23 December 2024

ಕರುನಾಡ ಯುವ ಪಡೆ ಮತ್ತಷ್ಟು ಬಲಿಷ್ಠ – ಕೆ ಎಂ ಹಳ್ಳಿ

ಕರುನಾಡ ಯುವ ಪಡೆ ಮತ್ತಷ್ಟು ಬಲಿಷ್ಠ – ಕೆ ಎಂ ಹಳ್ಳಿ

ಕೊಪ್ಪಳ : ಕರುನಾಡು ಯುವ ಪಡೆ ವೇದಿಕೆಗೆ ಸೇರ್ಪಡೆಗೊಂಡ ಹೋರಾಟಗಾರರಿಗೆ ಕರ್ನಾಟಕ ಪರಿಸರ ರತ್ನ ಪುರಸ್ಕೃತರು ಹಾಗೂ ರಾಜ್ಯಾಧ್ಯಕ್ಷರಾದಂತ ಕೆ ಎಮ್ ಹಳ್ಳಿಯವರು ತಾಲೂಕು ಮತ್ತು ಜಿಲ್ಲಾ ಹಾಗೂ ರಾಜ್ಯಮಟ್ಟದ ಪದವಿ ಪದಗ್ರಹಣ ಆದೇಶ ಪತ್ರವನ್ನು ಹೊರಡಿಸಿ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಕೆಎಂ ಹಳ್ಳಿಯವರು ಭ್ರಷ್ಟಾಚಾರದಲ್ಲಿ ಮುಳುಗಿರುವ ಕೊಪ್ಪಳ ಜಿಲ್ಲೆಯ ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ಬುದ್ಧಿ ಕಲಿಸಬೇಕೆಂದು ಈ ಯುವ ಪಡೆ ಕಟ್ಟುತ್ತಿದ್ದೆನೆ ಎಂದು ನೂತನವಾಗಿ ಸೇರ್ಪಡೆಯಾದ ಯುವಕರಿಗೆ ಕಿವಿ ಮಾತನ್ನು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರು ಕರ್ನಾಟಕ ಪರಿಸರ ರತ್ನ ಪುರಸ್ಕೃತ ಕೆ ಎಮ್ ಹಳ್ಳಿ ಜಿಲ್ಲಾಧ್ಯಕ್ಷರು ಫಕೀರೇಶ ಬಾರಕೇರ, ಜಿಲ್ಲಾ ಉಪಾಧ್ಯಕ್ಷ ದುರ್ಗರಾಜ್ ಗಂಟಿ ಹನುಮಂತಪ್ಪ ಮಾರುತಿ ದಾದಾಪೀರ್ ಆರ್ ಎನ್ ಇಸ್ಮಾಯಿಲ್ ರಾಜ್ಯ ಉಪಾಧ್ಯಕ್ಷರು ಸಿದ್ದಪ್ಪ ಶಿವರಾಜ್ ಎಲ್ಲಪ್ಪ ನಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.