23 December 2024

ಕಳವು: 2 ಆರೋಪಿಗಳ ಬಂಧನ ಕಳುವಾದ ಆಭರಣ ಪತ್ತೆ.

ಕಳವು: 2 ಆರೋಪಿಗಳ ಬಂಧನ ಕಳುವಾದ ಆಭರಣ ಪತ್ತೆ.

ಹೊಸಪೇಟೆ:(ವಿಜಯನಗರ) ಜು-31.ಎಂ.ಜೆ.ನಗರದಲ್ಲಿ ಶ್ರೀಮತಿ ತ್ರಿವೇಣಿ ಎನ್ನುವರ ಮನೆಯಲ್ಲಿ ಹಗಲು ವೇಳೆಯಲ್ಲಿ ಬಂಗಾರದ ಆಭರಣ ಕಳುವು ಮಾಡಿದ ಪ್ರಕರಣವನ್ನು ಹೊಸಪೇಟೆ ಬಡಾವಣೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕೊಂಡು ತನಿಖೆ ಕೈಗೊಳ್ಳಲಾಗಿತ್ತು. 

ಈ ಪ್ರಕರಣವನ್ನು 15 ದಿನಗಳಲ್ಲಿ ಭೇಧಿಸಿ ಆರೋಪಿಗಳನ್ನು ಪತ್ತೆ ಮಾಡಿ ಮಣಿಪುರಂ ಫೈನಾನ್ಸ್ ನಲ್ಲಿ ಒತ್ತೆ ಇಟ್ಟಿದ್ದ 30 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಜಪ್ತಿ ಮಾಡಿಕೊಂಡು, ಆರೋಪಿಗಳಿಂದ ಒಟ್ಟು ರೂ. 7,50,000 ಮೌಲ್ಯದ 120 ಗ್ರಾಂ ಬಂಗಾರದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸಿ ಘನ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ಈ ಸಂದರ್ಭದಲ್ಲಿ ಬಿ.ಎಲ್ ಶ್ರೀಹರಿಬಾಬು. ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು,ಸಲೀಂ ಪಾಷಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು.ಟಿ ಮಂಜುನಾಥ್ ಡಿ.ಎಸ್.ಪಿ, ಹೊಸಪೇಟೆ ಇವರ ಮಾರ್ಗದರ್ಶನದಲ್ಲಿ ಕ್ರಮ ಕೈಗೊಂಡಿದ್ದರು. ಪತ್ರಿಕಾಗೋಷ್ಠಿಯಲ್ಲಿ ಯಶಸ್ವಿಯಾಗಿ ಈ ಪ್ರಕರಣವನ್ನು ಭೇಧಿಸಿದ ಮಹಮ್ಮದ್ ಗೌಸ್ ಸಿ.ಪಿ.ಐ ಮತ್ತು ಇವರ ಸಿಬ್ಬಂದಿಗಳಿಗೆ ಪ್ರಶಂಸಿದರು.