ಪತ್ರಕರ್ತರ ರಾಜ್ಯ ಮಟ್ಟದ ದತ್ತಿನಿಧಿ “ವಿಶೇಷ ಪ್ರಶಸ್ತಿ”ಗೆ ಶಿವರಾಜ್ ನುಗಡೋಣಿ ಆಯ್ಕೆ
ಕೊಪ್ಪಳ: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ರಾಜ್ಯ ಮಟ್ಟದ ಈ ವರ್ಷದ ವಿಶೇಷ ಪ್ರಶಸ್ತಿಗೆ ಪ್ರಜಾ ಪ್ರಪಂಚ ಜಿಲ್ಲಾ ವರದಿಗಾರ ಶಿವರಾಜ್ ನುಗಡೋಣಿ ಅವರು ಆಯ್ಕೆಯಾಗಿದ್ದಾರೆ.
ಪತ್ರಿಕಾರಂಗದಲ್ಲಿನ ವೃತ್ತಿ ಸೇವೆ, ಸಾಮಾಜಿಕ ಬದ್ಧತೆ ಮತ್ತು ಸಾಧನೆಗಳಿಗಾಗಿ ಕೆಯುಡಬ್ಲ್ಯುಜೆ ಈ ದತ್ತಿನಿಧಿ ವಿಶೇಷ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಿದೆ. ಪ್ರಾದೇಶಿಕ ಹಾಗೂ ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲಿ ವರದಿಗಾರರಾಗಿ ಸುಮಾರು 20 ವರ್ಷಗಳ ಕಾಲ ಶಿವರಾಜ್ ನುಗಡೋಣಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷರಾಗಿ ಜಿಲ್ಲಾ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದಾರೆ.
ಮಾರ್ಚ್ 9 ರಂದು ಕೊಪ್ಪಳ ನಗರದ ಕಠಾರೆ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಪ್ರಶಸ್ತಿ ಸಮಾರಂಭದಲ್ಲಿ ಶಿವರಾಜ್ ನುಗಡೋಣಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾದ ಶಿವರಾಜ್ ನುಗಡೋಣಿಯವರನ್ನು ವಿವಿಧ ಸಂಘ- ಸಂಸ್ಥೆಗಳು ಅಭಿನಂದಿಸಿವೆ.
More Stories
ಕುದರಿಮೋತಿ ಪ್ರೀಮಿಯರ್ ಲೀಗ್(KPL)ಗೆ ಚಾಲನೆ
ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದ ಪಾಯೋನಿಯರ್ ಶಾಲೆಯ ವಿದ್ಯಾರ್ಥಿ ಸಾಕ್ಷಿ ಹುಡೇದ್
ಗೊಂದಲದ ಮದ್ಯೆಯು ಕುತೂಹಲ ಮೂಡಿಸಿದ ಚುನಾವಣೆ