3 April 2025

ಕಿನ್ನಾಳ ಗ್ರಾಮದಲ್ಲಿ ಜನರ ಮನ ಸೆಳೆದ ಸಂಗೀತ ಸಂಭ್ರಮ.

 

ಕಿನ್ನಾಳ ಗ್ರಾಮದಲ್ಲಿ ಜನರ ಮನ ಸೆಳೆದ ಸಂಗೀತ ಸಂಭ್ರಮ

ಕೊಪ್ಪಳ: ಶ್ರೀ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ದ ಅಂಗವಾಗಿ ಅಭಿನವ ಕಲಾ ಸಂಗೀತ ಹಾಗೂ ಸಾಂಸ್ಕೃತಿಕ ಶಿಕ್ಷಣ ಸಂಸ್ಥೆಯ ಹಮ್ಮಿಕೊಂಡಿದ್ದ ಸಂಗೀತ ಸಂಭ್ರಮ ಕಾರ್ಯಕ್ರಮ ಜನರ ಮನ ಗೆದ್ದಿತು. ಪರಮ ಪೂಜ್ಯ ಶ್ರೀ ಗಳಾದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಮಠ ಮೈನಳ್ಳಿ ರವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡು. ಅರ್ಮೋನಿಯಂ ನುಡಿಸುವುದರ ಮೂಲಕ ಉದ್ಘಾಟನೆ,ಮಾಡಿದರು ಗ್ರಾಮದ ಹಿರಿಯರಾದ ಕಾಳಪ್ಪ ಮಾಸ್ತರ ಪತ್ತಾರ ರವರು ಕಾರ್ಯಕ್ರಮ ನಾಂದಿ ಹಾಡು ಹಾಡಿ ಚಾಲನೆ ನೀಡಿದರು ದೇವಾಂಗ ಮಠದ ಶ್ರೀ ಶಂಕರಾನಂದ ಸ್ವಾಮಿಗಳು ಗ್ರಾಮ ಪಂಚಾಯತ್ ಅಧ್ಯಕ್ಷರು ಸ್ವೇತಾ ರಾಘವೇಂದ್ರ ಡಂಬಳ್ ರವರು ಅಧ್ಯಕ್ಷತೆ ವಹಿಸಿಕೊಂಡಿದ್ದರು ಅನಿಲ್ ಕುಮಾರ ಬೋರಟ್ಟಿ, ಬಸುವರಾಜ ಚೀಲವಾಡಗಿ,ವಿರೇಶ ತಾವರಗೇರಿ, ದೇವಪ್ಪ ಹಳ್ಳಿಕೇರಿ, ಹಲವಾರು ಯುವ ಮುಖಂಡರು ಹಿರಿಯರು ಪಾಲ್ಗೊಂಡು ವೇದಿಕೆ ಕಾರ್ಯಕ್ರಮ ಯೆಶಸ್ವಿ ಗೊಳಿಸಿದರು ಸಂಗೀತ ಸಂಭ್ರಮ ಪ್ರಾರಂಭದಲ್ಲಿ ಮಾರುತಿ ಬಿನ್ನಾಳ ರವರಿಂದ ಶಾಸ್ತಿಯ ಸಂಗೀತ ನಾಗರಾಜ ಶಾವಿ ರವರ ಬಾನ್ಸುರಿ ವಾದನ ಜನರ ಮನ ಸೆಳೆಯಿತು ಸಂಗು ಹಿರೇಮಠ ಪೂರ್ಣಿಮಾ ತಾವರಗೇರಿ ಯವರು ಸುಗಮ ಸಂಗೀತ ಮತ್ತು ಜಾನಪದ ಸಂಗೀತ ಮತ್ತು ಮಂಗಳೂರಿನಿಂದ ಆಗಮಿಸಿದ ವಿಜಯಲಕ್ಷ್ಮಿ ರವರ ಭರತ ನಾಟ್ಯ ಅತ್ಯಂತ ಯಶಸ್ವಿಯಾಗಿ ನಟಿಸಿದರು.ನಂತರ ವಿವಿಧ ಮನೋರಂಜನೆ ಕಾರ್ಯಕ್ರಮಗಳು ಜರುಗಿದವು.