ಉಮೇಶ ಪೂಜಾರಗೆ ಕರ್ನಾಟಕ ವಿಭೂಷಣ ಪ್ರಶಸ್ತಿ
ಕೊಪ್ಪಳ : ಸುರ್ವೆ ಕಲ್ಚರಲ್ ಅಕಾಡೆಮೆ (ರಿ) ವತಿಯಿಂದ ಬೆಂಗಳೂರಿನ ನಯನ ಸಭಾಂಗಣದಲ್ಲಿ ದಿನಾಂಕ ೨೭ ರಂದು ಅಖಿಲ ಭಾರತ ಕನ್ನಡ ಕವಿಗಳ ಸಮ್ಮೇಳನ, ಕರ್ನಾಟಕ ಸಾಂಸ್ಕೃತಿಕ ಪರಂಪರೆಗೆ ಕನ್ನಡದ ಮಹಾಕಾವ್ಯಗಳ ಕೊಡುಗೆ ವಿಚಾರ ಸಂಕಿರಣ, ಅಖಿಲ ಭಾರತ ಕನ್ನಡ ಕವಿಗಳ ಕಾವ್ಯ ಪರಿಷತ್ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಂದು ಭಾರತದ ಮಾಜಿ ಪ್ರಧಾನ ಮಂತ್ರಿ ಶ್ರೀ ಮನಮೋಹನ ಸಿಂಗ್ ನಿಧನದಿಂದ ಶೋಕಾಚರಣೆ ಕಾರಣ ದಿಂದ ಕಾರ್ಯಕ್ರಮವನ್ನು ರದ್ದುಪಡಿಸಲಾಗಿತ್ತು.
ಸುರ್ವೆ ಕಲ್ಚರಲ್ ಅಕಾಡೆಮಿ ವತಿಯಿಂದ ಇಂದು ಕೊಪ್ಪಳದಲ್ಲಿ ಛಾಯಾಗ್ರಾಹಕ ಉಮೇಶ ಪೂಜಾರಗೆ `ಕರ್ನಾಟಕ ವಿಭೂಷಣ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷರಾದ ರಮೇಶ ಸುರ್ವೆ, ಅಖಿಲ ಭಾರತ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷರಾದ ಜಿ.ಎಸ್.ಗೋನಾಳ ಪತ್ರಕರ್ತರಾದ ಶಿವರಾಜ ನುಗುಡೋಣಿ, ಫಕೀರಪ್ಪ ಗೋಟೂರು, ಪ್ರಭು ಗಾಳಿ, ತಾಜ್‌ಪಾಶಾ ಮಕಾಂದರ ಉಪಸ್ಥಿತರಿದ್ದರು.
More Stories
ಕಿನ್ನಾಳ ಗ್ರಾಮದಲ್ಲಿ ಜನರ ಮನ ಸೆಳೆದ ಸಂಗೀತ ಸಂಭ್ರಮ.
ಅಕ್ಷರ ಜ್ಞಾನಕ್ಕಿಂತ ಅರಿವಿನ ಜ್ಞಾನವೇ ಶಿಕ್ಷಣ : ಗವಿಶ್ರೀ
ಪ್ರಾಥಮಿಕ ಹಂತದ ಶಿಕ್ಷಣದಲ್ಲಿಯೇ ಸಹಕಾರಿ ಆಂದೋಲನದಮಾಹಿತಿ ತಿಳಿಸಬೇಕು – ಸಹಕಾರ ಸಚಿವ ಕೆ.ಎನ್.ರಾಜಣ್ಣ