21 March 2025

ಅಂಬೇಡ್ಕರ್ ಕುರಿತ ಅಮಿತ್​ ಶಾ ಹೇಳಿಕೆ ಖಂಡನೆ : ಗಾಳೆಪ್ಪ ಎಚ್ ಪೂಜಾರ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡನೆ ಗಾಳೆಪ್ಪ ಎಚ್ ಪೂಜಾರ

ದಲಿತ ಸಮುದಾಯಗಳಿಗೆ ಕ್ಷಮೆ ಯಾಚಿಸಬೇಕು, ಕೇಂದ್ರ ಸಂಪುಟದಿಂದ ವಜೆಗೊಳಿಸಬೇಕು

ಕೊಪ್ಪಳ : ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ಅವರ ಬಗ್ಗೆ ಅಪಹಾಸ್ಯ ಮಾಡಿದ ದೇಶದ ಗೃಹ ಮಂತ್ರಿ ಅಮಿತ್ ಶಾ ಅವರು ಎಲ್ಲಾ ದಲಿತ ಸಮುದಾಯಗಳಿಗೆ ಕ್ಷಮೆ ಯಾಚಿಸಬೇಕು ಹಾಗೂ ಅವರನ್ನು ಕೇಂದ್ರ ಸಂಪುಟದಿಂದ ವಜೆಗೊಳಿಸಬೇಕು ಎಂದು ಎಸ್ ಸಿ ಘಟಕದ ಜಿಲ್ಲಾಧ್ಯಕ್ಷರದ ಗಾಳೆಪ್ಪ ಎಚ್ ಪೂಜಾರ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಕೇಂದ್ರ ಸರ್ಕಾರದ ಗೃಹ ಸಚಿವರಾದ ಅಮಿತ್ ಶಾ ಅವರು ಸಂಸತ್ ಅಧಿವೇಶನದಲ್ಲಿ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಎಂದು ಹೇಳುವುದು ಒಂದು ಪ್ಯಾಶನ್ ಆಗಿಬಿಟ್ಟಿದೆ ಕಾಂಗ್ರೆಸ ಪಕ್ಷದ ನಾಯಕರಿಗೆ ಅಂಬೇಡ್ಕರ್ ಅವರ ಬದಲಿಗೆ ದೇವರ ಹೆಸರನ್ನು ತೆಗೆದುಕೊಂಡಿದ್ದರೆ ಏಳು ಜನ್ಮಕ್ಕೆ ಆಗುವಷ್ಟು ಸ್ವರ್ಗ ಸ್ಥಾನ ಸಿಗುತಿತ್ತು ಎಂಬ ಹೇಳಿಕೆ ಬಹಳ ಖಂಡನೀಯವಾಗಿರುತ್ತದೆ. ಅದೇ ಸಂವಿಧಾನದ ಅಡಿಯಲ್ಲಿ ಚುಣಾಯಿಸಿ ಗೃಹ ಸಚಿವರಾಗಿರುವುದನ್ನು ಮರೆತಿರುವಂತಿದೆ. ದೇಶದ ಗೌರವಾನಿತ್ವ ರಾಷ್ಟ್ರಪತಿಗಳು ಹಾಗೂ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಇವರನ್ನು ತಕ್ಷಣ ತಮ್ಮ ಮಂತ್ರಿ ಮಂಡಳದಿಂದ ಇಳಿಸಿ ಸಂವಿಧಾನದ ಅಡಿಯಲ್ಲಿ ಚುನಾಯಿತ (ಸಂಸದ) ಸ್ಥಾನದಿಂದ ವಜಾಗೊಳಿಸಬೇಕೆಂದು. ಕೆಪಿಸಿಸಿ ಜಿಲ್ಲಾ ಮಾಧ್ಯಮ ವಕ್ತರರಾದ ಪರಶುರಾಮ್ ಕೆರೆಹಳ್ಳಿ, ಎಸ್ಸಿ ಘಟಕದ ತಾಲೂಕ ಅಧ್ಯಕ್ಷರಾದ ಕಾವೇರಿ ರಾಗಿ ಅವರು ಮತ್ತು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಎಸ್ ಸಿ ಘಟಕದ ಎಲ್ಲಾ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.