದ್ಯಾವಳಿ ಆಯೋಕರಾದ ಮಂಜುನಾಥ್ ಕನ್ಯಾಳ್, ಪ್ರಕಾಶ್ ಭಜಂತ್ರಿ, ಪ್ರಶಾಂತ್ ಸಜ್ಜನ್, ಶಿವಕುಮಾರ್ ಚೌಡ್ಕಿ, ಪಾಪು ಮಕಾನದಾರ್ ಸೇರಿದಂತೆ ಕ್ರೀಡಾಪ್ರೇಮಿಗಳು, ಗ್ರಾಮಸ್ಥರು ಭಾಗಿಯಾಗಿದ್ರು.