4 April 2025

ಅಡವಿ ಔಡಲ ಕಾಯಿ ತಿಂದು 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ: ಮುಖ್ಯೋಪಾಧ್ಯ ಶಿವಾನಂದ ಆರ್ಯರು  ಹಾಗೂ ಶಿಕ್ಷಕರ ಬೇಜವಾಬ್ದಾರಿಂದ ಮಕ್ಕಳು ಅಸ್ತವ್ಯಸ್ತ

  1. ಅಡವಿ ಔಡಲ ಕಾಯಿ ತಿಂದು 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ: ಮುಖ್ಯೋಪಾಧ್ಯ ಶಿವಾನಂದ ಆರ್ಯರು  ಹಾಗೂ ಶಿಕ್ಷಕರ ಬೇಜವಾಬ್ದಾರಿಂದ ಮಕ್ಕಳು ಅಸ್ತವ್ಯಸ್ತ

ಕೋನಾಪೂರ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಘಟನೆ 

ಯುವ ಜಾಗೃತಿ ನ್ಯೂಸ್ ಕೊಪ್ಪಳ 

ಕುಕುನೂರು. ಕೋನಾಪೂರ್ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಒಟ್ಟು 72 ವಿದ್ಯಾರ್ಥಿಗಳು ಶಾಲೆ ಮೂರು ಗಂಟೆ ಸುಮಾರಿಗೆ ಶಾಲೆಯ ಅಂಗಳದಲ್ಲಿ ಆಟವಾಡುವಾಗ ಶಾಲಾ ಆವರಣದಲ್ಲಿ ಬೆಳೆದ ಅಡವಿ ಔಡಲ ಕಾಯಿಯನ್ನು ತಿಂದು ಶಾಲೆಯ ಮೂರು ಮತ್ತು ನಾಲ್ಕನೇ ತರಗತಿಯ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥವಾದ ಘಟನೆ ಶನಿವಾರ ನಡೆದಿದೆ. ಶಾಲೆಯ ಸಮಯದಲ್ಲಿ ಮಧ್ಯಾಹ್ನ ದಿಂದ ಶಾಲೆ ವೇಳೆ ಮಕ್ಕಳು ಆವರಣದಲ್ಲಿ ಆಟವಾಡುತ್ತಿದ್ದಾಗ ಅಡವಿ ಔಡಲ ಕಾಯಿಯನ್ನು ತಿಂದಿದ್ದಾರೆ ಇದರಿಂದ ಮಕ್ಕಳಿಗೆ ಆರೋಗ್ಯದಲ್ಲಿ ವ್ಯತ್ಯಾಸ ಆಗಿದೆ. ಶಾಲೆಯ ಶಿಕ್ಷಕರು ವಿದ್ಯಾರ್ಥಿ ಏನು ಮಾಡುತ್ತಿದ್ದಾರೆ ಎಂದು ವಿಚಾರಿಸದೆ ತಮ್ಮ ಪಾಡಿಗೆ ತಾವು ಸುಮ್ಮನೆ ಇದ್ದಿದ್ದಕ್ಕೆ ಈ ಘಟನೆ ಕಾರಣವಾಗಿದೆ ಶಿಕ್ಷಕರ ಬೇಜವಾಬ್ದಾರಿತನ ಎದ್ದು ಕಾಣುತ್ತದೆ ಪಾಲಕರ ಆರೋಪವಾಗಿದೆ.

ವಿದ್ಯಾರ್ಥಿಗಳನ್ನು ಆಟವಾಡಲು ಬಿಟ್ಟಾಗ ವಿದ್ಯಾರ್ಥಿಗಳು ಏನು ಚಲನವಲನ ಬಗ್ಗೆ ಶಿಕ್ಷಕರಾದವರು ಜಾಗೃತಿಯಿಂದ ಇರಬೇಕು ಅದನ್ನು ಬಿಟ್ಟು ವಿದ್ಯಾರ್ಥಿಗಳನ್ನು ಆಟಕ್ಕೆ ಬಿಟ್ಟು ತಾವು ಏನು ಮಾಡುತ್ತಾರೆ ಎಂಬ ಪ್ರಶ್ನೆ ಪಾಲಕರಲ್ಲಿ ಮೂಡಿದೆ. ಪಾಲಕರು ಮಕ್ಕಳಲ್ಲಿ ಕಂಡುಬಂದ ವಾಂತಿ ಭೇದಿ ಕಂಡು ಕುಕುನೂರು ಸರಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಪಾಲಕರು ಸಹ ಗಾಬರಿಯಾಗಿ ಶಾಲೆ ಅಂಗಳದಲ್ಲಿ ಬೆಳೆದ ಔಡಲ ಗಿಡದ ವಾಲೆ ಮತ್ತು ಕಾಯಿಯನ್ನು ಕೈಲಿ ಹಿಡಿದು ಆಸ್ಪತ್ರೆಯವರೆಗೂ ತಂದಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾದ ಮಕ್ಕಳನ್ನು ವಿಚಾರಿಸಿದಾಗ ಶಾಲೆ ಆವರಣದಲ್ಲಿ ಬೆಳೆದ ಕಾಯೇ ತಿಂದಿದ್ದೇವೆ ಎಂದು ಮಕ್ಕಳು ಹೇಳಿದರು       

ಭಾವನ ಹಾಗೂ ಮಂಗಳೂರಿನ ಮಕ್ಕಳ ತಜ್ಞ ಮಂಜುನಾಥ್ ಕೊಕ್ಕದ ಚಿಕಿತ್ಸೆ ಮಾಡಿದರು. ಆರು ಮಕ್ಕಳ ಸ್ಥಿತಿ ಚಿಂತಾ ಜನಕವಾಗಿದೆ. ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗುವುದು ಎಂದು ವೈದ್ಯಧಿಕಾರಿ ಮಂಜುನಾಥ್ ಮಾಹಿತಿ ನೀಡಿದರು. ಶಾಲೆಯಲ್ಲಿ ಇಬ್ಬರು ಶಿಕ್ಷಕರ ಓರ್ವ ಹೆಡ್ ಮಾಸ್ಟರ್ ಶಿವಾನಂದ್ ಆರ್ಯರ ಇವರನ್ನು ಪತ್ರಿಕೆ ಪ್ರಶ್ನಿಸಿದಾಗ ತಡ ಬಡಿಸಿ ಉತ್ತರ ಕೊಡುತ್ತಾರೆ. ಕೋನಾಪುರ್ ಗ್ರಾಮಸ್ಥರು ಹೆಡ್ ಮಾಸ್ಟರ್ ನ ವರ್ತನೆಗೆ ಬೇಸತ್ತು ಹೋಗಿದ್ದಾರೆ. ಪಾಲಕರು ತಿಮ್ಮನ ಗೌಡ್ರು ಹೇಳುತ್ತಾರೆ ಶಿವಾನಂದ್ ಆರ್ಯರ ಹೆಡ್ ಮಾಸ್ಟರ್ ಯಾವಾಗಲೂ ಬಾಯಲ್ಲಿ ಎಲೆ ಅಡಿಕೆ ಹಾಕಿರುತ್ತಾರೆ. ಕಿಟಗಿಗೆ ಉಗುಳಿದ ದುರ್ವಾಸನೆ ಹಾಗೆ ಬರುತ್ತೆ ಇವರು ವಿದ್ಯಾರ್ಥಿಗಳಿಗೆ ಹೇಗೆ ಪಾಠ ಮಾಡುತ್ತಾರೆ ಇವರನ್ನು ಇಲ್ಲಿಂದ ಯೆತ್ತಂಗಡಿ ಮಾಡಿ ಎಂದು ಪಾಲಕರ ಕೂಗು ಕೇಳಿ ಬಂದಿತು. 

ಮುಖ್ಯೋಪಾಧ್ಯ ಶಿವಾನಂದ ಆರ್ಯರು 

………………………………………………………………..

ನೌಕರ ಸಂಘದ ಅಧ್ಯಕ್ಷನ ಹೇಳಿಕೆ ಪಾಲಕರನ್ನು ಕೆರಳಿಸಿತು.

ಮುಖ್ಯ ಶಿಕ್ಷಕನಿಗೆ ಮಾಧ್ಯಮದವರು ಮಧ್ಯಾಹ್ನ ಬಿಸಿಯೂಟ ಸರಿಯಾಗಿತ್ತಾ ಎಂದು ಕೇಳಿದಾಗ ಅನ್ನ ಸಾಂಬಾರ್ ನೀಡಿದ್ದೇವೆ ಎಂದು ಹೇಳಿದರು ಈ ವೇಳೆ ಪಾಲಕರು ಅನ್ನ ಸಾಂಬಾರಿನಲ್ಲಿ ಏನಾದರೂ ಹಾಕಿದ್ದೀರಾ ಎಂದು ಕೇಳಿದಾಗ ಸ್ಥಳದಲ್ಲಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಮಹೇಶ್ ಸಬರದ ಅನ್ನ ಸಾಂಬರ್ ನಲ್ಲಿ ಟಿಕ್ 20 ಹಾಕಿದ್ದರು ಎಂದು ಗರ್ವದ ನುಡಿಗಳ ನಾಡಿದ್ದು ಸ್ಥಳದಲ್ಲಿದ್ದ ಪಾಲಕರನ್ನು ಕೆರಳಿಸುವಂತೆ ಮಾಡಿತು. ಪಾಲಕರು ಸಬರದದನ್ನು ತರಟೆಗೆ ತೆಗೆದುಕೊಂಡ ಘಟನೆ ಆಸ್ಪತ್ರೆ ಆವರಣದಲ್ಲಿ ಜರುಗಿತು. ಆಗ ಪಿಎಸ್ಐ ಟಿ ಗುರುರಾಜ್ ಬಂದು ಸಬರದನನ್ನು ಕಂಪೌಂಡ್ ದಿಂದ ಆಚೆ ಕಳುಸಿ ತಿಳಿಗೊಳಿಸಿದರು.

………………………………………………………………..

ಕೋನಾಪೂರ ಶಾಲೆಯ ಮಕ್ಕಳು ಶಾಲೆ ಅವರಣದಲ್ಲಿ ಬೆಳೆದ ಔಡಲ ಕಾಯಿಯನ್ನು ತಿಂದು ಅಸ್ವಸ್ಥರಾಗಿದ್ದು ಯಾವುದೇ ರೀತಿಯ ತೊಂದರೆ ಇಲ್ಲ ಮಕ್ಕಳ ಆರೋಗ್ಯ ಸುಧಾರಣೆ ಬಗ್ಗೆ ಕಾಳಜಿ ವಹಿಸಿದ್ದೇವೆ. ಹೆಚ್ಚುವರಿ ಮಕ್ಕಳ ವೈದ್ಯರನ್ನು ಸಹ ಸ್ಥಳದಲ್ಲೇ ನೇಮಿಸಿದ್ದೇವೆ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳಲಾಗಿದೆ.

ಲಿಂಗರಾಜ್ ಡಿಎಚ್ಒ ಕೊಪ್ಪಳ.

………………………………………………………………..